Advertisement
ಅರಸು ಪ್ರಶಸ್ತಿಗೆ ಭಾಜನರಾಗಿದ್ದೀರಿ. ಏನನ್ನಿಸುತ್ತಿದೆ?
Related Articles
Advertisement
ಸಿಎಂ ಗಾದಿ ಸಿಗಬೇಕು ಅನ್ನಿಸಿಲ್ಲವೇ?
ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಅನಿಸಿಕೆ ಇತ್ತು. ಹಲವರಲ್ಲಿ ಅಂತಹ ಭಾವನೆ ಇದೆ. ಆದರೆ ನಾನು ಎಂದೂ ಅಧಿಕಾರದ ಹಿಂದೆ ಹೋದವನಲ್ಲ. ಅರಸು ಪ್ರಶಸ್ತಿ ಕೂಡ ನನಗೆ ಆಶ್ವರ್ಯವೇ. ಅದು ಬಂದಂತೆ ಸ್ವೀಕರಿಸಿದ್ದಷ್ಟೇ. ಹಾಗಾಗಿ ಮುಖ್ಯಮಂತ್ರಿ ಆಗಿಲ್ಲ ಎಂದು ಏನನ್ನೋ ಕಳೆದುಕೊಂಡೆ ಅಂತ ನನಗೆ ಅನಿಸಿಲ್ಲ.
ಈಗಿನ ರಾಜಕಾರಣದ ಬಗ್ಗೆ ಏನಂತೀರಿ?
ಈಗಿನವರೂ ರಾಜಕಾರಣಿಗಳೇ. ಅವತ್ತಿನವರೂ ರಾಜಕಾರಣಿಗಳೇ. ಆದರೆ ಜನಸೇವೆಗೆ ಇಳಿದವರಿಗೆ ಇಚ್ಛಾಶಕ್ತಿ ಇರಬೇಕು. ತತ್ವ-ನೀತಿಗಳ ಬಗ್ಗೆ ಬದ್ಧತೆ ಇರಬೇಕು. ಇದು ವ್ಯಾಪಾರವಲ್ಲ. ಜನರ ಸಮಸ್ಯೆ, ಕಾನೂನುಗಳ ಬಗ್ಗೆ ಸಂಕಷ್ಟ ಪರಿಹರಿಸುವ ಕೆಲಸ ಮಾಡಬೇಕು. ನನಗಂತೂ ತೀರಾ ವ್ಯತ್ಯಾಸ ಕಾಣುತ್ತಿಲ್ಲ.
ಕಾಗೋಡು ಚಳವಳಿಗೆ ಪ್ರೇರಣೆ ಯಾರು?
1952ರಲ್ಲಿ ಕಾಗೋಡಿನಲ್ಲಿ ಭೂ ಹೋರಾಟ ಆರಂಭವಾಯಿತು. ಗೋಪಾಲ ಗೌಡರು ಇದಕ್ಕೆ ಪ್ರೇರಣೆ ನೀಡಿದರು. ನಾನು ಆಗ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದೆ. ಗೋಪಾಲಗೌಡರು ನಮ್ಮ ಮನೆಗೇ ಬಂದು ಉಳಿಯುತ್ತಿದ್ದರು. ಅವರ ಆಚಾರ-ವಿಚಾರಗಳು ನನ್ನ ಮೇಲೆ ಪ್ರಭಾವ ಬೀರಿದವು. ಸಮಾಜವಾದಿ ಸಿದ್ಧಾಂತಕ್ಕೆ ಆಕರ್ಷಿತನಾಗಿ ಅದನ್ನು ಮೈಗೂಡಿಸಿಕೊಂಡೆ. ಮುಂದೆ ನಾನು ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರಿಗೆ ಹೋಗಲು ಅವರೇ ಕಾರಣ.