Advertisement

ಬಿಜೆಪಿ ಮುಖಂಡನಿಂದ ತಾಲೂಕಿನ ರೈತರಿಗೆ ಸಿಹಿಯೂಟ

02:48 PM Dec 24, 2017 | Team Udayavani |

ಚಾಮರಾಜನಗರ: ರೈತ ದಿನಾಚರಣೆ ಅಂಗವಾಗಿ ಬಿಜೆಪಿ ರೈತ ಮುಖಂಡ ಮಲ್ಲೇಶ್‌ ಸಾವಿರಾರು ರೈತರಿಗೆ ಕಜ್ಜಾಯ, ಪಾಯಸದ ಸಿಹಿಊಟ ಆಯೋಜಿಸಿದ್ದರು. ನಗರದ ಹೌಸಿಂಗ್‌ ಬೋರ್ಡ್‌ ಕಾಲೋನಿಯ ಅರಣ್ಯ ನರ್ಸರಿ ರಸ್ತೆಯಲ್ಲಿರುವ ಮಲ್ಲೇಶ್‌ ಅವರ ಕಚೇರಿ ಸಮೀಪದ ಮೈದಾನದಲ್ಲಿ ಕಜ್ಜಾಯ, ಪಾಯಸ, ಹಲಸಿನಕಾಯಿ ಹುಳಿ, ಅನ್ನ ಸಾಂಬಾರ್‌ ಊಟದ ವ್ಯವಸ್ಥೆ ಮಾಡಲಾಗಿತ್ತು. ತಾಲೂಕು, ಜಿಲ್ಲೆಯ ರೈತರು, ಸಾರ್ವಜನಿಕರು, ಮುಖಂಡರು ಭಾಗವಹಿಸಿದ್ದರು.

Advertisement

ಈ ಸಂದರ್ಭದಲ್ಲಿ ಬಿಜೆಪಿ ರೈತ ಮುಖಂಡ ಮಲ್ಲೇಶ್‌ ಮಾತನಾಡಿ, ಜಿಲ್ಲೆಯಲ್ಲಿ 1992-93ರಲ್ಲಿ ರೈತ ಸಂಘವನ್ನು ಹುಟ್ಟು ಹಾಕುವ ಮೂಲಕ ಅನೇಕ ರೈತಪರ ಚಳವಳಿ ಮಾಡಿಕೊಂಡು 15 ವರ್ಷಗಳಿಂದಲೂ ಬಂದಿದ್ದೇನೆ. ವಿಶ್ವರೈತ ದಿನಾಚರಣೆಯನ್ನು ಹಬ್ಬವಾಗಿ ಆಚರಿಸಿ, ಅವರಿಗೆ ಸಿಹಿ ಊಟ ಉಣಬಡಿಸಿ ಸಂತೋಷ ತುಂಬುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿ ಸಲಾಗಿದೆ ಎಂದು ಹೇಳಿದರು.

ರೈತರು ಬೆಳೆದ ಪದಾರ್ಥಗಳಿಗೆ ವೈಜ್ಞಾನಿಕ ಬೆಲೆ ಸಿಗದ ಕಾರಣದಿಂದ ರೈತರು ಬಡತನದಲ್ಲಿ ಜೀವನ ಸಾಗಿಸುವಂತಾಗಿದೆ. ರೈತರನ್ನು ನೆನೆಯುವ ಸಲುವಾಗಿ ರೈತ ದಿನಾಚರಣೆ ಅಂಗ ವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ರೈತಕುಲವೇ ದೊಡ್ಡದು. ಅನ್ನದಾತರೇ ಬುದ್ಧಿ ಜೀವಿಗಳಾಗಿದ್ದಾರೆ. ಆದರಿಂದ ಅವರಿಗೆ ಯಾರಿಂದಲೂ ನೀತಿಪಾಠದ ಭಾಷಣದ ಬೇಕಾ ಗಿಲ್ಲ. ರೈತರ ಬದುಕು ಹಸನಾಗುವ ಕಾಲ ಸನ್ನಿಹಿತವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವಧಿಯಲ್ಲಿ ರೈತಪರ ಬಜೆಟ್‌ ಮಂಡಿಸಿದರು. ಜಿಲ್ಲೆಯ ಕೆರೆ ಗಳಿಗೆ
ನೀರು ತುಂಬಿಸುವ ಯೋಜನೆ ಜಾರಿಗೊಳಿಸಿ ದರು. ಇದರಿಂದ ಸಾವಿರಾರು ರೈತರ ಜಮೀನಿಗೆ ಅಂತರ್ಜಲ ಹೆಚ್ಚಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈತರು ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿಸಿ ಯಡಿಯೂರಪ್ಪ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.

ನಗರದಲ್ಲಿ ಸಮರ್ಪಕವಾಗಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಧೂಳಿನಿಂದ ಆವರಿಸಿದ್ದು, ಜನತೆ ಆತಂಕದಲ್ಲಿದ್ದಾರೆ. ಜಿಲ್ಲಾಡಳಿತ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ವಿಫ‌ಲವಾಗಿದೆ. ಪಟ್ಟಣದ ಎಲ್ಲ ರಸ್ತೆಗಳಲ್ಲೂ ಕಾಮಗಾರಿ ನಡೆಯುತ್ತಿದ್ದು, ಜನರಿಗೆ ದಾರಿಯೇ ಇಲ್ಲದಾಗಿದೆ. 

Advertisement

ಧೂಳಿನಿಂದಾಗಿ ಶ್ವಾಸಕೋಶ ಕಾಯಿಲೆಗಳು ವ್ಯಾಪಕವಾಗಿ ಹರಡಿವೆ. ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಟೀಕಿಸಿದರು. ಬಿಜೆಪಿ ಮುಖಂಡರಾದ ಯು.ಎಸ್‌. ಶೇಖರ್‌, ಎಸ್‌.ಸೋಮನಾಯಕ, ಜಿ.ಎಂ. ಗಾಡ್ಕರ್‌, ಅರಕಲವಾಡಿನಾಗೇಂದ್ರ, ಬಸವನಪುರ ರಾಜಶೇಖರ್‌, ಮೇಲಾಜಿಪುರನಾಗೇಂದ್ರ, ಮಲ್ಲೂಪುರಶಿವಕುಮಾರ್‌, ದುಂಡಯ್ಯ, ನಿಜಗುಣರಾಜು, ಆರ್‌.ಮಹದೇವಯ್ಯ,
ತಾಪಂ ಉಪಾಧ್ಯಕ್ಷ ದಯಾನಿಧಿ, ಜಿ.ಪಂ. ಸದಸ್ಯ ಬಾಲರಾಜ್‌, ಬಿಸಲವಾಡಿಬಸವರಾಜು, ಮೂಡ್ನಾಕೂಡಕುಮಾರ್‌, ವಿಜಯಕುಮಾರ್‌, ಮಧು, ಪ್ರಸನ್ನ, ಮಹದೇವಸ್ವಾಮಿ, ಜೆ.ಎನ್‌. ಸತೀಶ್‌, ಬೇಡರಪುರಬಸವಣ್ಣ, ಚಂದ್ರಕಲಾ ಬಾಯಿ, ನೂರೊಂದುಶೆಟ್ಟಿ, ಸುಂದರ್‌ರಾಜು, ನಾರಾಯಣ್‌ಪ್ರಸಾದ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next