Advertisement

9 ಕೋತಿಗಳ ಶವ ಪತ್ತೆ ಇಬ್ಬರ ರಕ್ತ ಪರೀಕ್ಷೆ 

01:10 AM Jan 26, 2019 | Team Udayavani |

ಉಡುಪಿ: ಶುಕ್ರವಾರ ಉಡುಪಿ ಜಿಲ್ಲೆಯ ಪೆರ್ಮುಂದೆ,  ಬಾಳೆಬೈಲು, ಶಿರಿಯಾರ, ಶಂಕರ ನಾರಾಯಣ, ಶಿರ್ವದ ಪಂಜಿಮಾರ್‌, ಶಿರಾಡಿ ಹಾಗೂ ನಿಡ್ಲೆಯಲ್ಲಿ ತಲಾ ಒಂದು, ಭದ್ರಾವತಿಯಲ್ಲಿ ಎರಡು ಸಹಿತ ಒಟ್ಟು 7 ಕೋತಿಗಳ ಶವಗಳು ಪತ್ತೆಯಾಗಿವೆ.

Advertisement

ಸಾಗರದಿಂದ ಕಬ್ಬಿನಾಲೆಯ ಸಂಬಂಧಿಕರ ಮನೆಗೆ ಬಂದಿದ್ದ ಒಬ್ಬರ ರಕ್ತದ ಮಾದರಿಯನ್ನು ಮಣಿಪಾಲ ಕೆಎಂಸಿಗೆ ಕಳುಹಿಸಲಾಗಿದೆ. ಬ್ರಹ್ಮಾವರ ಹೇರೂರಿನ ವ್ಯಕ್ತಿಯ ರಕ್ತ ಮಾದರಿ ಯನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ಮಣಿಪಾಲ ಕೆಎಂಸಿಯಲ್ಲಿ ಸಾಗರ ಮತ್ತು ಆಸುಪಾಸಿನ ಒಟ್ಟು 21 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next