Advertisement

ಕದನ ವಿರಾಮ ಉಲ್ಲಂಘನೆ: ಪಾಕ್‌ ಫಿರಂಗಿ ಬಳಕೆ

08:15 AM Mar 01, 2018 | |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸುವುದು ಹೊಸತೇನಲ್ಲ. ಅಧಿಕೃತ ಮಾಹಿತಿ ಪ್ರಕಾರ ಹಾಲಿ ವರ್ಷದಲ್ಲಿ ಇದುವರೆಗೆ 411 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಉತ್ತರ ಕಾಶ್ಮೀರದ ಉರಿಗೆ ಹೊಂದಿಕೊಂಡಿರುವ ಎಲ್‌ಒಸಿ ಸಮೀಪವಿರುವ ಪಿರ್‌ ಪಂಜಾಲ್‌ ಪರ್ವತ ಪ್ರದೇಶಗಳಿಂದ 15 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಪಾಕ್‌ ಫಿರಂಗಿಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದೆ. ಕದನ ವಿರಾಮ ಉಲ್ಲಂಘನೆ ಒಪ್ಪಂದ 2003ರಲ್ಲಿ ನಡೆದ ಅನಂತರ ಫಿರಂಗಿಗಳನ್ನು  ಪಾಕ್‌ ಬಳಸಿರಲಿಲ್ಲ. 

Advertisement

ಸೆಪ್ಟಂಬರ್‌ 2016ರಲ್ಲಿ ಕ್ಷಿಪ್ರ ದಾಳಿ ನಡೆದ ಬಳಿಕ ಉಭಯ ದೇಶಗಳ ಮಧ್ಯೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದಾಗ 155 ಎಂಎಂ ಬೊಫೋರ್ಸ್‌ ಗನ್‌ ಸಹಿತ ಇತರ ಫಿರಂಗಿಗಳನ್ನು ಬಳಸಿ ಪಾಕ್‌ ಪಿರ್‌ ಪಾಂಜಾಲ್‌ ಪ್ರದೇಶದಲ್ಲಿ ದಾಳಿ ನಡೆಸಿದೆ. ಬೇಸಗೆಯಲ್ಲಿ ಗಡಿ ಒಳನುಸುಳುವಿಕೆ ಹಾಗೂ ಕದನ ವಿರಾಮ ಉಲ್ಲಂಘನೆ ಹೆಚ್ಚಳವಾಗುವ ಸಾಧ್ಯತೆಯಿದೆ.  ಈ ಮಧ್ಯೆ  ಜಮ್ಮುವಿನ ರಜೌರಿ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕ್‌ ಪಡೆಗಳು ಬುಧವಾರ ಗುಂಡಿನ ದಾಳಿ ನಡೆಸಿವೆ.

Advertisement

Udayavani is now on Telegram. Click here to join our channel and stay updated with the latest news.

Next