Advertisement

ಬಿಜೆಪಿ ಕಾಲದಲ್ಲೂ  ವರಿಷ್ಠರಿಗೆ ಕಪ್ಪ  ಹೋಗಿತ್ತು: ಕುಮಾರಸ್ವಾಮಿ

03:45 AM Feb 13, 2017 | Team Udayavani |

ಮಂಗಳೂರು: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯವರ ಮನೆಯಲ್ಲಿ ದೊರಕಿರುವ ಡೈರಿಯಲ್ಲಿ ಕೆಲವರಿಗೆ ಹಣ ಸಂದಾಯವಾಗಿರುವ ಕುರಿತು ಮಾಹಿತಿ ದೊರಕಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಾಂಬ್‌ ಸಿಡಿಸಿದ್ದಾರೆ. ಆದರೆ ಯಡಿಯೂರಪ್ಪ ಅವರ ಬಿಜೆಪಿಯ ಸರಕಾರದ ಕಾಲಧಿದಲ್ಲೂ ಆ ಪಕ್ಷದ ಕೆಲವು ವರಿಷ್ಠರಿಗೆ ಚೆಕ್‌ ಮೂಲಕ ಹಣ ಸಂದಾಯವಾಗಿತ್ತು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ವಿಧಾನಪರಿಷತ್‌ ಸದಸ್ಯಧಿರೋರ್ವರ ಮನೆಯಲ್ಲಿ ಆದಾಯ ತೆರಿಗೆ ದಾಳಿ ಸಂದರ್ಭ ದೊರಕಿರುವ ಡೈರಿಯಲ್ಲಿ ಯಾರಿಗೆ ಯಾವಾಗ ಎಷ್ಟೆಷ್ಟು ಹಣ ಹೋಗಿದೆ ಎಂಬ ಬಗ್ಗೆ ಮಾಹಿತಿ ಲಭಿಧಿಸಿರುವುದಾಗಿ ಹೇಳಿದ್ದಾರೆ. ಇದು ಹೊಸ ವಿಚಾರವಲ್ಲ. 6 ತಿಂಗಳ ಹಿಂದೆಯೇ ಗೊತ್ತಿತ್ತು. 2 ದಿನಗಳ ಬಳಿಕ ಇನ್ನೊಂದು ದೊಡ್ಡ ಬಾಂಬ್‌ ಸಿಡಿಸುವುದಾಗಿ ಹೇಳಿದ್ದಾರೆ. ಇದು ಹುಸಿಬಾಂಬು ಅಥವಾ ಒಳ್ಳೆಯ ಬಾಂಬು ಆಗಿರಬಹುದೇ ಎಂಬುದು ಗೊತ್ತಿಲ್ಲ ಎಂದರು. 

ಯೋಜನೆ ಹೆಸರಲ್ಲಿ ಸಂಗ್ರಹ
ಕರ್ನಾಟಕ ರಾಜ್ಯ ಸಂಪದ್ಭರಿತ ರಾಜ್ಯ. ಎರಡು ರಾಷ್ಟ್ರೀಯ ಪಕ್ಷಧಿಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಇಲ್ಲಿಯ ಸಂಪತ್ತನ್ನು ರಾಜ್ಯದ ಅಭಿವೃದ್ಧಿಗೆ ವಿನಿಯೋಗಿಸುವ ಬದಲು ವರಿಷ್ಠರನ್ನು ಓಲೈಸಲು ವಿನಿಧಿಯೋಗಿಸಿವೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಹಣ ಸಂಗ್ರಹಿಸಿ ಅದನ್ನು ಅಲ್ಲಿಗೆ ರವಾನಿಸಿವೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್‌ ನೇತೃತ್ವದ ಸೋಂಬೇರಿ ಸರಕಾರವಿದೆ. ರಾಜ್ಯದಾದ್ಯಂತ ತೀವ್ರ ಬರ ಪರಿಸ್ಥಿತಿ ಇದೆ. ಆದರೂ ಈ ಸರಕಾರದಿಂದ ಏನೂ ಕೆಲಸಗಳಾಗುತ್ತಿಲ್ಲ. ಆ ಪಕ್ಷದ ಸಚಿವರೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಪಕ್ಷದ ನಾಯಕರಾದ ಬಿ.ಎಂ. ಫಾರೂಕ್‌, ಅಮರನಾಥ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಮಹಮ್ಮದ್‌ ಕುಂಞಿ, ಎಂ.ಬಿ. ಸದಾಶಿವ, ಹೈದರ್‌ ಪರ್ತಿಪ್ಪಾಡಿ, ಯುವ ಜನತಾದಳ ಅಧ್ಯಕ್ಷ ಅಕ್ಷಿತ್‌ ಸುವರ್ಣ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಉಪಸ್ಥಿತರಿದ್ದರು.

ಬಹುಮತ ಬರದಿದ್ದರೆ ಹೊಂದಾಣಿಕೆ ಇಲ್ಲ
ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯದ ಸನ್ನಿವೇಶ ತಲೆದೋರಿದರೆ ಜೆಡಿಎಸ್‌ ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳದೆ ಮರಳಿ ಚುನಾವಣೆಗೆ ಹೋಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next