Advertisement

ಹೂಡಿಕೆ ಉತ್ತೇಜಿಸಲು ದಿ ಬಿಗ್‌ ಟೆಕ್‌ ಷೋ ಮೈಸೂರು

01:19 PM Oct 25, 2021 | Team Udayavani |

ಮೈಸೂರು: ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಹೆಸರಾಗಿರುವ ದಸರಾ ಖ್ಯಾತಿಯ ನಗರವು ಸೋಮವಾರ ತಂತ್ರಜ್ಞಾನ ಉದ್ದಿಮೆಗೆ ಸಂಬಂಧಿಸಿದ ದಿ ಬಿಗ್‌ ಟೆಕ್‌ ಷೋ ಮೈಸೂರು’ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಒಂದು ದಿನದ ಕಾರ್ಯಕ್ರಮವನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವರ್ಚುಯಲ್‌ ವೇದಿಕೆಯಲ್ಲಿ ಪಾಲ್ಗೊಂಡು ಉದ್ಘಾಟಿಸುವರು.

Advertisement

ರಾಜ್ಯದ ಐಟಿ/ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಸರ್ಕಾರದ ಕಾರ್ಯಕ್ರಮಗಳು ಹಾಗೂ ಉಪಕ್ರಮಗಳಾದ ಬಿಯಾಂಡ್‌ ಬೆಂಗಳೂರು’, ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌-ಕೆಡಿಇಎಂ’, ಮೇಕ್‌ ಇನ್‌ ಇಂಡಿಯಾ’, ಡಿಜಿಟಲ್‌ ಇಂಡಿಯಾ’ ಮತ್ತು ಸ್ಟಾರ್ಟ್‌ ಅಪ್‌ ಇಂಡಿಯಾ’ಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹೊಸ ಉದ್ದಿಮೆಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವರು. ಕಾರ್ಯಕ್ರಮದ ಭಾಗವಾಗಿ ಆಯ್ದ ಕಂಪನಿಗಳನ್ನು ಹಾಗೂ ನಗರ ಮೂಲದ ಉದ್ಯಮ ಪ್ರವರ್ತಕರನ್ನು ಸನ್ಮಾನಿಸಲಾಗುತ್ತದೆ.

ಜೊತೆಗೆ, ಕೆಡಿಇಎಂ ಹಾಗೂ ಭೇರುಂಡ ಫೌಂಡೇಷನ್‌, ಕೆಡಿಇಎಂ ಹಾಗೂ ಐಸ್ಯಾಕ್‌ ನಡುವೆ ಒಡಂಬಡಿಕೆಗಳು ಏರ್ಪಡಲಿವೆ. ಕೆಡಿಇಎಂ ಮೈಸೂರು ಶಾಖೆಯು ಸೈರ್ಬ ಭದ್ರತೆಗೆ ಸಂಬಂಧಿಸಿದ ಉತ್ಕೃಷ್ಠತಾ ಕೇಂದ್ರದ ಸ್ಥಾಪನೆಗಾಗಿ ಪ್ರಸ್ತಾವ ಸಲ್ಲಿಸಲಿದೆ. ನಗರವು ಇಡೀ ದೇಶದಲ್ಲೇ ಸಾಫ್ಟವೇರ್‌ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕೇಂದ್ರವಿರುವ ರಾಜಧಾನಿಯಲ್ಲದ ಮೊತ್ತಮೊದಲ ನಗರ ವಾಗಿದೆ. ಜೊತೆಗೆ, ಇದು ರಾಜ್ಯದಲ್ಲಿ ಸಾಫ್ಟ್‌ ವೇರ್‌ ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಮಾಹಿತಿ ತಂತ್ರಜ್ಞಾನ ವಲಯವಾಗಿ ವಿಕಾಸಗೊಳ್ಳುತ್ತಿದೆ. ‌

ಇದನ್ನೂ ಓದಿ:- ಯುಪಿಯ ಪೂರ್ವಾಂಚಲಕ್ಕೆ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದ ಪ್ರಧಾನಿ ಮೋದಿ

ಪ್ರಮುಖ ಶೈಕ್ಷಣಿಕ ಕೇಂದ್ರವೂ ಆಗಿರುವ ನಗರವು ಎಲೆಕ್ಟ್ರಾನಿಕ್‌ ವ್ಯವಸ್ಥೆ ವಿನ್ಯಾಸ ಹಾಗೂ ತಯಾರಿಕೆಯಲ್ಲೂ (ಇಎಸ್‌ಡಿಎಂ.) ದೃಢವಾದ ಹೆಜ್ಜೆಗಳನ್ನು ಇಟ್ಟು ಮುನ್ನಡೆಯುತ್ತಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಕಾರ್ಯಕ್ರಮವು ಗಮನಾರ್ಹವಾಗಿದೆ. ಸಿಐಐ ಮೈಸೂರು ಅಧ್ಯಕ್ಷ ಹಾಗೂ ಎನ್‌.ಆರ್‌.ಗ್ರೂಪ್‌ ನಿರ್ದೇಶಕ ಪವನ್‌ ರಂಗ, ಐಬಿಎಂ ಇಂಡಿಯಾ/ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪಟೇಲ್, ಬಯೋಕಾನ್‌ ಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ, ಸಂಸದ ಪ್ರತಾಪ್‌ ಸಿಂಹ, ರಾಜ್ಯ ನವೋದ್ಯಮ ದೂರದರ್ಶಿತ್ವ ಮಂಡಳಿ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಎಲೆಕ್ಟ್ರಾನಿಕ್ ಮತ್ತು ಐಟಿ/ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ನ್ಯಾಸ್‌ ಕಾಂ ಅಧ್ಯಕ್ಷ ದೇಬ್‌ ಜಾನಿ ಘೋಷ್‌, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು ಅವರು ಪಾಲ್ಗೊಳ್ಳುವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next