ಮೊದಲು ಅಶ್ವತ್ಥ ಮರದ ಒಂದು ಭಾಗ ಮುರಿದು ಕಾಲೇಜು ಆವರಣದೊಳಗಿದ್ದ ಮಾವಿನ ಮರದ ಮೇಲೆ ಬಿದ್ದಿದೆ. ಬಳಿಕ ಮಾವಿನಮರ ಬುಡಸಮೇತ ಕಿತ್ತು ಕಟ್ಟಡಕ್ಕೆ ತೀರ ಸನಿಹದಲ್ಲೇ ನೆಲಕ್ಕುರುಳಿದೆ. ಬಳಿಕ ಅಶ್ವತ್ಥಮರವೂ ಬಲಬದಿ ರಸ್ತೆಗೆ ಉರುಳಿದೆ.
Advertisement
ಇತರ ದಿನಗಳಲ್ಲಿ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿರುತ್ತಿದ್ದರು. ಇಲ್ಲೇ ಶಿಕ್ಷಕರ ತರಬೇತಿ ಸಂಸ್ಥೆ (ಡಯಟ್) ಕೂಡ ಇದೆ. ಕೆಥೋಲಿಕ್ ಸೆಂಟರ್ ಕಟ್ಟಡದಿಂದ ಹರ್ಷ ಹೊಸ ಶೋರೂಂಗೆ ತೆರಳುವ ರಸ್ತೆ ಇದಾಗಿದ್ದು ವಾರದ ಇತರ ದಿನಗಳಲ್ಲಿ ದಟ್ಟನೆ ಇರುತ್ತದೆ. ರಜೆ ಇದ್ದುದರಿಂದ ಎಲ್ಲರೂ ಪಾರಾಗಿದ್ದಾರೆ.
ಮರ ವಿದ್ಯುತ್ ತಂತಿಗೆ ಬಿದ್ದು ಇಲ್ಲಿನ 5 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಒಂದು ವಿದ್ಯುತ್ ಕಂಬ ಮರದ ಅಡಿ ಇದೆ. ಕಂಬಗಳನ್ನು ಪುನರ್‌ನೆಡುವ ಕೆಲಸವನ್ನು ಮೆಸ್ಕಾಂ ಸಿಬಂದಿ ಬೆಳಗ್ಗಿನಿಂದಲೇ ಆರಂಭಿಸಿ ಸಂಜೆಯವರೆಗೂ ನಡೆಸಿದರು. ಶಾಲೆಯ ಮುಖ್ಯ ದ್ವಾರಕ್ಕೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ಈ ದ್ವಾರದಿಂದ ಪ್ರವೇಶ ಕಷ್ಟಸಾಧ್ಯವಾಗಿದೆ.