Advertisement

ವಿದ್ಯಾರ್ಥಿಗಳಲ್ಲಿರಲಿ ಸವಾಲು ಎದುರಿಸುವ ದಿಟ್ಟ ಶಕ್ತಿ; ಶಾಸಕ ದೊಡ್ಡನಗೌಡ

05:39 PM Jan 27, 2022 | Team Udayavani |

ಹುನಗುಂದ: ವಿದ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಅದರೊಂದಿಗೆ ಸವಾಲು ಎದುರಿಸುವ ದಿಟ್ಟ ಶಕ್ತಿ ಇರಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಪಟ್ಟಣದ ಕರ್ನಾಟಕ ಗೃಹ ಮಂಡಳಿ ವತಿಯಿಂದ 4.57.ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಬೃಹತ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಿಕ್ಷಣದಿಂದಲೇ ಅಭಿವೃದ್ಧಿ, ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ. ಯುವಕರು ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ. ಅಂತಹ ಯುವಕರಿಗೆ ಸೂಕ್ತ ಶಿಕ್ಷಣ ನೀಡಿ ಸನ್ಮಾರ್ಗದಲ್ಲಿ ನಡೆಸುವುದು ಮುಖ್ಯ. ಸರ್ಕಾರ ಶಿಕ್ಷಣಕ್ಕಾಗಿ ವಿನೂತನ ಯೋಜನೆ ಜಾರಿ ಮಾಡುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕು.

ನನ್ನ ಅವಧಿಯಲ್ಲಿ ಗ್ರಾಮೀಣ ಮಟ್ಟದಲ್ಲಿ 5 ಪ್ರೌಢಶಾಲೆ ನಿರ್ಮಾಣ, 16 ಶಾಲೆಗಳಿಗೆ ಅನುದಾನ ಮಂಜೂರು ಮಾಡಲಾಗಿದೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದು ಅವರಿಗೊಂದು ವಸತಿ ನಿಲಯ ಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸಂಬಂಧಿ ಸಿ ಸಚಿವರೊಂದಿಗೆ ಮಾತನಾಡಿ ಮಂಜೂರು ಮಾಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಪ್ರಾಶುಂಪಾಲ ಡಾ| ಎಸ್‌.ಎಲ್‌. ಪಾಟೀಲ ಮಾತನಾಡಿ, 4.57 ಕೋಟಿ ಬೃಹತ್‌ ಕಟ್ಟಡ ಉದ್ಘಾಟನೆಯಾಗಿದ್ದು 1500 ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಿದೆ. 2 ಕೋಟಿ ಅನುದಾನದಲ್ಲಿ ಇನ್ನೊಂದು ಕಟ್ಟಡ ನಿರ್ಮಾಣ ಹಂತದಲ್ಲಿದೆ. ಅದರಲ್ಲಿಯೇ ಹೆಚ್ಚುವರಿ ಎರಡು ಕೊಠಡಿ ನಿರ್ಮಾಣಕ್ಕೆ 47 ಲಕ್ಷ ಅನುದಾನವೂ ಮಂಜೂರಾಗಿದೆ. ಕೆಲವೇ ದಿನಗಳಲ್ಲಿ ಆ ಕಟ್ಟಡವೂ ಉದ್ಘಾಟನೆಯಾಗಲಿದೆ. ನಮ್ಮ ಕಾಲೇಜಿನಲ್ಲಿ 672 ವಿದ್ಯಾರ್ಥಿನಿಯರು ಓದುತ್ತಿದ್ದು, ಬಹುತೇಕ ಅವರೆಲ್ಲ ಗ್ರಾಮೀಣ ಭಾಗದವರಾಗಿದ್ದಾರೆ.

ಅದಕ್ಕಾಗಿ ಒಂದು ವಿದ್ಯಾರ್ಥಿನಿಯರ ವಸತಿ ನಿಲಯ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಸಿಡಿಸಿ ಕಮಿಟಿ ಸದಸ್ಯ ಮಲ್ಲಿಕಾರ್ಜುನ ಹಳಪೇಟಿ, ಮುಖಂಡರಾದ ಡಾ| ಮಹಾಂತೇಶ ಕಡಪಟ್ಟಿ ಮಾತನಾಡಿದರು. ಈ ವೇಳೆ ಚನ್ನಬಸಪ್ಪ ಹೊನವಾಡ, ಎಸ್‌. ಎನ್‌. ಹುನಕುಂಟಿ, ಗುರಬಸಪ್ಪಗೌಡ ಪಾಟೀಲ, ಮಹಾಂತೇಶ ರೇವಡಿ, ಮಂಜುನಾಥ ಕಿರಸೂರ, ಸುಭಾಸ ಮುಕ್ಕಣ್ಣವರ, ಸಂಗಣ್ಣ ಕಡಪಟ್ಟಿ, ತಿಮ್ಮಣಗೌಡ ದಾದ್ಮಿ, ಮಂಜುನಾಥ ಕೊಡಗಾನೂರ, ಮಲ್ಲೇಶ ಹುನಗುಂದ,ಪುರಸಭೆ ಮುಖ್ಯಾ ಧಿಕಾರಿ ಅಜ್ಜಪ್ಪ ನಾಡಗೌಡ್ರ, ಶಾಂತಯ್ಯ ಮಠ, ಗೃಹ ಮಂಡಳಿ ಎಇಇ ಮಲ್ಲನಗೌಡ ಬಿರಾದರ, ಗುತ್ತಿಗೆದಾರ ಅಬ್ದುಲ್‌ ರಜಾಕ್‌ ಇತರ ರಿದ್ದರು. ಪ್ರೊ| ಗಾಯತ್ರಿ ದಾದ್ಮಿ ಸ್ವಾಗತಿಸಿದರು. ಪ್ರೊ| ನಿಜೇಶಕುಮಾರ.ಡಿ ನಿರೂಪಿಸಿದರು. ಶ್ರೀದೇವಿ ಕಡಿವಾಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next