Advertisement

ಬಾದಾಮಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದೇ ಗೆಲ್ಲುವೆ

06:50 AM Apr 25, 2018 | Team Udayavani |

ಮೈಸೂರು: “ಚಾಮುಂಡೇಶ್ವರಿ,ಬಾದಾಮಿ ಎರಡೂ ಕ್ಷೇತ್ರಗಳಲ್ಲೂ ತಾವು ಗೆಲುವು ಸಾಧಿಸಲಿರುವುದಾಗಿ’ ಸಿಎಂ
ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಬಾದಾಮಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದಿದ್ದರೂ ಗೆಲ್ಲುತ್ತೇನೆ. ಎಚ್‌. ಡಿ. ಕುಮಾರ ಸ್ವಾಮಿ, ಎರಡು ಕ್ಷೇತ್ರಗಳಲ್ಲೂ ಸೋಲುತ್ತಾರೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ನಮಗೆ ಪ್ರಬಲ ಎದುರಾಳಿ. ಆದರೂ ಕಾಂಗ್ರೆಸ್‌ 130ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಹಿಡಿಯಲಿದೆ’ ಎಂದರು.

ಚಾಮುಂಡೇಶ್ವರಿ, ವರುಣಾ ಕ್ಷೇತ್ರ ದಲ್ಲಿ ಚುನಾವಣಾ ಪ್ರಚಾರಕ್ಕೆ ಯಾವುದೇ ತಾರಾ ಪ್ರಚಾರಕರನ್ನೂ ಕರೆತರುವುದಿಲ್ಲ.
ಡಾ.ಯತೀಂದ್ರ ಮತ್ತು ಸ್ಥಳೀಯ ಮುಖಂಡರೇ ನಮಗೆ ತಾರಾ ಪ್ರಚಾರಕರು, ಸಿಸಿಎಲ್‌ ಉದ್ಘಾಟನೆಗೆ ಆಹ್ವಾನಿಸಲು ಬಂದಿದ್ದಾಗ ನಟ ಸುದೀಪ್‌, ತಮ್ಮೊಬ್ಬರಪರ ಚಾಮುಂಡೇಶ್ವರಿಗೆ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದರು. ಆದರೆ, ನಾವು ಯಾವುದೇ ತಾರಾ ಪ್ರಚಾರಕರನ್ನೂ ಕರೆತರುವುದಿಲ್ಲ ಎಂದು ಹೇಳಿದರು. 

ನಟ ಪ್ರಕಾಶ್‌ ರೈ ಜಾತ್ಯತೀತ ಪರವಿದ್ದು, ಕೋಮುವಾದದ ವಿರುದಟಛಿವಿದ್ದಾರೆ ಅಷ್ಟೆ ಎಂದ ಸಿದ್ದರಾಮಯ್ಯ, ಕಾವೇರಿ ನೀರು
ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಎಐಸಿಸಿ ವೀಕ್ಷಕರಿಗೆ
ವೇಣುಗೋಪಾಲ್‌ ಪಾಠ ಬೆಂಗಳೂರು: ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್‌ ರಣತಂತ್ರ ಹೆಣೆಯುತಿದ್ದು, ಎಐಸಿಸಿಯಿಂದ ನೇಮಕ ಮಾಡಿರುವ ಜಿಲ್ಲಾ ವೀಕ್ಷಕರಿಗೆ ಉಸ್ತುವಾರಿ ವೇಣುಗೋಪಾಲ್‌ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಸೋಮವಾರ ಪಾಠ ಹೇಳಿದ್ದಾರೆ. ಟಿಕೆಟ್‌ ಸಿಗದೆ ಪಕ್ಷದ ಬಗ್ಗೆ ಮುನಿಸಿಕೊಂಡವರು, ಟಿಕೆಟ್‌ ವಂಚಿತ ರಿಂದ ಚುನಾವಣೆ ಸಂದರ್ಭದಲ್ಲಿ ನಡೆಯುವ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸು ವಂತೆ ಸೂಚಿಸಿದರು. ಪ್ರತಿದಿನದ ಬೆಳವಣಿಗೆಯನ್ನು ವೇಣುಗೋಪಾಲ್‌ ಅವರಿಗೆ ತಲುಪಿಸಲು ಸೂಚಿಸಲಾಗಿದ್ದು, ಯಾವುದೇ ಗೊಂದಲ ಉಂಟಾದರೆ ಸ್ಥಳೀಯ ನಾಯಕರು, ಸಿಎಂ , ಪರಮೇಶ್ವರ್‌ ಗಮನಕ್ಕೆ ತಂದು ಸರಿಪಡಿಸಲು ಹೈಕಮಾಂಡ್‌ ನಿರ್ದೇಶಿಸಿದೆ. 

Advertisement

ರಾತ್ರೋರಾತ್ರಿ ಓಡಿ ಹೋಗ್ತಾರೆ
ಶಿಕಾರಿಪುರದಿಂದ ಬಂದವರಿಗೆ ಆಗಲೇ ಸೋಲಿನ ಭೀತಿ ಶುರುವಾಗಿದ್ದು, ಹೇಳದೆ ಕೇಳದೆ ರಾತ್ರೋರಾತ್ರಿ ಓಡಿ ಹೋಗ್ತಾರೆ.ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವರುಣಾ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿದ ಅವರು, ಡಾ.ಯತೀಂದ್ರರನ್ನು ಹೆಚ್ಚು ಮತಗಳ ಅಂತರದಿಂದ ಆರಿಸಿ ವಿಧಾನಸೌಧಕ್ಕೆ ಕಳಿಸಬೇಕೆಂದು ಮನವಿ ಮಾಡಿದರು.

ಅಂಬರೀಶ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಲು ಸಂದೇಶ್‌ ನಾಗರಾಜ್‌ ಯಾರು?ಜೆಡಿಎಸ್‌ನವರು ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಹೇಗೆ ಮಾತನಾಡುತ್ತಾರೆ? ಒಂದು ವೇಳೆ ಅಂಬರೀಶ್‌ ಸ್ಪರ್ಧಿಸುವುದಿಲ್ಲ ಎಂದರೆ ಹೈಕಮಾಂಡ್‌ ಗಮನಕ್ಕೆ
ತಂದು ಮಂಡ್ಯದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next