Advertisement
ನಗರದ ಸ್ಕೂಲ್ ಆಫ್ ರೋಶನಿ ನಿಲಯದ ಅಪರಾಧ ಪತ್ತೆ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವಿಭಾಗ ಮುಖ್ಯಸ್ಥೆ ಸರಿತಾ ಡಿ’ಸೋಜಾ ಅವರ ಮಾರ್ಗದರ್ಶನದಲ್ಲಿ 2018ರಲ್ಲಿ ನಡೆಸಿದ ಅಧ್ಯಯನದಲ್ಲಿ ರವಿವಾರ ಅಪಘಾತ ಪ್ರಮಾಣ ಹೆಚ್ಚಳವಾಗಿರುವುದು ತಿಳಿದು ಬಂದಿದೆ. ವಿದ್ಯಾರ್ಥಿಗಳು ನಗರದ ವಿವಿಧ ಸಂಚಾರಿ ಪೊಲೀಸ್ ಠಾಣೆಗಳಿಂದ 2015-17ರ ನಡುವಿನ ಡೇಟಾವನ್ನು ಕಲೆ ಹಾಕಿದ್ದು, ಪ್ರತಿ ದಿನದ ಅಪಘಾತಗಳನ್ನು ಪಟ್ಟಿ ಮಾಡಿದ್ದಾರೆ. ಈ ಪೈಕಿ ರವಿವಾರ ಅಪರಾಹ್ನ 3ರಿಂದ ರಾತ್ರಿ 10 ಗಂಟೆ ನಡುವೆ ಶೇ. 21ರಷ್ಟು ಅಪಘಾತ ಸಂಭವಿಸಿರುವುದು ತಿಳಿದು ಬಂದಿದೆ. ಇದರಲ್ಲಿ ಶೇ. 20ರಷ್ಟು ಅಪಘಾತ ಸಂಜೆ 6ರಿಂದ 9 ಗಂಟೆಯೊಳಗೆ ಸಂಭವಿಸಿದ್ದಾಗಿದೆ. ಸೋಮವಾರ ಮಧ್ಯಾಹ್ನ 12ರಿಂದ 3 ಹಾಗೂ ಸಂಜೆ 6ರಿಂದ 9 ಗಂಟೆಯೊಳಗೆ ಶೇ. 16ರಷ್ಟು ರಸ್ತೆ ಅಪಘಾತಗಳು ಈ ಮೂರು ವರ್ಷಗಳ ಅವಧಿಯಲ್ಲಿ ಸಂಭವಿಸಿದೆ. ಉಳಿದಂತೆ ಎಲ್ಲ ವಾರಗಳಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ.
ನಗರದಲ್ಲಿ ನಡೆಯುವ ಬಹುತೇಕ ರಸ್ತೆ ಅಪಘಾತಗಳಲ್ಲಿ 25-35 ವಯಸ್ಸಿನವರೇ ಹೆಚ್ಚಿದ್ದಾರೆ. ಬಳಿಕ 35-45 ವಯಸ್ಸಿವರಿದ್ದಾರೆ. ಅಪಘಾತಕ್ಕೊಳಗಾದವರ ಪೈಕಿ ಬಹುತೇಕ ಬೈಕ್ ಚಾಲಕರು ಮತ್ತುಯುವಕರೇ ಸೇರಿದ್ದಾರೆ. ಮಧ್ಯಮ ವಯಸ್ಕರು ಮತ್ತು ಪ್ರಾಯಸ್ಥರು ಜಾಗರೂಕತೆಯಿಂದ ವಾಹನ ಚಲಾಯಿಸುವುದರಿಂದ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಅಂತಹವರಿಂದ ಆಗುವ ಅಪಘಾತಗಳ ಸಂಖ್ಯೆ ಕಡಿಮೆ ಇದೆ ಎನ್ನುತ್ತದೆ ಅಧ್ಯಯನ. 15-35 ವರ್ಷದೊಳಗಿನವರಿಂದ ಹಿಟ್ ಆ್ಯಂಡ್ ರನ್ ಕೇಸ್ ಪ್ರಕರಣ ಜಾಸ್ತಿಯಾಗುತ್ತಿವೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿರುವ ಅಂಶ ಎನ್ನುತ್ತಾರೆ ವಿಭಾಗ ಮುಖ್ಯಸ್ಥೆ ಸರಿತಾ ಡಿ’ಸೋಜಾ. ಅತಿವೇಗ ಕಾರಣ
