Advertisement

ಪುಸ್ತಕ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿ

07:25 AM Mar 06, 2019 | |

ಚಿಂತಾಮಣಿ: ಮಕ್ಕಳ ಭವಿಷ್ಯಕ್ಕೆ ಮತ್ತು ಸಮಾಜಕ್ಕೆ ಬೇಕಾಗಿರುವ ಜ್ಞಾನವನ್ನು ಲೇಖಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪರವರು ಬರೆದ ಹಚ್ಚಿಟ್ಟ ದೀಪ-ಅಂಕಣ ಬರಹಗಳು ಪುಸ್ತಕದ ಮೂಲಕ ತಿಳಿಸಿದ್ದಾರೆ ಎಂದು ಎಇಇ ತುಳವನೂರು ಟಿ.ಎನ್‌.ಸುಧಾಕರರೆಡ್ಡಿ ಹೇಳಿದರು. 

Advertisement

ತಾಲೂಕಿನ ತುಳವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದ ಸ್ವಾತಂತ್ರ ಯೋಧ ಟಿ.ಕೆ.ಗಂಗಿರೆಡ್ಡಿ ಶಾಲಾ ರಂಗಮಂಟಪದಲ್ಲಿ ಟಿ.ಕೆ.ಗಂಗಿರೆಡ್ಡಿ ಮೊಮೋರಿಯಲ್‌ ಟ್ರಸ್ಟ್‌, ಬೆಂಗಳೂರಿನ ಸೃಷ್ಠಿ ಪ್ರಕಾಶನ, ಚಿಂತಾಮಣಿ ಗೆಜ್ಜೆ ಸದ್ದು ಸಾಂಸ್ಕೃತಿಕ ಕಲಾತಂಡ ವತಿಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ದಿಬ್ಬಣದಲ್ಲಿ ಲೇಖಕ ಮೂಡಲಗೊಲ್ಲಹಳ್ಳಿಯವರ ಹಚ್ಚಿಟ್ಟ ದೀಪ-ಅಂಕಣಬರಹಗಳು ಕೃತಿಯ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕ ನರಸಿಂಹಪ್ಪ ಮಾತನಾಡಿ, ಮಕ್ಕಳ ಭವಿಷ್ಯಕ್ಕೆ ಮತ್ತು ಸಮಾಜಕ್ಕೆ ಬೇಕಾಗಿರುವ ಜ್ಞಾನವನ್ನು ಪುಸ್ತಕದ ಮೂಲಕ ತಿಳಿಸಿದ್ದಾರೆ.  ನಮ್ಮ ಗ್ರಾಮ ತಾಲೂಕು ಮತ್ತು ರಾಜ್ಯದ ಗಡಿಭಾಗದಲ್ಲಿ ಇದ್ದು ಇಂತಹ ಗ್ರಾಮದ ಚರಿತ್ರೆಯೂ ಈ ಪುಸ್ತಕದಲ್ಲಿರುವುದು ಸಂತೋಷದ ವಿಚಾರ. ಈ ಪುಸ್ತಕ ಪ್ರತಿ ಶಾಲೆಯ ಗ್ರಂಥಾಲಯಕ್ಕೂ ಉಚಿತವಾಗಿ ನೀಡುತ್ತಿದ್ದೇನೆ ಎಂದರು. 

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿಗಳು ಇಂದು ಸರ್ಕಾರಿ ಕೆಲಸಗಳಲ್ಲಿ, ಉನ್ನತ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನೂ ಸಹ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಯಾಗಿದ್ದೇನೆ ಎಂದು ಹೇಳಿದರು. 

ಕೋಲಾರದ ರಂಗಕರ್ಮಿ ನಾ.ವೆಂಕಟರವಣ ಪುಸ್ತಕದ ಕುರಿತು ಮಾತನಾಡಿ, ಜನ ಸಮುದಾಯ ಸಂಸ್ಕೃತಿ, ಪ್ರಕೃತಿ ವಿಕೋಪ, ರಾಜಕೀಯ ತಲ್ಲಣಗಳು ಮುಂತಾದ ಅಂಶಗಳನ್ನು ಅರಗಿಸಿಕೊಂಡು ಸಮಾಜಕ್ಕೆ ಹೊಸ ಬೆಳಕನ್ನು ನೀಡುವ ಶಕ್ತಿಯನ್ನು ಹಚ್ಚಿಟ್ಟ ದೀಪ ಕೃತಿ ಒಳಗೊಂಡಿದೆ ಎಂದು ಪ್ರತಿಪಾದಿಸಿದರು.

Advertisement

ಸೃಷ್ಠಿ ಪ್ರಕಾಶನದ ಪ್ರಕಾಶಕ ಷಣ್ಮುಖ್‌ ಪಟೇಲ್‌ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲ ಎನ್‌.ವಿಶ್ವನಾಥಶೆಟ್ಟಿ, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೊಗಲುಗೊಂಬೆ ಕಲಾವಿದ ಎಸ್‌.ಶಂಕರಪ್ಪ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕಾಗತಿ ನಾಗರಾಜಪ್ಪ, ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್‌ರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲೆ ಡಿ.ವಿ.ನಾಗರತ್ನಮ್ಮ, ಭದ್ರಮ್ಮ ಯಜಮಾನ್‌ ಪಟೇಲ್‌ ಗಂಗಪ್ಪ, ವಕೀಲ ಕುರಾರೆಡ್ಡಿ, ನಾರಾಯಣಸ್ವಾಮಿ, ಒ.ಕೆ.ವಿ.ಕಾಳಿದಾಸ, ಎಪಿಎಂಸಿ ಉಪಾಧ್ಯಕ್ಷ ಶ್ರೀ ನಿವಾಸರೆಡ್ಡಿ, ಟಿ.ಆರ್‌.ಮುನಿಶಾಮಿರೆಡ್ಡಿ, ಬಿ.ರವಿ, ಗಂಗಿರೆಡ್ಡಿ, ಟಿ.ವಿ.ಶ್ರೀನಿವಾಸ, ಸಿ.ಆರ್‌.ಪಿ.ಸುಂದರೇಶ್‌, ಜಯದೇವ, ನಾಗರಾಜ್‌, ವೆಂಕಟೇಶ್‌, ಡಿ.ಎಂ.ನಾಗರಾಜ್‌, ರಾಜಾರೆಡ್ಡಿ, ಟಿ.ಕೆ.ನರಸಿಂಹಪ್ಪ, ಕೃಷ್ಣಪ್ಪ, ಸಂಗಂ ಆರ್ಟ್ಸ್ ಶ್ರೀನಿವಾಸ್‌, ಗ್ರಾಮಸ್ಥರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. 

ಸಾಂಸ್ಕೃತಿಕ ನೃತ್ಯ: ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಭರತನಾಟ್ಯ ಕಾರ್ಯಕ್ರಮವನ್ನು ಕೀರ್ತಿ ಬಸಪ್ಪ ಲಗಳಿ ತಂಡ, ಜಾನಪದ ನೃತ್ಯಗಳನ್ನು ಶಾಲಾ ಮಕ್ಕಳು ಹಾಗೂ ಇಡೀ ರಾತ್ರಿ ಕೊಂಡ್ಲಿಗಾನಹಳ್ಳಿ ನರಸಿಂಹಪ್ಪ ತಂಡ ನಾಟಕ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next