ಕೋಲ್ಕತ್ತಾ: ‘ಜೈ ಶ್ರೀ ರಾಮ್’ ಘೋಷಣೆಗೆ ಸಂಬಂಧಿಸಿ ಬಿಜೆಪಿ -ತೃಣಮೂಲ ಕಾಂಗ್ರೆಸ್ ನಡುವಿನ ಮಾತಿನ ಚಕಮಕಿ ಮುಂದುವರಿದಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಜೈ ಶ್ರೀ ರಾಂ ಎಂದು ಬರೆದ 25 ಲಕ್ಷ ಪೋಸ್ಟ್‌ಕಾರ್ಡ್ ಗಳನ್ನು ಕಳುಹಿಸಿದ ಬೆನ್ನಲ್ಲೇ ಈ ವಾಕ್ಸಮರ ತೀವ್ರಗೊಂಡಿದೆ. ಭಾನು ವಾರ ಈ ಕುರಿತು ಮಾತನಾಡಿರುವ ದೆಹಲಿ ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್, ‘ಮಮತಾ ಅವರೇ, ನೀವು ಭಗವಾನ್ ಶ್ರೀ ರಾಮನ ಹೆಸರನ್ನು ಪಠಿಸಲು ಆರಂಭಿಸಿ. ಆಗ ನಿಮ್ಮ ಮೇಲೆ ದುಷ್ಟಶಕ್ತಿಗಳ ಪರಿಣಾಮ ಕಡಿಮೆಯಾಗುತ್ತದೆ’ ಎಂದು ಹೇಳಿದ್ದಾರೆ. ಜತೆಗೆ, ದೀದಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಶ್ರೀರಾಮನ ನಾಮ ಮಂತ್ರವನ್ನೂ ಉಲ್ಲೇಖೀಸಿದ್ದೇನೆ. ಅದನ್ನು ಟೇಬಲ್ ಬಳಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದೇನೆ ಎಂದಿದ್ದಾರೆ. ಇದೇ ವೇಳೆ, ಪ್ರತಿಕ್ರಿಯಿಸಿರುವ ಮಮತಾ, ‘ಜೈ ಶ್ರೀ ರಾಂ ವಿಚಾರ ಪ್ರಸ್ತಾಪಿಸುವ ಮೂಲಕ ಬಿಜೆಪಿಯು ಧರ್ಮವನ್ನು ರಾಜಕೀಯದ ಜತೆ ಬೆರೆಸುತ್ತಿದೆ. ನಾವು ಜನರ ಭಾವನೆಗಳನ್ನು ಗೌರವಿಸುತ್ತೇವೆ. ಆದರೆ, ಯಾವುದನ್ನೂ ಹೇರಲು ಹೋಗುವುದಿಲ್ಲ’ ಎಂದಿದ್ದಾರೆ.
Advertisement