Advertisement
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
Related Articles
Advertisement
ಸಣ್ಣ ವಿಷಯಕ್ಕೂ ಟ್ವೀಟ್ ಮಾಡುವ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಇಂಥ ವಿಪತ್ತು ಸಂಭವಿಸಿದ್ದರೂ ಈ ಬಗ್ಗೆ ತುಟಿ ಬಿಚ್ಚಿಲ್ಲ.
ಕಮಿಟ್ ಮೆಂಟ್ ಇಲ್ಲದ ಜನ ಬಿಜೆಪಿಯವರು, ನಾವು ಪ್ರಶ್ನೆ ಕೇಳಿದರೆ ದೇಶದ್ರೋಹಿಗಳು ಎನ್ನುತ್ತಾರೆ ತಾತ್ಸಾರ ಮನೋಭಾವದ ಕೇಂದ್ರ ಸರ್ಕಾರವನ್ನು ನಾವು ನೋಡಿಲ್ಲ.
ಪಾರ್ಲಿಮೆಂಟ್ ನಲ್ಲಿ ಯಾವುದೇ ನಿರ್ಧಾರ ನಿರ್ಣಯ ತೆಗೆದುಕೊಳ್ಳಲು ಹಿಂದೆಮುಂದೆ ಮಾಡುವುದಿಲ್ಲ, ಆದರೆ ಪ್ರವಾಹದ ಬಗ್ಗೆ ಮಾತನ್ನಾಡಲು ಮಾತ್ರ ಇವರಿಗೆ ಆಗಲ್ಲ ಇವರನ್ನು ಹೃದಯ ಇರುವವರು ಎನ್ನಲಾಗುತ್ತದೆಯೇ ಎಂದು ಮಾಧ್ಯಮದವರೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದಕ್ಕೆ ಗೃಹಸಚಿವ ಅಮಿತ್ ಶಾ ಇಲ್ಲಿಗೆ ಭೇಟಿ ನೀಡಿದ್ದಾರೆ. ಆದರೆ ಕೇರಳಕ್ಕೆ ಅಮಿತ್ ಷಾ ಭೇಟಿ ನೀಡಲಿಲ್ಲ.
ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿ ನೀಡಲು ಹಣವಿಲ್ಲ . ಕೇಂದ್ರ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿದರೆ ರಾಜ್ಯ ಸರ್ಕಾರಕ್ಕೆ ಧೈರ್ಯ ಬರುವುದಾದರೂ ಹೇಗೆ ಆದರೆ ಕೇಂದ್ರ ನೆರವನ್ನು ನೀಡುವ ವಿಷಯವನ್ನೇ ಎತ್ತುತ್ತಿಲ್ಲ.
ಇಂಥ ಸಮಯದಲ್ಲಿ ಯಡಿಯೂರಪ್ಪ ಅಧಿಕಾರಕ್ಕೆ ಬಂದವರೇ ವರ್ಗಾವಣೆಯಲ್ಲಿ ಮಗ್ನರಾಗಿದ್ದಾರೆ. ಯಡಿಯೂರಪ್ಪ ಅವರದ್ದು ಓನ್ ಮ್ಯಾನ್ ಶೋ ಆಗಿದೆ, ದ್ವೇಷದ ರಾಜಕಾರಣವನ್ನೂ ಯಡಿಯೂರಪ್ಪ ಮಾಡುತ್ತಿದ್ದಾರೆ.
ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ಕಂಟ್ರ್ಯಾಕ್ಟರ್ ಗಳನ್ನು ಕರೆಯಿಸಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು .
ನಾನು ಒಬ್ಬನೆ ದೆಹಲಿಗೆ ಹೋದರೆ ಪ್ರಧಾನಿ ನನ್ನ ಮಾತು ಕೇಳುವುದಿಲ್ಲ ಎನ್ನುವುದಾದರೆ ಯಡಿಯೂರಪ್ಪ ಅವರು ನಮ್ಮನ್ನೂ ದೆಹಲಿಗೆ ಕರೆದುಕೊಂಡು ಹೋಗಲಿ ಎಂದು ಒತ್ತಾಯಿಸಿದರು.
ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲ. ಹೀಗಿರುವಾಗ ನೆರೆ ನಿರ್ವಹಣೆ ಹೇಗೆ ಸಾಧ್ಯ. ಜನರ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲ.
ಯಡಿಯೂರಪ್ಪ ಅಧಿಕಾರಕ್ಕೆ ಬರಲು ಎಷ್ಟು ಕಷ್ಟ ಪಟ್ಟರು. ಒಬ್ಬ ಎಂಎಲ್‌ಎ ಗೆ 20 ಕೋಟಿಯಂತೆ ಖರೀದಿಗೆ ಮುಂದಾಗಿದ್ದರು.
ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಬಳಿ ಸಾವಿರಾರು ಕೋಟಿ ರೂಪಾಯಿ ಹಣವಿದೆ, ಆದರೆನೆರೆ ಸಂತ್ರಸ್ತರಿಗೆ ನೀಡಲು ಇವರ ಬಳಿ ಕೇವಲ ನಾಲ್ಕು ಸಾವಿರ ರೂಪಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಈ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು ಕರ್ನಾಟಕ ನೆರೆ ಸ್ಥಿತಿ ಎಂದು ಘೋಷಿಸಬೇಕು. ಇನ್ನೆರಡು ದಿನದಲ್ಲಿ ಪ್ರಧಾನಿ ಕರ್ನಾಟಕಕ್ಕೆ ಬಂದು ಪ್ರವಾಹ ಪರಿಸ್ಥಿತಿ ವೀಕ್ಷಿಸಬೇಕು. ನೆರೆಯ ನಿರ್ವಹಣೆಗೆ ಕೂಡಲೇ ಐದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಇಷ್ಟನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಬೇಕು, ಅದನ್ನು ಬಿಟ್ಟು ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿಕೊಂಡು ಕೂರಬಾರದು.
ಟೆಲಿಫೋನ್ ಕದ್ದಾಲಿಕೆ ಪ್ರಕರಣ ಅದೊಂದು ಅಷ್ಟು ದೊಡ್ಡ ಪ್ರಕರಣವೇ, ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಕ್ಕೆ ಆಕ್ಷೇಪವಿಲ್ಲ. ಆದರೆ ಸಿಬಿಐಗೆ ವಹಿಸುವ ಅಗತ್ಯವಿತ್ತೆ. ನಮ್ಮ ರಾಜ್ಯದ ತನಿಖಾ ಸಂಸ್ಥೆಯವರ ಮೇಲೆ ಯಡಿಯೂರಪ್ಪ ಅವರಿಗೆ ಸಂಬಿಕೆ ಇಲ್ಲವೇ. ಐಎಂಎ ಪ್ರಕರಣ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳನ್ನು ಪತ್ತೆ ಮಾಡಿದ್ದು ನಮ್ಮ ಎಸ್ ಐಟಿ ಅಲ್ಲವೇ ಎಸ್ ಐಟಿಗೆ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ವಹಿಸಬಹುದಿತ್ತು ಎಂದ ದಿನೇಶ್ ಗುಂಡೂರಾವ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು .