Advertisement
ರವಿವಾರ ದಿಲ್ಲಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಮ್ ಆದ್ಮಿ ಪಕ್ಷದ ಮುಖಂಡ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂ Ì ಸಹಿತ ವಿಪಕ್ಷಗಳ ಅನೇಕ ನಾಯಕರು ಉಪಸ್ಥಿತರಿದ್ದರು.
ಚುನಾ ವಣ ಆಯೋಗಕ್ಕೆ ಸುಪ್ರೀಂ ಕೋರ್ಟ್ ವಾರದ ಹಿಂದಷ್ಟೇ ಸೂಚಿಸಿತ್ತು. ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ ಎಂದು ವಿಪಕ್ಷಗಳು ಹೇಳಿವೆ.
Related Articles
ಮತ್ತೂಮ್ಮೆ ಸುಪ್ರೀಂಗೆ ಅರ್ಜಿ ಸಲ್ಲಿಸಿ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿಯೂ ಶೇ. 50ರಷ್ಟು ವಿವಿಪ್ಯಾಟ್‌ಗಳ ಮತಗಳನ್ನು ಇವಿಎಂನಲ್ಲಿನ ಮತಗಳೊಂದಿಗೆ ಹೋಲಿಕೆ ಮಾಡುವಂತೆ ಚುನಾವಣ ಆಯೋಗಕ್ಕೆ ಸೂಚಿಸ ಬೇಕೆಂದು ಕೋರುತ್ತೇವೆ. ಇವಿಎಂಗಳ ಲೋಪದ ಬಗ್ಗೆ ದೂರು ನೀಡಿದರೂ ಚುನಾವಣ ಆಯೋಗವು ನಿರ್ಲಕ್ಷಿಸುತ್ತಿದೆ. ನಾವು ಸುಮ್ಮನೆ ಕೂರುವುದಿಲ್ಲ. ವಿಪಕ್ಷಗಳು ಈ ವಿಚಾರವನ್ನೆತ್ತಿಕೊಂಡು ರಾಷ್ಟ್ರವ್ಯಾಪಿ ಅಭಿಯಾನ ಕೈಗೊಳ್ಳಲಿವೆ ಎಂದು ಕಾಂಗ್ರೆಸ್ ನಾಯಕ ಸಿಂ Ì ಹೇಳಿದ್ದಾರೆ.
Advertisement
ಆರೋಪಗಳ ಸುರಿಮಳೆಆಂಧ್ರದಲ್ಲಿ ಒಂದು ಬೂತ್‌ನಲ್ಲಿ ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಒಂದೇ ಪಕ್ಷಕ್ಕೆ ಮತ ಬೀಳುತ್ತಿತ್ತು. ಬಿಜೆಪಿ ಇವಿಎಂಗಳನ್ನು ಹ್ಯಾಕ್ ಮಾಡಿದೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ದೇಶದ ಜನ ಇವಿಎಂ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸು ವಂತೆ ಮಾಡಿದೆ ಎಂದೂ ಹೇಳಿದ್ದಾರೆ. ವಿವಿಪ್ಯಾಟ್ ಡಿಸ್‌ಪ್ಲೇ 7 ಸೆಕೆಂಡ್‌ಗಳವರೆಗೆ ಮತ ಯಾರಿಗೆ ಹಾಕಿದ್ದಾರೆ ಎಂಬುದನ್ನು ತೋರಿಸಬೇಕು. ಆದರೆ ದೋಷಪೂರಿತ ಯಂತ್ರದಲ್ಲಿ 3 ಸೆಕೆಂಡ್‌ಮಾತ್ರವೇ ರಸೀದಿ ಕಾಣುತ್ತದೆ. ಶೇ. 20-25ರಷ್ಟು ಮತಯಂತ್ರಗಳು ಕೆಲಸ ಮಾಡುತ್ತಿಲ್ಲ. ಇಂಥ ದೋಷಪೂರಿತ ಇವಿಎಂ ಗಳಿಂದಾಗಿ ಜನ ಬೆಳಗಿನ ಜಾವ 4 ಗಂಟೆವರೆಗೂ ಮತ ಹಾಕ ಬೇಕಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಸೋಲನ್ನು ಒಪ್ಪಿಕೊಂಡ ವಿಪಕ್ಷಗಳು
