Advertisement
ಕಳೆದ ನಾಲ್ಕೂವರೆ ವರ್ಷದಲ್ಲಿ ಎಲ್ಲೆಲ್ಲಿ ಚುನಾವಣೆ ನಡೆದಿತ್ತೋ ಅಲ್ಲೆಲ್ಲಾ ಕಾಂಗ್ರೆಸ್ ವಿರುದ್ಧ ಬಿಜೆಪಿ ಗೆದ್ದಿದೆ. ಆದರೆ, ಕರ್ನಾಟಕದಲ್ಲಿ ಪರಿಸ್ಥಿತಿ ಹಾಗಿಲ್ಲ. ಇಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸನ್ನು ನಾವು ಎದುರಿಸಬೇಕಿದೆ. ಜತೆಗೆ ಇತ್ತೀಚೆಗೆ ತನ್ನ ಕಾರ್ಯತಂತ್ರ ಬದಲಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ಅವರ ಕಾಂಗ್ರೆಸ್ ವಿರುದ್ಧವೂ ಹೋರಾಟ ನಡೆಸಬೇಕಿದೆ. ಆದ್ದರಿಂದ ಚುನಾವಣೆಯಲ್ಲಿ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಎಂದರು.
Related Articles
Advertisement
ಒಂದೆಡೆ ಕೇರಳದಲ್ಲಿ ಕೊಲೆ ಪ್ರಕರಣಗಳಲ್ಲಿ ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸುತ್ತಾರೆ. ಇನ್ನೊಂದೆಡೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವರಿಗೆ ಕೆಪು ಹಾಸಿನ ಸ್ವಾಗತ ಕೋರುತ್ತದೆ. ಬಿಜೆಪಿಯವರು ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹೇಳುತ್ತಾ ಅವರೇ ಬಿಬಿಎಂಪಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಎಸ್‌ಡಿಪಿಐ ಸದಸ್ಯನನ್ನು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಕಾಂಗ್ರೆಸ್‌ನ ಇಂತಹ ದ್ವಂದ್ವಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕೇಂದ್ರ ಸಚಿವ ಅನಂತಕುಮಾರ್, ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಜೆ.ವಿ.ಎಲ….ನರಸಿಂಹ ರಾವ್, ಸಂಬಿತ್ ಪಾತ್ರ ಸೇರಿದಂತೆ ರಾಜ್ಯ ವಕ್ತಾರರು, ಮಾಧ್ಯಮ ವಿಭಾಗದ ಪ್ರಮುಖರು ಹಾಜರಿದ್ದರು.
ಮೋದಿ ಎಂದರೆ ವಿಕಾಸ, ರಾಹುಲ್ ಎಂದರೆ ವಿನಾಶ, ಸಿದ್ದರಾಮಯ್ಯ ಎಂದರೆ ಸರ್ವನಾಶಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎಂದರೆ ವಿಕಾಸ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಂದರೆ ವಿನಾಶ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರೆ ಸರ್ವನಾಶ. ಇದು ಕೇಂದ್ರ ಸಚಿವ ಅನಂತಕುಮಾರ್ ಅವರ ವ್ಯಾಖ್ಯಾನ. ನಗರದ ಆನಂದರಾವ್ ವೃತ್ತದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಬಿಜೆಪಿ ಮಾಧ್ಯಮ ಕಾರ್ಯಾಗಾರದಲ್ಲಿ ಅವರು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಾಲಿನ ವಿನಾಶದ ಸಂಕೇತ ಎಂದು ವ್ಯಂಗ್ಯವಾಡಿದರಲ್ಲದೆ, ಸಿದ್ದರಾಮಯ್ಯ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲೂ ಕಾಂಗ್ರೆಸ್ ವಿನಾಶಕ್ಕೆ ನಾಂದಿ ಹಾಡುತ್ತಿದ್ದಾರೆ ಎಂದರು. ಸಾಧಾರಣವಾಗಿ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಹಿಂದಿನ ಕೇಂದ್ರ ಸರ್ಕಾರಗಳ ಜತೆ ಹೋಲಿಸುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಹಿಂದಿನ ಮನಮೋಹನ್ ಸಿಂಗ್ ಸರ್ಕಾರಕ್ಕೆ ಹೋಲಿಸದೆ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರದ ಜತೆ ಹೋಲಿಸುತ್ತಾರೆ. ಇದು ರಾಹುಲ್ ಗಾಂಧಿ ಸ್ಟೈಲ್ ಎಂದು ವ್ಯಂಗ್ಯವಾಡಿದರು. ಥೈಲ್ಯಾಂಡ್‌ನಲ್ಲಿ ಧ್ಯಾನ ಮಾಡುವವರು: ಕೆಲ ತಿಂಗಳ ಹಿಂದೆ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ವಾಪಸ್ ಬಂದ ಮೇಲೆ ಮಾಧ್ಯಮದವರು ಪ್ರಶ್ನಿಸಿದಾಗ ನಾನು ಥೈಲ್ಯಾಂಡ್‌ಗೆ ಧ್ಯಾನ ಮಾಡಲು ಹೋಗಿದ್ದೆ ಎಂದು ಹೇಳಿದ್ದರು. ಧ್ಯಾನ ಮಾಡುವವರು ಯಾರಾದರೂ ಹಿಮಾಲಯಕ್ಕೆ ಹೋಗುತ್ತಾರೆಯೇ ಹೊರತು ಥೈಲ್ಯಾಂಡ್‌ಗೆ ಹೋಗುತ್ತಾರೆಯೇ? ಥೈಲ್ಯಾಂಡ್‌ಗೆ ಹೋಗುವುದು ಬೇರೆ ವಿಚಾರಕ್ಕೆ ಎಂಬುದು ರಾಹುಲ್‌ಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಇಂದಿರಾಗಾಂಧಿ ಜೈಲಿಗೆ ಹೋಗಿದ್ದನ್ನು ಜನರಿಗೆ ತಿಳಿಸಿ
ಬೆಂಗಳೂರು: ಮಾತೆತ್ತಿದರೆ ಬಿಜೆಪಿಯವರು ಜೈಲಿಗೆ ಹೋಗಿ ಬಂದವರು ಎನ್ನುವ ಕಾಂಗ್ರೆಸ್‌ನ ಮಾಜಿ ಪ್ರಧಾನಿ ಇಂದಿರಾಗಾಂಧಿ ಅರಮನೆಗೆ ಹೋಗಿ ಬಂದಿದ್ದರೇ? ಚುನಾವಣಾ ಅಕ್ರಮ ಎಸಗಿ ಜೈಲಿಗೆ ಹೋಗಿಬಂದ ಏಕೈಕ ಪ್ರಧಾನಿ ಅವರು. ಇಂತಹ ವಿಚಾರಗಳನ್ನು ಫೇಸ್‌ಬುಕ್, ಟ್ವಿಟರ್, ವಾಟ್ಸ್ ಆ್ಯಪ್ ಮೂಲಕ ಹರಿಬಿಡಬೇಕು. ಎಲ್ಲಾ ಕಡೆ ಈ ಪ್ರಶ್ನೆ ಎತ್ತಬೇಕು… ಇದು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಮೋರ್ಚಾ ಪದಾಧಿಕಾರಿಗಳು ಮತ್ತು ಕಾಯಕರ್ತರಿಗೆ ಹೇಳಿದ ಕಿವಿಮಾತು. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ಬಿಜೆಪಿ ಯುವ ಮೋರ್ಚಾದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಾಂಗ್ರೆಸ್‌ನ ಟೀಕೆಗಳಿಗೆ ಪ್ರತ್ಯುತ್ತರ ನೀಡುವಂತೆ ಹೇಳಿದರು.
ಸಿದ್ದರಾಮಯ್ಯನಂತಹ ಮನುಷ್ಯನನ್ನು ಬೆಳೆಸಿದ್ದು ನನ್ನ ತಪ್ಪು ಎಂದು ಎಚ್.ಡಿ.ದೇವೇಗೌಡರೇ ಒಪ್ಪಿ ಕೊಂಡಿದ್ದಾರೆ. ಸಿದ್ದರಾಮಯ್ಯ ಜನತಾದಳ ದಲ್ಲಿದ್ದಾಗ ಇಂದಿರಾಗಾಂಧಿ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದರು. ಈಗ ಅದೇ
ಸಿದ್ದರಾಮಯ್ಯ ದೇವೇಗೌಡರನ್ನು ಟೀಕಿಸಿ ಇಂದಿರಾ ಗಾಂಧಿಯನ್ನು ಹೊಗಳುತ್ತಿ ದ್ದಾರೆ ಎಂದು ವ್ಯಂಗ್ಯವಾಡಿದರು.