Advertisement

ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದಿದ್ದರೆ ಕಪ್ಪು ಪಟ್ಟಿಗೆ

06:00 AM Jul 31, 2018 | |

ಹೊಸದಿಲ್ಲಿ: ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದೇ ಇರುವವರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸುವ ಕಾನೂನು ಜಾರಿಗೆ ಕೇಂದ್ರ ಮುಂದಾಗಿದೆ. ಹೀಗಾದರೆ ಅಂಥವರಿಗೆ ಯಾವುದೇ ರೀತಿಯಲ್ಲಿ ಸಾಲಕ್ಕೆ ಅರ್ಜಿ ಹಾಕಲು ಅರ್ಹತೆ ಇರುವುದಿಲ್ಲ. ಜತೆಗೆ ಟೆಂಡರ್‌ನಲ್ಲಿ ಭಾಗವಹಿಸಲೂ ಅವಕಾಶ ಇರುವುದಿಲ್ಲ. ಸರಕಾರದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಅಸಂಘಟಿತ ವಲಯದಲ್ಲಿನ ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ.

Advertisement

ಈಗಾಗಲೇ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಆ.31ಕ್ಕೆ ವಿಸ್ತರಿಸಲಾಗಿದೆ. ಜತೆಗೆ ಡಿಸೆಂಬರ್‌ ಅಂತ್ಯದಲ್ಲಿ ರಿಟರ್ನ್ಸ್ ಸಲ್ಲಿಕೆ ಮಾಡಿದರೆ 5 ಸಾವಿರ ರೂ., ಮುಂದಿನ ಮಾರ್ಚ್‌ನಲ್ಲಿ ಸಲ್ಲಿಸಿದರೆ 10 ಸಾವಿರ ರೂ. ದಂಡ ವಿಧಿಸಲೂ ತೀರ್ಮಾನಿಸಲಾಗಿದೆ.

ಸಲ್ಲಿಕೆ ಸಂಖ್ಯೆ ಹೆಚ್ಚಳ: ಮತ್ತೂಂದು ಕುತೂಹಲಕಾರಿ ಅಂಶವೆಂದರೆ ರಿಟರ್ನ್ಸ್ ಸಲ್ಲಿಕೆ ಮತ್ತು ರಿಫ‌ಂಡ್‌ ಪ್ರಮಾಣ ಶೇ.80ರಷ್ಟು ಹೆಚ್ಚಾಗಿದೆ. ಕಳೆದ ವಾರದ ವರೆಗಿನ ದಾಖಲೆಗಳ ಪ್ರಕಾರ ರಿಟರ್ನ್ಸ್ ಫೈಲ್‌ ಮಾಡಿರುವವರ ಸಂಖ್ಯೆ 3 ಕೋಟಿ ದಾಟಿದೆ. ಕಳೆದ ಗುರುವಾರದ ವರೆಗೆ 77,700 ಕೋಟಿ ರೂ. ಮೌಲ್ಯದಷ್ಟು ಮೊತ್ತ ರಿಫ‌ಂಡ್‌ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅದು ಶೇ.35ರಷ್ಟು ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next