Advertisement
ಇಲ್ಲಿನ ರಾಂಪುರ ಲಾಡ್ಜ್ನಲ್ಲಿ ಕಾಂಗ್ರೆಸ್‌ನ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಸಂವಿಧಾನ ಪರಮ ಪವಿತ್ರ. ಅದನ್ನು ನಾವೆಲ್ಲ ಒಪ್ಪಿಕೊಂಡಿದ್ದು ಅದರ ಆಧಾರದ ಮೇಲೆ ಎಲ್ಲವೂ ನಡೆಯುತ್ತಿದೆ. ಇಂಥ ಸಂದರ್ಭ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಂವಿಧಾನ ಬದಲಾಯಿಸುವ ಮಾತಾಡುತ್ತಿದೆ. ಎಸ್ಸಿ, ಎಸ್ಟಿ ಕಾಯ್ದೆ ಬದಲಾವಣೆಗೆ ಮುಂದಾಗಿದೆ. ಇವರ ಈ ತೀರ್ಮಾನವನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರೋಧಿಸಿದೆ. ಈ ಬಗ್ಗೆ ಪ್ರಧಾನಿ, ರಾಷ್ಟ್ರಪತಿ ಭೇಟಿ ಮಾಡಿ ಮನವಿ ಸಲ್ಲಿಸಿ ಯಥಾಸ್ಥಿತಿ ಕಾಪಾಡುವಂತೆ ಕೋರಲಾಗಿದೆ. ಕಾಂಗ್ರೆಸ್‌ನ ಆಡಳಿತ ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದರು.
ಸಿ.ಎಸ್. ನಾಡಗೌಡರನ್ನು ಬೆಂಬಲಿಸಿ ಮತ್ತೂಮ್ಮೆ ಆಯ್ಕೆ ಮಾಡಬೇಕು ಎಂದರು. ಸಿದ್ದರಾಮಯ್ಯನವರು ರೈತರಿಗೆ ಸಾಲಮನ್ನಾ ಸೇರಿ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ಒದಗಿಸಿದ್ದಾರೆ. ಎಸ್ಸಿ, ಎಸ್ಟಿ ಜನರಿಗೆ ರಾಜ್ಯದ ಆದಾಯದಲ್ಲಿ 2,7000 ಕೋಟಿ ಹಣ ಖರ್ಚು ಮಾಡಬೇಕೆಂದು ಕಾನೂನು ಮಾಡಿದ್ದಾರೆ. ಸಿದ್ಧಾಂತದ ಮೇಲೆ ರಾಜಕಾರಣ ನಡೆಸುತ್ತಿದ್ದಾರೆ ಎಂದರು. ಗೋವಾ ಕನ್ನಡಿಗರ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ನಿರ್ದೇಶಕ ವೈ.ಎಚ್. ವಿಜಯಕರ್, ಪ್ರಮುಖರಾದ ಬಸವರಾಜ ಶಿರೋಳ, ಸುರೇಶ ಗೊಣಸಗಿ, ಚಂದ್ರಶೇಖರ ಕೊಡಬಾಗಿ, ಭೀಮಣ್ಣ ನಾಗೂರ, ರಫೀಕ್ ಜಾನ್ವೇಕರ್, ಶಿವನಗೌಡ ಮುದ್ದೇಬಿಹಾಳ, ಬಿ.ಎ. ಬಿರಾದಾರ, ಪ್ರಶಾಂತ ಕಾಳೆ, ಭೀಮಣ್ಣ ಬಿಜೂರ, ಪ್ರಕಾಶ ಸರೂರ, ದೇವೇಂದ್ರ ಡೊಂಕಮಡು, ಬಸವರಾಜ ಹಂಡರಗಲ್ ಇದ್ದರು.
Related Articles
Advertisement