Advertisement

ಬಿಜೆಪಿ ಯಾವ ಕ್ಷೇತ್ರದಲ್ಲೂ ತಣ್ಣಗಿಲ್ಲ

12:32 PM Oct 24, 2018 | Team Udayavani |

ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಯ ಗೆಲುವಿಗೆ ಬಿಜೆಪಿ ಕಾರ್ಯತಂತ್ರ ರೂಪಿಸುವಲ್ಲಿ ತಣ್ಣಗಾಗಿಲ್ಲ, ಬದಲಾಗಿ ರಾಮಾಯಣದಲ್ಲಿ ಶ್ರೀರಾಮನು ಎದುರಾಳಿ ಪಾಳೆಯದಲ್ಲಿದ್ದ ವಿಭೀಷಣನನ್ನು ತನ್ನ ಪಾಳೆಯಗೆ ಸೇರಿಸಿಕೊಂಡು ಯುದ್ಧ ಮಾಡಿದ ತಂತ್ರವನ್ನೇ ಬಿಜೆಪಿ ಅನುಸರಿಸುತ್ತಿದೆ ಎಂದು ವಕ್ತಾರ ಗೋ. ಮಧುಸೂದನ್‌ ಹೇಳಿದ್ದಾರೆ.

Advertisement

ಮÇÉೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಅವರು, ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಶಿವಮೊಗ್ಗ ಹೊರತುಪಡಿಸಿ ಇತರೆ ಕ್ಷೇತ್ರದಲ್ಲಿ ಬಿಜೆಪಿ ಹಿಂದೆ ಸರಿದಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಜಮಖಂಡಿ, ಬಳ್ಳಾರಿ, ಶಿವಮೊಗ್ಗ ಗೆಲ್ಲುತ್ತೇವೆ. ರಾಮನಗರದಲ್ಲಿ ಲಿಂಗಪ್ಪ ಪುತ್ರ ಚಂದ್ರಶೇಖರ್‌ ಕಣಕ್ಕಿಳಿಸಿರುವುದು ನಮ್ಮ ತಂತ್ರಗಾರಿಕೆ. ಡಾ.ಸಿದ್ದರಾಮಯ್ಯ ಉತ್ತಮ ಅಧಿಕಾರಿ ಅದಕ್ಕೆ ಸೇರಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಎಲ್ಲ ಕ್ಷೇತ್ರದಲ್ಲೂ ದಿನದ 24 ಗಂಟೆಯೂ ಕಾರ್ಯಕರ್ತರು, ಮುಖಂಡರು ಕೆಲಸ ಮಾಡುತ್ತಿದ್ದಾರೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ನಾಪತ್ತೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಶ್ರೀರಾಮುಲು ರಾಜೀನಾಮೆಯಿಂದ ಉಪಚುನಾವಣೆ ಬಂದಿದೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿ¨ªಾರೆ. ರಾಮನಗರ, ಮಂಡ್ಯ ಉಪಚುನಾವಣೆ ಏಕೆ ಬಂತು? ಸಿದ್ದರಾಮಯ್ಯನವರೇ ನೀವು ಏಕೆ ಎರಡು ಕಡೆ ನಿಂತಿದ್ದಿರಿ? ಒಂದು ವೇಳೆ ಗೆದ್ದಿದ್ದರೆ ಮತ್ತೆ ಚುನಾವಣೆ ನಡೀತಾ ಇರಲಿಲ್ಲವೇ? ಚಂದ್ರೇಗೌಡ, ಧರಂಸಿಂಗ್‌, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಕಾಶ್‌ ಹುಕ್ಕೇರಿ ರಾಜೀನಾಮೆಯಿಂದ ಉಪ ಚುನಾವಣೆ ನಡೆದಿಲ್ಲವೆ ಎಂದು  ಪ್ರಶ್ನಿಸಿದರು.

ನಿಮ್ಮ ಅಭ್ಯರ್ಥಿಗಳ ಬಗ್ಗೆ ಪ್ರಪಂಚಕ್ಕೆ ಗೊತ್ತು. ಶ್ರೀರಾಮುಲು ಬಗ್ಗೆ ವೈಯಕ್ತಿಕ ಟೀಕೆ ನಿಲ್ಲಿಸಿ, ಸರ್ಕಾರದ ಸಾಧನೆ ಬಗ್ಗೆ ಮಾತನಾಡಿ. ಗಲ್ಲಿ ರಾಜಕಾರಣ ಮಾಡಿ ಚಿಲ್ಲರೆ ಬುದ್ಧಿ ತೋರಿಸಬೇಡಿ. ನಿಮ್ಮ ಜತೆ ಓಡಾಡುವ ಎಲ್ಲ ಅಲ್ಪಸಂಖ್ಯಾತ ನಾಯಕರು ವಕ್ಫ್ ಆಸ್ತಿ ಕಬಳಿಕೆ ಪ್ರಕರಣದಲ್ಲಿ ತಪ್ಪಿತಸ್ಥರೇ ಆಗಿ¨ªಾರೆ. ಸಿ.ಎಂ. ಇಬ್ರಾಹಿಂ ವಕ್ಫ್ ಆಸ್ತಿಯ ಬಾಡಿಗೆ ಹಣದಿಂದ ಊಟ ಮಾಡುತ್ತಿ¨ªಾರೆ  ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next