Advertisement

ನಿಂತಲ್ಲೇ ಹಾಳಾಗುತ್ತಿದೆ ಬೋಟ್‌

01:40 PM Nov 19, 2018 | |

ಯಾದಗಿರಿ: ನಗರದ ಹೃದಯ ಭಾಗದಲ್ಲಿನ ಲುಂಬಿನ ವನ ನೋಡಲು ಬಲು ಚಂದ. ಇರದಲ್ಲಿನ ಕೆರೆ ಪಕ್ಕ ವಿಹಂಗಮ ಬೆಟ್ಟದ ನೋಟ ತನ್ನತ್ತ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರ ವನದಲ್ಲಿ ಓಡಾಡಿ ಜನರ ಮನಸ್ಸಿಗೆ ಖುಷಿ ನೀಡಬೇಕಿದ್ದ ಬೋಟ್‌ವೊಂದು ನಿಂತಲ್ಲೇ ಹಾಳಾಗುತ್ತಿದೆ.

Advertisement

2015ರಲ್ಲಿ ಲುಂಬಿನ ವನವನ್ನು ಅಭಿವೃದ್ಧಿ ಮಾಡಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಲೋಕಾರ್ಪಣೆ ಮಾಡಿದ್ದರು. ಆ ಸಂದರ್ಭದಲ್ಲಿಯೇ ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುಜರಾತ ಮೂಲದ ಎ.ಎಚ್‌. ವಾಡಿಯಾ ಬೋಟ್‌ ಬಿಲ್ಡರ್‌ ಕಂಪನಿಯಿಂದ ಬೋಟ್‌ವೊಂದನ್ನು ಖರೀದಿಸಿದೆ. 

ಸುಮಾರು 3 ವರ್ಷಗಳಿಂದ ಬೋಟ್‌ ಕೆರೆಯಲ್ಲಿಯೇ ನಿಂತಿದ್ದು, ವನಕ್ಕೆ ಬರುವ ಜನರ ಕಣ್ಣೆಲ್ಲ ಬೋಟ್‌ ಮೇಲೆಯೇ ನೆಟ್ಟಿದೆ. ನಮಸ್ಸಿನಲ್ಲಿಯೇ ಇದೇನು ಇಲ್ಲಿ ಬೋಟ್‌ ಕೂಡ ಇದೆ. ಇದರಲ್ಲಿ ಒಂದು ಸುತ್ತು ಹಾಕಿದ್ದರೇ ಹೇಗಿರುತ್ತಿತ್ತು ಎನ್ನುವ ಭಾವನೆಯೊಂದಿಗೆ ನಿರಾಸೆಯಿಂದಲೇ ಮರಳುವಂತಾಗಿದೆ.

ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ, ಅಧಿಕಾರಿಗಳು ಕೂಡ ಇಲ್ಲಿ ಬೋಟಿಂಗ್‌ ಅರಂಭಿಸಬೇಕು ಎನ್ನುವ ಉದ್ದೇಶದಿಂದಲೇ ಒಂದು ಬೋಟನ್ನು ಬೋಟಿಂಗ್‌ ಆರಂಭಿಸುವ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ತಂದಿದ್ದಾರೆ. ಆದರೆ ಅದೇಕೋ ಗೊತ್ತಿಲ್ಲ. ಆದರೆ ಅದಕ್ಕೆ ಸಮರ್ಪಕ ವ್ಯವಸ್ಥೆಗಳನ್ನು ಮಾಡಿಕೊಳ್ಳದೇ ಮೇಲಾಗಿ ಚಲಾಯಿಸಲು ನಾವಿಕನೂ ಇಲ್ಲ. ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಬೋಟಿಂಗ್‌ ಆರಂಭಿಸಬೇಕಿದ್ದ ಅಧಿಕಾರಿಗಳು ಅದನ್ನು ಕೈಬಿಟ್ಟಿದ್ದು, ಒಮ್ಮೆಯೂ ಚಲಿಸದೆ ನಿಂತಲ್ಲೇ ತುಕ್ಕು ಹಿಡಿಯುತ್ತಿದೆ. ಇದರಿಂದ ಸರ್ಕಾರದ ದುಡ್ಡು ಪೋಲಾದಂತಾಗಿದೆ ಎನ್ನುತ್ತಾರೆ ಪ್ರವಾಸಿಗರು.

ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರುಪಯುಕ್ತ ಸಸ್ಯಬಳ್ಳಿ ಬೆಳೆದಿದ್ದು, ತೆರೆವುಗೊಳಿಸುವ ಕಾರ್ಯ ಮಾಡಬೇಕಿದೆ. ಕೆರೆಯಲ್ಲಿ ಬೆಳೆದಿರುವ ಸಸ್ಯಬಳ್ಳಿಯನ್ನು ತೆರವುಗೊಳಿಸಿದರೂ ಮತ್ತೆ ಹುಟ್ಟುತ್ತಿದೆ. ಅದನ್ನು ಯಂತ್ರದಿಂದ ತೆರವುಗೊಳಿಸಬೇಕು. ಅದಕ್ಕೆ ಸುಮಾರು 2-3 ಲಕ್ಷ ಖರ್ಚು ಬರುತ್ತದೆ. ಅಷ್ಟು ಹಣ ನಮ್ಮಲ್ಲಿಲ್ಲ ಎನ್ನುತ್ತಾರೆ ಅಧಿಕಾರಿಗಳು.  ಇಲ್ಲಿ ಬೋಟಿಂಗ್‌ ವ್ಯವಸ್ಥೆ ಆರಂಭಿಸುವುದರಿಂದ ಇದನ್ನೊಂದು ಪ್ರಸಿದ್ಧ ತಾಣವನ್ನಾಗಿಸುವ ಜತೆಗೆ ಪ್ರವಾಸೋದ್ಯಮ ಇಲಾಖೆ ಉತ್ತಮ ಆದಾಯ ಪಡೆಯಬಹುದು. ಅಧಿಕಾರಿಗಳು ಕಾಳಜಿವಹಿಸಿ ಬೋಟಿಂಗ್‌ ಆರಂಭಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

Advertisement

ಆದಾಯಕ್ಕೆ ಕತ್ತರಿ ಹಾಕಿಕೊಂಡ ಇಲಾಖೆ: ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಲುಂಬಿನ ವನಕ್ಕೆ ಪ್ರವೇಶ ಶುಲ್ಕ 5 ರೂಪಾಯಿಯಿದ್ದು, ಮನಸ್ಸಿಗೆ ಮುದ ನೀಡುವ ಪರಿಸರದಲ್ಲಿ ಸಮಯ ಕಳೆಯಲು ನಿತ್ಯ ನೂರಾರು ಜನರು ಬರುತ್ತಾರೆ.
 
ಜತೆಗೆ ಬೋಟಿಂಗ್‌ ಆರಂಭಿಸಿ ಪ್ರತ್ಯೇಕವಾಗಿ 50ರಿಂದ 100 ರೂ. ವರೆಗೆ ಖರ್ಚು ಮಾಡಿ ಬೋಟಿಂಗ್‌ ಮಾಡುವುದಕ್ಕೂ ಜನರು ಆಸೆ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳು ಬೋಟಿಂಗ್‌ ಆರಂಭಿಸಿ ಆದಾಯ ಹೆಚ್ಚಿಸಿಕೊಳ್ಳಲು ವಿಫುಲ ಅವಕಾಶಗಳಿಗೆ ಆದರೇ ಮನಸ್ಸು ಮಾಡಬೇಕಷ್ಟೆ.

ವನದ ಕೆರೆಯಲ್ಲಿ ಬೋಟ್‌ವೊಂದು ನಿಂತಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಬೋಟಿಂಗ್‌ ಮಾಡುವ ಅವಕಾಶವಿಲ್ಲ ಇಲ್ಲಿಯಾದರೂ ಶೀಘ್ರದಲ್ಲಿ ಬೋಟಿಂಗ್‌ ಆರಂಭಿಸಿದರೆ ಹೆಚ್ಚಿನ ಜನ ಬರುವುದರಿಂದ ಆದಾಯವೂ ಹೆಚ್ಚುತ್ತದೆ. ಈ ಬಗ್ಗೆ ಅಧಿಕಾರಿಗಳು ಕಾಳಜಿವಹಿಸಬೇಕು.
 ಸುರೇಶ, ಪ್ರವಾಸಿಗ

ನಮಗೂ ಬೋಟಿಂಗ್‌ ಆರಂಭಿಸಬೇಕು ಎಂಬ ಆಸಕ್ತಿಯಿದೆ. ಆದರೇ ಬೋಟ್‌ ನಿಲ್ಲಿಸುವುದು ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಕೈಗೊಳ್ಳಬೇಕು. ಕೆರೆ ಅಭಿವೃದ್ಧಿಗೆ 50 ಲಕ್ಷ ರೂ. ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡಿದೆ. ಹಣ ಬಿಡುಗಡೆಯಾದ ಬಳಿಕ ಸಕಲ ವ್ಯವಸ್ಥೆ ಮಾಡಬಹುದು.
 ರಜನಿಕಾಂತ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ.

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next