Advertisement
ಕಾಂಗ್ರೆಸ್ ಮತ್ತು ಜೆಡಿಎಸ್ ಚರ್ಚಿಸಿಯೇ ಮೈತ್ರಿ ಸರ್ಕಾರ ರಚಿಸಿದ್ದು, ಇದು ಸಂವಿಧಾನಾತ್ಮಕವಾಗಿಯೇ ಆಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಡೆದು ಹೋಗಲಿದೆ. ಸರ್ಕಾರ ಬೀಳುಸುತ್ತೇವೆ ಎನ್ನಲು ಅದೇನೂ ಮಡಕೆಯಲ್ಲ. ಆದರೂ ಪ್ರಯತ್ನ ಮಾಡುತ್ತೇವೆ ಎನ್ನುವ ಬಿಜೆಪಿಯ ಸ್ನೇಹಿತರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು.
Related Articles
Advertisement
ಸದ್ಯಕ್ಕೆ ನಾನು ಮುಖ್ಯಮಂತ್ರಿಯ ಹುದ್ದೆ ರೇಸ್‌ನಲ್ಲಿ ಇಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಐದು ವರ್ಷ ಪೂರ್ಣಗೊಳ್ಳುತ್ತದೆ. ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮುಂದೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಯಾರು ಮುಖ್ಯಮಂತ್ರಿ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ಸೂಚನೆ ಎಲ್ಲರೂ ಪಾಲಿಸುತ್ತಾರೆ ಎಂದು ಹೇಳಿದರು.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಸಚಿವ ಸಾ.ರಾ.ಮಹೇಶ್‌ರನ್ನು ತರಾಟೆಗೆ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೊಡಗಿನಲ್ಲಿ ಮಳೆ ಅನಾಹುತದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಸಾ.ರ.ಮಹೇಶ್ ಸಂಪುಟ ಸಭೆಗೂ ಬರದೆ ಅಲ್ಲಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಂಥವರನ್ನು ನಿರ್ಮಾಲಾ ಸೀತಾರಾಮ್ ನಿಂದಿಸಿದ್ದಾರೆ. ಅವರು ದೊಡ್ಡವರು, ಒಳ್ಳೆಯದಾಗಲಿ. ಬೇಕಿದ್ದರೆ ಇನ್ನೊಂದು ಬಾರಿ ಬಂದು ಬೈದು ಹೋಗಲಿ. ನಮ್ಮ ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಆಸೆ ಎಂದರು.
ಋಣಪರಿಹಾರ ಅಧಿನಿಯಮ ಏಕಾಏಕಿ ತೀರ್ಮಾನವಲ್ಲಖಾಸಗಿ ಸಾಲ ಮತ್ತು ಲೇವಾದೇವಿಗೆ ಕಡಿವಾಣ ಹಾಕುವ ಋಣ ಪರಿಹಾರ ಅಧಿನಿಯಮವನ್ನು ಏಕಾಏಕಿ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದಿಲ್ಲ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮಧ್ಯೆ ಸುದೀರ್ಘ ಚರ್ಚೆಯ ಬಳಿಕವೇ ಸಂಪುಟ ಸಭೆಗೆ ತಂದು ಅನುಮೋದನೆ ಪಡೆಯಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಕುರಿತು ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿರುವ ಅವರು, ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ದಂಧೆಯಿಂದ ಜನ ಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ರೈತರು, ಕೃಷಿ ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳು ಜಿಲ್ಲಾ ಮಟ್ಟದಿಂದ ಮಾಹಿತಿ ತರಿಸಿಕೊಂಡು ಯಾವ ರೀತಿ ಖಾಸಗಿ ಲೇವಾದೇವಿ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಿದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಋಣ ಪರಿಹಾರ ಅಧಿನಿಯಮ ಕುರಿತು ಚರ್ಚಿಸಿದ್ದರು. ಆದರೆ, ಇದು ಮೊದಲೇ ಬಹಿರಂಗವಾದರೆ ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ ಸಂಪುಟ ಸಭೆ ಆರಂಭವಾಗುವವರೆಗೆ ವಿಷಯವನ್ನು ಗುಟ್ಟಾಗಿ ಇಡಲಾಗಿತ್ತು ಎಂದು ಹೇಳಿದರು. ಋಣ ಪರಿಹಾರ ಅಧಿನಿಯಮದ ಬಗ್ಗೆ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿದ ಬಳಿಕವೇ ಒಪ್ಪಿಗೆ ಪಡೆಯಲಾಗಿದೆ. ಅಡ್ವೋಕೇಟ್ ಜನರಲ್ ಕೂಡ ಅದರ ಸಾಧಕ-ಬಾಧಕಗಳ ಬಗ್ಗೆ ತಿಳಿಸಿದ್ದಾರೆ. ಅದರಂತೆ ಅಧಿನಿಯಮವನ್ನು ಶೀಘ್ರವೇ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು. ಅವರ ಅಂಕಿತ ಬಿದ್ದ ಕೂಡಲೇ ಜಾರಿಗೊಳಿಸಲಾಗುವುದು ಎಂದರು.