Advertisement
ಮಾ.3ರಿಂದ ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಪಾದಯಾತ್ರೆ ಹೊರಡಲಿದ್ದು, ಮಾ.6ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ತಲುಪಲಿದೆ. ಅಲ್ಲಿ ಬೃಹತ್‌ಸಮಾವೇಶ ನಡೆಯಲಿದ್ದು, ಉತ್ತರ ಪ್ರದೇಶ ಸಿಎಂಯೋಗಿ
ಆದಿತ್ಯನಾಥ್ ಪಾಲ್ಗೊಳ್ಳುತ್ತಾರೆ.
.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಚುನಾವಣಾ ಸಿದಟಛಿತಾ ಸಭೆಯಲ್ಲಿ ಪಾದಯಾತ್ರೆಯ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ
ಹತ್ಯಾ ಸರಣಿಗಳು ಮುಂದುವರಿದಿದೆ. ಹೀಗಾಗಿ ಮೊದಲ ಹತ್ಯೆ ನಡೆದ ಕೊಡಗು ಜಿಲ್ಲೆಯ ಕುಶಾನಗರದಿಂದ ಮತ್ತು ಪರೇಶ್ ಮೇಸ್ತಾ
ಹತ್ಯೆ ನಡೆದ ಹೊನ್ನಾವರ ಸಮೀಪದ ಕುಮಟಾದಿಂದ ಮಾ. 3ರಂದು ಪಾದಯಾತ್ರೆ ಹೊರಟು ದೀಪಕ್ ರಾವ್ ಹತ್ಯೆ ನಡೆದ ಸುರತ್ಕಲ್‌ನಲ್ಲಿ (ಕಾಟಿಪಳ್ಳ) ಮಾ. 6ರಂದು ಪಾದಯಾತ್ರೆ ಅಂತಿಮಗೊಳಿಸಲು ಮತ್ತು ಅಂದು ಸುರತ್ಕಲ್‌ನಲ್ಲಿ ಹಿಂದೂ
ಕಾರ್ಯಕರ್ತರ ಹತ್ಯೆ ಖಂಡಿಸಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಿ ಅವರಿಂದ ಭಾಷಣ ಮಾಡಿಸುವ ಮೂಲಕ ಕರಾವಳಿ ಮತ್ತು
ಮಲೆನಾಡು ಭಾಗದಲ್ಲಿ ಹಿಂದೂ ಮತಬ್ಯಾಂಕ್ ಅನ್ನು ಮತ್ತಷ್ಟು ಗಟ್ಟಿಗೊಳಿಸಲು ಬಿಜೆಪಿ ಮುಂದಾಗಿದೆ. ಪ್ರಚಾರ ಚುರುಕುಗೊಳಿಸಲು ನಿರ್ಧಾರ: ಇದೇ ವೇಳೆ ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಚಾರ ಚುರುಕುಗೊಳಿಸುವ ಕುರಿತೂ ಸಭೆಯಲ್ಲಿ ಚರ್ಚಿಸಲಾಗಿದೆ. ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಚುನಾವಣಾ ರಣಕಹಳೆ ಮೊಳಗಿಸಿದ್ದು, ಇದರ ಬಿಸಿ ಆರುವ ಮುನ್ನವೇ ಜನರ ಬಳಿ ತಲುಪಿ ರಾಜ್ಯ ಸರ್ಕಾರದ ವೈಫಲ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಲು ಕಾರ್ಯಕರ್ತರನ್ನು ಸಜ್ಜುಗೊಳಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಜತೆಗೆ ಮುಂಬರುವ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಧ್ಯವಾದಷ್ಟು ಹೆಚ್ಚು ಬಾರಿ ಆಹ್ವಾನಿಸಲು ಕೂಡ ನಿರ್ಧರಿಸಲಾಯಿತು.