Advertisement
ಗುರುವಾರ ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಎರಡೂ ಬಣಗಳ ಕಾನೂನು ತಜ್ಞರು ಹಾಗೂ ಮುಖಂಡರು ಪಾಲ್ಗೊಂಡು ತಮ್ಮದೇ ವಾದ ಮಂಡಿಸಿದ್ದಾರೆ. ಆದರೆ, ಪ್ರತ್ಯೇಕ ಧರ್ಮದ ಬೇಡಿಕೆಗೆ ಲಿಂಗಾಯತ ಧರ್ಮ ಹೋರಾಟಗಾರರು ಅವಸರ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
Related Articles
Advertisement
ಗುರುವಾರ ನಡೆದ ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ವಿನಯ ಕುಲಕರ್ಣಿ, ಡಾ. ಶರಣ ಪ್ರಕಾಶ್ ಪಾಟೀಲ್, ಈಶ್ವರ ಖಂಡ್ರೆ, ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ತಿಪ್ಪಣ್ಣ, ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್, ನಿವೃತ್ತ ಅಧಿಕಾರಿಗಳಾದ ಎಸ್.ಎಂ. ಜಾಮದಾರ್, ಶಂಕರ ಬಿದರಿ, ಬಿ.ಎಸ್. ಪಾಟೀಲ್, ಶಿಕ್ಷಣ ತಜ್ಞರಾದ ಪ್ರೊ. ವೀರಣ್ಣ ರಾಜೂರ್, ಪ್ರೊ. ಚಂದ್ರಶೇಖರ, ಪ್ರೊ. ನಂದೀಶ್ ಅಂಚೆ, ಕಾನೂನು ತಜ್ಞರಾದ ಶಿವಕುಮಾರಸ್ವಾಮಿ ಹಾಗೂ ಸವದತ್ತಿ ಮಠ ಹಾಜರಿದ್ದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಗೈರು ಹಾಜರಾಗಿದ್ದರು.
ತಜ್ಞರ ಸಮಿತಿ ರಚನೆಗೆ ನಿರ್ಧಾರವೀರಶೈವ ಮತ್ತು ಲಿಂಗಾಯತ ನಾಯಕರ ಎರಡೂ ಬಣಗಳು ಸತತ ನಾಲ್ಕು ಸಭೆಗಳನ್ನು ನಡೆಸಿ ಕಡೆಗೂ ವಾಸ್ತವಾಂಶ ತಿಳಿಯಲು ತಜ್ಞರ ಸಮಿತಿ ರಚನೆಗೆ ನಿರ್ಧರಿಸಿದ್ದಾರೆ. ಎರಡೂ ಬಣಗಳಿಂದ ತಲಾ ಐವರು ಕಾನೂನು, ಇತಿಹಾಸ, ಸಾಹಿತ್ಯ ಕ್ಷೇತ್ರದ ತಜ್ಞರನ್ನು ಒಳಗೊಂಡ ಹತ್ತು ಜನರ ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಸಮಿತಿಗೆ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮೂರು ದಿನದಲ್ಲಿ ತಜ್ಞರ ಸಮಿತಿ ರಚಿಸಿ ಹತ್ತು ದಿನದಲ್ಲಿ ಸಮಿತಿ ಪ್ರತ್ಯೇಕ ಧರ್ಮ ಬೇಡಿಕೆಗೆ ಕಾನೂನಿನ ಸಾಧ್ಯತೆಗಳು ಹಾಗೂ ವೀರಶೈವ ಮತ್ತು ಲಿಂಗಾಯತ ಹೆಸರಿನ ಪ್ರಸ್ತಾವನೆ ಮಾಡುವ ಕುರಿತಂತೆ ವರದಿ ನೀಡಲು ಸಮಿತಿಗೆ ಸೂಚಿಸಲು ನಿರ್ಧರಿಸಲಾಗಿದೆ. ಸತತ ಮೂರು ಗಂಟೆಗಳ ಕಾಲ ಎಲ್ಲರೂ ಚರ್ಚೆ ಮಾಡಿ, ವೀರಶೈವ ಲಿಂಗಾಯತರು ಎಲ್ಲರೂ ಒಟ್ಟಾಗಿ ಹೋಗಬೇಕು, ಸಮಾಜ ಒಡೆಯದಂತೆ ನೋಡಿಕೊಳ್ಳಬೇಕು. ಪ್ರತ್ಯೇಕ ಧರ್ಮದ ಮಾನ್ಯತೆ ಕುರಿತಂತೆ ಹತ್ತು ಜನರ ತಜ್ಞರ ಸಮಿತಿ ರಚನೆ ಮಾಡಿ ಅವರ ವರದಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಇಂದಿನ ಸಭೆಯಲ್ಲಿ ಯಾವುದೇ ಗೊಂದಲ ಇಲ್ಲ
– ಶಾಮನೂರು ಶಿವಶಂಕರಪ್ಪ, ವೀರಶೈವ ಮಹಾಸಭೆ ಅಧ್ಯಕ್ಷ.