ಇವಿಎಂ ಮೇಲೆ ಆರೋಪ ಹೊರಿಸುವ ಮೂಲಕ ವಿಪಕ್ಷಗಳು ತಮ್ಮ ಸೋಲಿಗೆ ನೆವ ಹುಡುಕಿವೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ವ್ಯಂಗ್ಯವಾಡಿದ್ದಾರೆೆ. ಈ ಚುನಾವಣೆಯಲ್ಲಿ ಬಿಜೆಪಿಯ ಎದುರು ಗೆಲ್ಲಲು ಸಾಧ್ಯವಾಗದೇ ಇರುವುದಷ್ಟೇ ಅಲ್ಲ, ವಿಪಕ್ಷವಾಗಿಯೂ ಅವರು ಸೋತಿದ್ದಾರೆ. ಬಹುತೇಕ ಪ್ರತ್ಯೇಕವಾಗಿ ಕಣಕ್ಕಿಳಿದಿರುವ ಈ ಪಕ್ಷಗಳಿಗೆ ಸೋಲುತ್ತೇವೆಂಬುದು ಖಚಿತವಾಗಿವೆ. ಅದಕ್ಕಾಗಿ ಹೀನಾಯ ಸೋಲಿಗೆ ಈ ಮೂಲಕ ನೆಪ ಹೇಳುತ್ತಿವೆ ಎಂದು ರಾವ್ ಟೀಕಿಸಿದ್ದಾರೆ. ಆರೋಪಿಯನ್ನು ದೂರವಿಟ್ಟ ಆಯೋಗ
ಶನಿವಾರ ಚುನಾವಣ ಆಯೋಗವನ್ನು ಭೇಟಿ ಮಾಡಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ನಿಯೋಗದಲ್ಲಿ ಇವಿಎಂ ಕಳವು ಆರೋಪ ಹೊತ್ತಿರುವ ಸ್ವಯಂ ಘೋಷಿತ ತಾಂತ್ರಿಕ ಪರಿಣತರೊಬ್ಬರೂ ಇದ್ದುದಕ್ಕೆ ಚುನಾವಣ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಹರಿಪ್ರಸಾದ್ ವೇಮುರು ಎಂಬ ವ್ಯಕ್ತಿ 2011ರಲ್ಲಿ ಇವಿಎಂ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸುವ ವೇಳೆ ಇವಿಎಂ ಕಳ್ಳತನ ಮಾಡಿದ್ದರು. ಅವರ ವಿರುದ್ಧ ಆಗ ದೂರು ದಾಖಲಾಗಿದೆ. ಹೀಗಾಗಿ ಅವರೊಂದಿಗೆ ಇವಿಎಂ ಸಮಸ್ಯೆಗಳ ಕುರಿತು ಚರ್ಚಿಸುವುದು ಸೂಕ್ತವಲ್ಲ ಎಂದು ಆಯೋಗ ಹೇಳಿದೆ. ಹೀಗಾಗಿ ಆರೋಪ ಇಲ್ಲದ ವ್ಯಕ್ತಿಯನ್ನು ಕಳುಹಿಸುವಂತೆ ಟಿಡಿಪಿಗೆ ಆಯೋಗ ಸೂಚಿಸಿದೆ. ಹರಿ ಪ್ರಸಾದ್ ಸದ್ಯ ಸಿಎಂ ನಾಯ್ಡುಗೆ ತಾಂತ್ರಿಕ ಸಲಹೆಗಾರರಾಗಿದ್ದಾರೆ. ಆಯೋಗದ ಸೂಚನೆಗೆ ತಿರುಗೇಟು ನೀಡಿರುವ ನಾಯ್ಡು, ನನ್ನ ಸಲಹೆಗಾರ ವೇಮುರು ಕಳ್ಳನಲ್ಲ, ಆತ ಮಾಹಿತಿದಾರ. 9 ವರ್ಷಗಳಲ್ಲಿ ಆತನ ವಿರುದ್ಧ ಯಾವುದೇ ಆರೋಪ ಪಟ್ಟಿ ದಾಖಲಾಗಿಲ್ಲ. 2011ರಲ್ಲಿ ದಿಲ್ಲಿಯಲ್ಲಿ ವಿವಿಪ್ಯಾಟ್‌ನ ಪ್ರಾಯೋಗಿಕ ಪರೀಕ್ಷೆಗೆ ವೇಮುರು ಅವರನ್ನು ಚುನಾವಣ ಆಯೋಗವೇ ದಿಲ್ಲಿಗೆ ಕರೆಸಿತ್ತು. ನನಗೂ ತಂತ್ರಜ್ಞಾನ ಗೊತ್ತಿದೆ. ನಾವು ತಂತ್ರಜ್ಞಾನದ ಮಾಸ್ಟರ್‌ಗಳಾಗಬೇಕೇ ವಿನಾ ಅದರ ಜೀತದಾಳು ಆಗಬಾರದು ಎಂದಿದ್ದಾರೆ.