Advertisement

ಇಮ್ರಾನ್‌ ಸಾಮ್ರಾಜ್ಯದಲ್ಲಿ ಜೈಶ್‌ ಉಗ್ರರಿಗೆ ಜೈಕಾರ

06:00 AM Jul 28, 2018 | |

ಹೊಸದಿಲ್ಲಿ: ಪಾಕಿಸ್ಥಾನದ ಪ್ರಧಾನಿ ಪಟ್ಟಕ್ಕೇರಲು ಇಮ್ರಾನ್‌ ಖಾನ್‌ ಸಿದ್ಧತೆ ನಡೆಸುತ್ತಿರುವಂತೆಯೇ, ಜೈಶ್‌ ಎ ಮೊಹಮ್ಮದ್‌ ಎಂಬ ಪಾಪಿಗಳ ಲೋಕವೂ ತನ್ನ ಹಠವು ಹೆಚ್ಚಿಸಿಕೊಳ್ಳಲು ಎಲ್ಲಾ ತಯಾರಿ ನಡೆಸುತ್ತಿದೆ. ಕಾಶ್ಮೀರದ ಮೇಲೆ ಕಣ್ಣಿಟ್ಟಿರುವ ಜೈಶ್‌ ಉಗ್ರ ಸಂಘಟನೆ, 2001ರ ಸಂಸತ್‌ ಮತ್ತು 2016ರ ಪಠಾಣ್‌ಕೋಟ್‌ ಸೇನಾ ನೆಲೆಯ ಮೇಲಿನ ದಾಳಿಗೆ ಕಾರಣವಾಗಿದ್ದು, ಈ ಸಂಘಟನೆ ಇದೀಗ ಪಾಕಿಸ್ಥಾನದಲ್ಲಿರುವ ಪಂಜಾಬ್‌ನ ಬಹವಾಲ್ಪುರದಲ್ಲಿ 15 ಎಕರೆ ಜಾಗದಲ್ಲಿ ಉಗ್ರ ತರಬೇತಿ ಕೇಂದ್ರ ಆರಂಭಿಸುತ್ತಿದೆ. ಈಗಾಗಲೇ ಕಾಮಗಾರಿ ಶುರುವಾಗಿದ್ದು, ಸದ್ಯದಲ್ಲೇ ಕಾರ್ಯಾರಂಭ ಮಾಡುವ ಸಾಧ್ಯತೆಗಳೂ ಇವೆ. ಇಲ್ಲಿ ಸಾವಿರಾರು ಮಕ್ಕಳಿಗೆ ಜಿಹಾದ್‌ ತರಬೇತಿ ನೀಡಲಾಗುತ್ತದೆ.

Advertisement

ಈ ಹಿಂದೆ ಮಾಜಿ ಪ್ರಧಾನಿ ನವಾಜ್‌ ಷರೀಫ್ ಬೆನ್ನಿಗೆ ನಿಂತಿದ್ದ ಈ ಉಗ್ರ ಸಂಘಟನೆ, ಈ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಗೆಲುವಿಗಾಗಿ ಎಲ್ಲ ರೀತಿಯ ಸಹಾಯ ಮಾಡಿದೆ. ಇದು ಭಾರತದ ಪಾಲಿಗೂ ಆತಂಕಕ್ಕೆ ಕಾರಣವಾಗಿರುವ ವಿಚಾರ. ಎಲ್ಲೋ ಒಂದು ಕಡೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿದ್ದ ಷರೀಫ್, ಉಗ್ರ ಸಂಘಟನೆಗಳಿಗೆ ಮೂಗುದಾರ ಹಾಕುವ ಕೆಲಸ ಮಾಡಿದ್ದರು. ಇದೇ ಜೈಶ್‌ ಕೆಂಗಣ್ಣಿಗೂ ಕಾರಣವಾಗಿತ್ತು. ಇದೀಗ ಜೈಶ್‌ ಮುಖ್ಯಸ್ಥ ಮಸೂದ್‌ ಅಜರ್‌ ನೇರವಾಗಿಯೇ ಇಮ್ರಾನ್‌ ಖಾನ್‌ ಬೆನ್ನಿಗೆ ನಿಂತಿರುವುದರಿಂದ ಈತನ ಉಗ್ರ ಕೆಲಸಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

