Advertisement

ಹಕ್ಕಿ ಮತ್ತು ಮರಿ

03:01 PM Jul 18, 2021 | Team Udayavani |

ಒಂದೂರಲ್ಲಿ ಹಕ್ಕಿಯೊಂದು ತನ್ನ ಸುಂದರವಾದ ಗೂಡಿನೊಳಗೆ ವಾಸವಾಗಿತ್ತು. ಅದು ತನ್ನ ಗೂಡನ್ನು ಯಾರ ಕೈಗೂ ಸಿಗಲಾರದಷ್ಟು ಒಂದು ಮನೆಯ ಮಹಡಿ ಮೇಲೆ ಕಟ್ಟಿತ್ತು. ಹಕ್ಕಿಗೆ ಮೂರು ಮರಿಗಳಿದ್ದವು. ಆದರೆ ಆ ಹಕ್ಕಿಗೆ ತನ್ನ ಮೊದಲೆರಡು ಮರಿಗಳೆಂದರೆ ತುಂಬಾನೇ ಇಷ್ಟವೋ ಇಷ್ಟ. ಆದರೆ ಮೂರನೆಯ ಮರಿಯನ್ನು ಅಷ್ಟೊಂದು ಇಷ್ಟಪಡುತ್ತಿರಲಿಲ್ಲ.

Advertisement

ಹಕ್ಕಿಯು ಆಹಾರ ಹುಡುಕಿಕೊಂಡು ಬಂದು ತನ್ನ ಮೊದಲೆರಡು ಮರಿಗಳಿಗೆ ಆಹಾರವನ್ನು ಹೆಚ್ಚು ಕೊಡುತ್ತಿತ್ತು. ಆದರೆ ಆ ಮೂರನೆಯ ಮರಿಗೆ ಸ್ವಲ್ಪ ಕೊಡುತ್ತಿತ್ತು. ಹಾಗೆ ಅದರ ಬಗ್ಗೆ ಅಷ್ಟೊಂದು ಕಾಳಜಿ ತೋರಿಸುತ್ತಿರಲಿಲ್ಲ.

ಒಂದು ದಿವಸ ಆ ಹಕ್ಕಿಯು ಮೂರನೇ ಮರಿಗೆ , “ನಿನಗೆ ಬೇರೆ ಕಡೆ ವಾಸಿಸಲು ಸ್ಥಳವನ್ನು ಹುಡುಕಿರುವೆ, ನಾಳೆಯೇ ನಿನ್ನನ್ನು ಆ ಸ್ಥಳಕ್ಕೆ ಬಿಟ್ಟು ಬರುವೆ’ ಎಂದು ಹೇಳಿತು. ಇದನ್ನು ಕೇಳಿದ ಆ ಮೂರನೆಯ ಮರಿಗೆ ಸಿಡಿಲು ಬಡಿದಂತಾಯಿತು ಮತ್ತು ಆ ಮೂರನೆಯ ಮರಿಯು ಮನನೊಂದು ತನ್ನ ಮನಸ್ಸಿನಲ್ಲಿಯೇ, “ನಾನು ಹುಟ್ಟಿದ್ದು ದುರಾದೃಷ್ಟ, ನನ್ನಿಂದ ಈ ಗೂಡಿನ ಮರಿಗಳಿಗೆ ಮತ್ತು ಹಕ್ಕಿಗೆ ತುಂಬಾ ತೊಂದರೆಯಾಗುತ್ತಿದೆ’ ಎಂದು ಹೇಳಿಕೊಂಡಿತು. ಅನಂತರ ಆ ಮನನೊಂದ ಮರಿಯು ತಟ್ಟನೆ ಆ ಗೂಡಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿತು.

ಈ ಕಥೆಯನ್ನು ಕೇಳಿದ ಅನಂತರ ಓದುಗರಲ್ಲಿ ಒಂದು ಪ್ರಶ್ನೆ ಮೂಡಿರಬಹುದು. ಅದೇನೆಂದರೆ ಹಕ್ಕಿಯು ಮೂರನೆಯ ಮರಿಗೆ ಯಾಕೆ ಪ್ರೀತಿ, ಮಮತೆಯನ್ನು ತೋರುತ್ತಿರಲಿಲ್ಲ? ಯಾಕೆಂದರೆ ಆ ಮೂರನೆಯ ಮರಿಯು ಆ ಹಕ್ಕಿಯ ಸ್ವಂತ ಮರಿಯಾಗಿರುವುದಿಲ್ಲ. ಮತ್ತು ಒಮ್ಮೆ ಆ ಹಕ್ಕಿಯು ಸಂಚರಿಸುತ್ತಿರುವಾಗ ಕೆಳಗೆ ಒಂದು ಹಕ್ಕಿ ಮರಿಯು ಗಾಯಗೊಂಡು ಬಿದ್ದಿತ್ತಂತೆ. ಅದನ್ನು ನೋಡಿದ ಈ ಹಕ್ಕಿಯು ಕನಿಕರದಿಂದ ಈ ಮರಿಯನ್ನು ಎತ್ತಿಕೊಂಡು ತನ್ನ ಗೂಡಿಗೆ ತಂದು ಬಿಟ್ಟಿತ್ತು. ಆ ಗಾಯಗೊಂಡ ಮರಿಯೇ ಮೂರನೆಯ ಮರಿ. ಮಕ್ಕಳಿಗೆ ತಾಯಿ ಹೇಗೆ ಆಶ್ರಯ ಕೊಟ್ಟು ಸಲಹುತ್ತಾಳ್ಳೋ, ಹಾಗೆ ಹಕ್ಕಿಗಳಿಗೆ ಗೂಡು ಆಶ್ರಯ ಕೊಟ್ಟು ಸಲಹುತ್ತದೆ.

 

Advertisement

ರಾಕೇಶ ವಿ. ಪತ್ತಾರ, ಐಕೂರ 

ಆದರ್ಶ ವಿದ್ಯಾಲಯ ಶಹಾಪುರ, ಯಾದಗಿರಿ

Advertisement

Udayavani is now on Telegram. Click here to join our channel and stay updated with the latest news.

Next