Advertisement

ಸೀತಾರಾಮ್‌ ಎಂದು ಬರೆದ ಪುಸ್ತಕಗಳೇ ಠೇವಣಿ-ಮಂದಿರ ಲೋಕಾರ್ಪಣೆ ಬಳಿಕ ದುಪ್ಪಟ್ಟಾದ ಖಾತೆ ಸಂಖ್ಯೆ

12:34 AM Feb 12, 2024 | Team Udayavani |

ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಒಂದು ವಿಶಿಷ್ಟವಾದ ಬ್ಯಾಂಕ್‌ ಇದೆ. ಇಲ್ಲಿ ಹಣದ ವಹಿವಾಟಿಗೆ ಜಾಗವಿಲ್ಲ. ಶುದ್ಧ ಭಕ್ತಿ, ನಂಬಿಕೆ, ಶಾಂತಿ ಮತ್ತು ಆಧ್ಯಾತ್ಮಿಕತೆಗೆ ಮಾತ್ರ ಅವಕಾಶ. ಅಂತಾರಾಷ್ಟ್ರೀಯ ಶ್ರೀ ಸೀತಾರಾಮ್‌ ಬ್ಯಾಂಕ್‌ನಲ್ಲಿ 35,000ಕ್ಕೂ ಹೆಚ್ಚು ಖಾತೆದಾರರು ಇದ್ದಾರೆ. ಅಯೋಧ್ಯೆ­ಯಲ್ಲಿ ರಾಮಮಂದಿರ ಲೋಕಾರ್ಪಣೆ­ಯಾದ ಅನಂತರ ಈ ಬ್ಯಾಂಕ್‌ನಲ್ಲಿ ಖಾತೆದಾರರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ.

Advertisement

“ಸೀತಾರಾಮ್‌’ ಎಂದು ಬರೆದಿರುವ ಕಿರುಪುಸ್ತಕಗಳೇ ಇಲ್ಲಿರುವ ಠೇವಣಿ­ಗಳು. ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಕೆನಡಾ, ನೇಪಾಲ, ಫಿಜಿ, ಯುಎಇ ಮತ್ತು ಇತರ ದೇಶಗಳ ಭಕ್ತರು ಕೂಡ ಇಲ್ಲಿ ಖಾತೆಗಳನ್ನು ತೆರೆಯುತ್ತಿದ್ದಾರೆ. ಶ್ರೀರಾಮನ ಭಕ್ತರಿಂದ 20,000 ಕೋಟಿ “ಸೀತಾರಾಮ್‌’ ಕಿರುಪುಸ್ತಕಗಳು ಬ್ಯಾಂಕ್‌ನ ಸಂಗ್ರಹ ದಲ್ಲಿದೆ. ಮಂದಿರ ಟ್ರಸ್ಟ್‌ ಮುಖ್ಯಸ್ಥರಾದ ಮಹಾಂತ್‌ ನೃತ್ಯ ಗೋಪಾಲ್‌ ದಾಸ್‌ 1970ರಲ್ಲಿ ಈ ಬ್ಯಾಂಕ್‌ ಅನ್ನು ಸ್ಥಾಪಿಸಿ ದ್ದರು. ಭಕ್ತರು ಇಲ್ಲಿಯವರೆಗೂ ಒಟ್ಟು 1.37 ಕೋಟಿ ರಾಮ ನಾಮ ಬರೆದು ಸಮರ್ಪಿಸಿದ್ದಾರೆ. “ಬ್ಯಾಂಕ್‌ ವತಿಯಿಂ ದ ಉಚಿತವಾಗಿ ಕಿರುಪುಸ್ತಕಗಳು, ಪೆನ್‌ಗಳನ್ನು ಒದಗಿಸಲಾಗುತ್ತದೆ. ಖಾತೆ ತೆರೆಯಬೇಕಾದರೆ ಭಕ್ತರು ಕನಿಷ್ಠ 5 ಲಕ್ಷ ಬಾರಿ “ಸೀತಾರಾಮ್‌’ ಎಂದು ಬರೆಯಬೇಕು. ದೇಶ-ವಿದೇಶದಲ್ಲಿ ಬ್ಯಾಂಕ್‌ನ ಒಟ್ಟು 136 ಶಾಖೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next