15 ಎಕರೆಯಲ್ಲಿ ಕೇಂದ್ರ: ಸ್ಥಳೀಯ ಆಡಳಿತದ ಪ್ರಕಾರ, 15 ಎಕರೆ ಜಾಗವನ್ನು ಮಸೂದ್‌ ಅಜರ್‌ ಹೆಸರಿನಲ್ಲಿಯೇ ಖರೀದಿಸಲಾಗಿದೆ. ಈ ಭಾಗದಲ್ಲಿ ಭೂಮಿ ಬೆಲೆ ಗಗನಮುಖೀಯಾಗಿದೆ. ಒಂದು ಹೆಕ್ಟೇರ್‌ಗೆ 80 ರಿಂದ 90 ಸಾವಿರ ಪಾಕಿಸ್ಥಾನಿ ರೂಪಾಯಿ ಇದೆ. ಈ ಹಣವನ್ನು ಜಿಹಾದ್‌ ಕೆಲಸಕ್ಕಾಗಿಯೇ ಸಂಗ್ರಹಿಸಿ, ಜಮೀನು ಖರೀದಿಸಲಾಗಿದೆ. ಅಲ್ಲದೆ ಕೆಲವು ಜಮೀನು ಮಾಲೀಕರು ಧರ್ಮದ ಕೆಲಸಕ್ಕಾಗಿ ಉಚಿತವಾಗಿ ನೀಡಿದ್ದಾರೆ. 2017ರಲ್ಲಿ ಹಜ್‌ ಯಾತ್ರೆಗೆ ಹೋದವರ ಕಡೆಯಿಂದಲೂ ಹಣ ಪಡೆಯಲಾಗಿದೆ. ಜತೆಗೆ, ಪಂಜಾಬ್‌ನಲ್ಲಿ ಜೈಶ್‌ ಪ್ರಾಬಲ್ಯ ಹೆಚ್ಚಾಗಿದ್ದು, ಪ್ರತಿ ಮಸೀದಿಗಳಲ್ಲೂ ಹಣ ಸಹಾಯ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ ಎಂದು ಫ‌ಸ್ಟ್‌ಪೋಸ್ಟ್‌ ವರದಿ ಮಾಡಿದೆ. 

ಹೇಗಿದೆ ಉಗ್ರ ತರಬೇತಿ ಕೇಂದ್ರ?
ಇದೊಂದು ಸುಸಜ್ಜಿತ ಉಗ್ರ ತರಬೇತಿ ಶಿಬಿರ. ಒಂದು ಅಡುಗೆ ಮನೆ, ವೈದ್ಯ ಕೀಯ ಸೌಲಭ್ಯ ಗಳು, ತರಗತಿ ಕೊಠಡಿ ಗಳು, ಅತಿ ದೊಡ್ಡ ನೆಲಮಾಳಿಗೆ ಇದೆ. ಈ ನೆಲಮಾಳಿಗೆಯನ್ನು ತರಬೇತಿ ಪಡೆ ಯುವ ಯುವಕರನ್ನು ಸುರಕ್ಷಿತ ವಾಗಿ ಇರಿ ಸುವುದು ಮತ್ತು ಒಳಾಂಗಣ ಫೈರಿಂಗ್‌ ತರಬೇತಿಗೆ ಬಳಸಿಕೊಳ್ಳಲಾ ಗು ತ್ತದೆ. ಇದಷ್ಟೇ ಅಲ್ಲ, ಇಲ್ಲಿ ಸ್ವಿಮ್ಮಿಂಗ್‌ ಫ‌ೂಲ್‌, ಬಿಲ್ಗಾರಿಕೆ ತರಬೇತಿ ಸ್ಥಳ, ಕ್ರೀಡಾಂ ಗಣಗಳನ್ನೂ ನಿರ್ಮಿಸುವ ಯೋಜನೆ ಇದೆಯಂತೆ. ಒಟ್ಟಾರೆ ಯಾಗಿ ತನ್ನ ಎಲ್ಲಾ ಜಿಹಾದಿ ತರಬೇತಿಗಾಗಿ ಇದನ್ನು ಪ್ರಮುಖ ಕೇಂದ್ರವಾಗಿ ಬಳಸಿಕೊಳ್ಳುವ ಯೋಜನೆ ಜೈಶ್‌ಗೆ ಇದೆಯಂತೆ.

