Advertisement

ಸಂವಿಧಾನ ಬದಲಿಸುವುದು ಬಿಜೆಪಿ ಕಾರ್ಯಸೂಚಿ

11:53 AM Jan 19, 2018 | Team Udayavani |

ಮೈಸೂರು: ರಾಜ್ಯದಲ್ಲಿ ಮತಗಳ ಧ್ರುವೀಕರಣ ಮಾಡುವ ದುರುದ್ದೇಶದೊಂದಿಗೆ ಸಂಸದ ಅನಂತಕುಮಾರ್‌ ಹೆಗಡೆ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಾಗಿದ್ದು, ಸಂವಿಧಾನದ ಬದಲಾವಣೆ ವಿಷಯದ ಬಗ್ಗೆ ಸಚಿವರಿಗೆ ಗಿಳಿಪಾಠ ಮಾಡಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪೊ›.ಬಿ.ಕೆ.ಚಂದ್ರಶೇಖರ್‌ ಆರೋಪಿಸಿದರು.

Advertisement

ಸಚಿವ ಅನಂತ್‌ಕುಮಾರ್‌ ಹೆಗಡೆ ಅವರಿಗೆ ಈ ರೀತಿಯ ಕೆಲಸ ಮಾಡಲಿ ಎಂದೇ ಉದ್ದೇಶ ಪೂರ್ವಕವಾಗಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ಮನಬಂದತೆ ಮಾತನಾಡುವ ಸಚಿವರಿಗೆ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ ಎನ್ನುವುದು ರಾಜಕೀಯ ತಂತ್ರಗಾರಿಕೆಯಾಗಿದ್ದು,

ಸ್ವಾತಂತ್ರ್ಯ ಹೋರಾಟಗಾರರಿರುವ ಸುಶಿಕ್ಷಿತರ ಜಿಲ್ಲೆಯ ಸಂಸದರಾಗಿರುವ ಅನಂತಕುಮಾರ್‌ ಹೆಗಡೆ ಅವರಿಗೆ ನಾಲಿಗೆ ಮೇಲೆ ಹಿಡಿತವೇ ಇಲ್ಲದಾಗಿದೆ. ಹೀಗಾಗಿ ಇವರನ್ನು ಸಚಿವ ಸಂಪುಟದಿಂದ ತೆಗೆಯಿರಿ ಎಂದು ಕೇಳುವುದಕ್ಕಿಂತ, ಮಾನ ಮರ್ಯಾದೆ ಇದ್ದರೆ ಈ ರೀತಿ ಮಾಡುವುದನ್ನು ನಿಲ್ಲಿಸಿ ಬಿಜೆಪಿ ಅವರಿಗೆ ಹೇಳುವುದೇ ಸೂಕ್ತವೆಂದು ಗುರುವಾರ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಿಳಿಪಾಠ ಮಾಡಲಾಗಿದೆ: ದೇಶದ ಸಂವಿಧಾನ ಬದಲಿಸುವುದಾಗಿ ಹೇಳುವ ಬಿಜೆಪಿ ಅವರಿಗೆ ಅವಕಾಶ ದೊರೆತರೇ, ಸಂವಿಧಾನದ ಕಲಂ 29 ಮತ್ತು 30ನ್ನು ತೆಗೆದು ಹಾಕುತ್ತಾರೆ. ಇದೆಲ್ಲವೂ ಬಿಜೆಪಿ ಅವರ ಪೂರ್ವನಿಯೋಜಿತ ಆಲೋಚನೆಯಾಗಿದ್ದು, ಸಂವಿಧಾನ ಬದಲಿಸುವುದಾಗಿ ಅನಂತಕುಮಾರ್‌ ಹೆಗಡೆ ಅವರು ನೀಡುತ್ತಿರುವ ಹೇಳಿಕೆ ಸ್ವಂತಃ ಹೇಳಿಕೆಯಲ್ಲ, ಬದಲಿಗೆ ಅವರಿಗೆ ಗಿಳಿಪಾಠ ಮಾಡಲಾಗಿದೆ ಎಂದು ಟೀಕಿಸಿದರು.

ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ನಾಯಕರು ದೇಶ ಹಾಗೂ ದೇಶದ ಜನರನ್ನು ತಪ್ಪುದಾರಿಗೆ ಕೊಂಡೊಯ್ಯುತ್ತಿದ್ದಾರೆ. ಹೀಗೆ ಮುಂದುವರಿದರೆ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎನ್ನುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ಅವರನ್ನು ದೇಶ ದ್ರೋಹಿ ಎಂದರು ಅಚ್ಚರಿಪಡುವಂತಿಲ್ಲ ಎಂದು ಹೇಳಿದರು.

Advertisement

ಪ್ರಚಾರಕ್ಕೆ ವಿಷಯವೇ ಇಲ್ಲ: ರಾಜ್ಯದ ಅಭಿವೃದ್ಧಿ ಕೆಲಸಗಳು ಮಾದರಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ 2018ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಚಾರದ ವಿಷಯವೇ ಇಲ್ಲದಂತೆ ಮಾಡಿದ್ದು, ಆ ಮೂಲಕ ಸಿದ್ದರಾಮಯ್ಯ ಅವರು ಬಿಜೆಪಿ ಅಜೆಂಡಾ ಕಸಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅವರು ತಮ್ಮ ಬಾಷೆ ಮತ್ತು ಮಾತಿನ ದಾಟಿಯನ್ನು ಬದಲಿಸಿಕೊಂಡು ಅಭಿವೃದ್ಧಿ ವಿಷಯದ ಕುರಿತು ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದರು.

ಕೇಂದ್ರದ ವಿರುದ್ಧ ಕಿಡಿ: 2014ರ ಚುನಾವಣಾ ಪ್ರಾಣಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫ‌ಲವಾಗಿದೆ. ಯುವಕರಿಗೆ ಉದ್ಯೋಗ ಸೃಷ್ಟಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ, ಮಹಿಳೆಯರಿಗೆ ರಕ್ಷಣೆ ಮಾಡುವ ಮತ್ತು ಮಹಿಳೆಯರ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಿದ್ದ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸದ ಕಾರಣ ಸಿದ್ದರಾಮಯ್ಯ ಅವರನ್ನು ಹಿಂದು ವಿರೋಧಿ ಎಂದು ಹೇಳುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿಕೆ ಖಂಡನೀಯ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌, ನಗರಾಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಶ್ರೀನಾಥ್‌ ಬಾಬು, ಮಾಧ್ಯಮ ಸಂಚಾಲಕ ಮಹೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next