ಅಪಘಾತಗಳಿಗೆ ಅತಿವೇಗ ಮತ್ತು ನಿರ್ಲಕ್ಷéದ ಚಾಲನೆಯೇ ಕಾರಣವಾಗಿದೆ. ರವಿವಾರ ಕಡಿಮೆ ಟ್ರಾಫಿಕ್ ಇರುವುದರಿಂದ ಅತಿವೇಗದ ಚಾಲನೆ ಮಾಡುತ್ತಿರುವುದೇ ಅಪಘಾತ ಸಂಭವಿಸಲು ಕಾರಣವಾಗುತ್ತಿದೆ. ರಾತ್ರಿ ಅತಿವೇಗದ ಚಾಲನೆ ಹೆಚ್ಚುತ್ತಿದೆ. ಅತಿಯಾದ ಟ್ರಾಫಿಕ್, ಬೈಕ್ ಸ್ಕಿಡ್ ಆಗುವುದರಿಂದಾಗಿ ಸಣ್ಣಪುಟ್ಟ ಅಪಘಾತಗಳು ಘಟಿಸಿವೆ. ಪಾಂಡೇಶ್ವರ, ಹಂಪನಕಟ್ಟೆ, ಮಾರ್ಕೆಟ್ ರೋಡ್, ಸ್ಟೇಟ್‌ಬ್ಯಾಂಕ್ ಸಹಿತ ನಗರದ 11 ಸ್ಥಳೀಯ ರಸ್ತೆಗಳಲ್ಲಿ ಶೇ. 41ರಷ್ಟು ಅಪಘಾತಗಳುಂಟಾದರೆ, ಶೇ. 33ರಷ್ಟು ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟಿಸಿದ್ದವಾಗಿವೆ. ಸುರತ್ಕಲ್, ಪಣಂಬೂರು, ಮೂಲ್ಕಿ, ನಂತೂರಿನಲ್ಲೇ ಹೆಚ್ಚಿನ ಅಪಘಾತ ಘಟಿಸಿವೆ. ಚಳಿಗಾಲದಲ್ಲಿ (ಡಿಸೆಂಬರ್-ಮಾರ್ಚ್) ಬಹುತೇಕ ಅಪಘಾತಗಳು ಘಟಿಸುತ್ತಿವೆ ಎಂಬುದಾಗಿ ಅಧ್ಯಯನದಲ್ಲಿ ಗೊತ್ತಾಗಿದೆ.
Related Articles
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 2015-17ರಲ್ಲಿ ಘಟಿಸಿದ ರಸ್ತೆ ಅಪಘಾತಗಳ ಕುರಿತು ವಿವಿಧ ಟ್ರಾಫಿಕ್ ಪೊಲೀಸ್ ಠಾಣೆಗಳಿಂದ ವಿದ್ಯಾರ್ಥಿಗಳು ಡೇಟಾ ಸಂಗ್ರಹಿಸಿ ಈ ಅಧ್ಯಯನ ಮಾಡಿದ್ದಾರೆ. 2018ರಲ್ಲಿ ನಡೆದ ಅಧ್ಯಯನ ಇದಾಗಿದ್ದು, ಮೂರು ವರ್ಷಗಳಲ್ಲಿ ರವಿವಾರವೇ ಶೇ. 21ರಷ್ಟು ರಸ್ತೆ ಅಪಘಾತ ಸಂಭವಿಸಿರುವುದು ಗೊತ್ತಾಗಿದೆ.
- ಸರಿತಾ ಡಿ’ಸೋಜಾ, ಅಪರಾಧಶಾಸ್ತ್ರ , ವಿಧಿವಿಜ್ಞಾನ ಶಾಸ್ತ್ರ ವಿಭಾಗ ಮುಖ್ಯಸ್ಥೆ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ
Advertisement
ಅಂಕಿ-ಅಂಶಶೇ. 41ರಷ್ಟು ಅಪಘಾತ ನಗರದ 11 ಸ್ಥಳೀಯ ರಸ್ತೆಗಳಲ್ಲಿ
ಶೇ. 33ರಷ್ಟು ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ
ರವಿವಾರ ಅಪರಾಹ್ನ 3ರಿಂದ ರಾತ್ರಿ 10ರ ನಡುವೆ ಶೇ. 21ರಷ್ಟು ಅಪಘಾತ
ರವಿವಾರ ಸಂಜೆ 6ರಿಂದ 9ರ ನಡುವೆ ಶೇ. 20ರಷ್ಟು ಅಪಘಾತ
ಸೋಮವಾರ ಮಧ್ಯಾಹ್ನ 12-3, ಸಂಜೆ 6ರಿಂದ 9ರೊಳಗೆ ಶೇ. 16ರಷ್ಟು ರಸ್ತೆ ಅಪಘಾತ