ಖಾನ್‌ಗೆ ಬೇಕು ಪಕ್ಷೇತರರ ಬೆಂಬಲ
ಪಾಕ್‌ ಚುನಾವಣೆ ಮತ ಎಣಿಕೆ ಶುಕ್ರವಾರವೂ ಮುಂದುವರಿದಿದೆ. ಪಾಕಿಸ್ಥಾನ ತೆಹ್ರಿಕ್‌-ಇ-ಇನ್ಸಾಫ್ ಪಕ್ಷ 117 ಸ್ಥಾನಗಳನ್ನು ಪಡೆದುಕೊಂಡು ಅಗ್ರ ಸ್ಥಾನದಲ್ಲಿದೆ. ಇಮ್ರಾನ್‌ ಖಾನ್‌ ಅವರಿಗೆ  ಸರಕಾರ ರಚಿಸಲು ಪಕ್ಷೇತರರು ಅಥವಾ ಇತರ ಸಣ್ಣ ಪಕ್ಷಗಳ ಬೆಂಬಲ ಬೇಕಾಗುತ್ತದೆ. ಖಾನ್‌ಗೆ ವಿವಿಐಪಿ ದರ್ಜೆಯ ರಕ್ಷಣೆಯನ್ನು ಸರಕಾರದ ವತಿಯಿಂದ ನೀಡಲಾಗಿದೆ. ಇದೇ ವೇಳೆ ಇಮ್ರಾನ್‌ ಖಾನ್‌ರನ್ನು ಸೋಲಿಸುವ ನಿಟ್ಟಿನಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ. ಜನರು ನೀಡಿದ ತೀರ್ಪನ್ನು ಗೌರವಿಸುತ್ತೇವೆ ಎಂದು ಪಿಎಂಎಲ್‌-ಎನ್‌ ಹೇಳಿದೆ. ಮೂವರು ಹಿಂದೂ ನಾಯಕರು: ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿಯ ಮಹೇಶ್‌ ಕುಮಾರ್‌ ಮಲಾನಿ ನ್ಯಾಷನಲ್‌ ಅಸೆಂಬ್ಲಿಯ ಮೊದಲ ಹಿಂದೂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಾಕ್‌ನಲ್ಲಿ ಮುಸ್ಲಿಮೇತರರಿಗೆ ಮತದಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಸಿಕ್ಕಿದ 16 ವರ್ಷಗಳ ಬಳಿಕ ಈ ಸಾಧನೆಯಾಗಿದೆ. ಜ್ಞಾನಚಂದ್‌ ಇಸ್ರಾನಿ ಸಾಂಘರ್‌ ಮತ್ತು ಹರಿರಾಮ್‌ ಕಿಶೋರಿಲಾಲ್‌ ಹೈದರಾಬಾದ್‌ ಕ್ಷೇತ್ರದಿಂದ ಸಿಂಧ್‌ ಪ್ರಾಂತ್ಯ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.

Advertisement

ಸುಮಾರು 15 ಎಕರೆ ಜಾಗದಲ್ಲಿ ತಲೆ ಎತ್ತುತ್ತಿದೆ ಈ ಕೇಂದ್ರ
ಪಾಕ್‌ ಸಂಸತ್‌ ಚುನಾವಣೆ ವೇಳೆ ಜೈಶ್‌ನಿಂದ ಇಮ್ರಾನ್‌ಗೆ ಸಹಾಯ
2001ರ ಸಂಸತ್‌ ಮೇಲಿನ ದಾಳಿ, 2016ರ ಪಠಾಣ್‌ಕೋಟ್‌ ದಾಳಿಗೆ ಜೈಶ್‌ ಕಾರಣ

Advertisement

Udayavani is now on Telegram. Click here to join our channel and stay updated with the latest news.

Next