Advertisement

Hathras ಕಾಲ್ತುಳಿತ ಹಿಂದೆ ದೊಡ್ಡ ಸಂಚು, ಪೊಲೀಸರಿಂದಲೂ ತಪ್ಪಾಗಿದೆ; ಎಸ್‌ಐಟಿ

09:57 PM Jul 09, 2024 | Team Udayavani |

ಲಕ್ನೋ: ಹಾಥ್ರಸ್‌ ಕಾಲ್ತುಳಿತ ಘಟನೆಯ ಹಿಂದೆ ದೊಡ್ಡ ಸಂಚು ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಉತ್ತರಪ್ರದೇಶಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ. ಇದರ ಬೆನ್ನಲ್ಲೇ ಸರ್ಕಾರವು ಉಪ ವಿಭಾಗಾಧಿಕಾರಿ (ಎಸ್‌ಡಿಎಂ), ವೃತ್ತ ನಿರೀಕ್ಷಕ (ಸರ್ಕಲ್‌ ಆಫೀಸರ್‌), ತಹಸೀಲ್ದಾರ್‌, ಇನ್ಸ್‌ಪೆಕ್ಟರ್‌ ಸೇರಿ 6 ಅಧಿಕಾರಿಗಳನ್ನು ಅಮಾನತು ಮಾಡಿದೆ.

Advertisement

ಪ್ರಕರಣ ಸಂಬಂಧ ಇಲ್ಲಿಯವರೆಗೆ 9 ಜನರನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ಜುಲೈ 2ರಂದು ಸಂಭವಿಸಿದ ಹಾಥ್ರಸ್‌ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟಿದ್ದರು.

ಕಾಲು¤ಳಿತಕ್ಕೆ ಕಾರ್ಯಕ್ರಮದ ಸಂಘಟಕರನ್ನು ಹೊಣೆಗಾರರನ್ನಾಗಿ ಮಾಡಿರುವ ಎಸ್‌ಐಟಿ, ಬಹು ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ನಿರ್ವಹಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಜತೆಗೆ, ಸ್ಥಳೀಯ ಆಡಳಿತ ಮತ್ತು ಪೊಲೀಸರು ಈ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಮತ್ತು ಹಿರಿಯ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುವಲ್ಲಿ ತಪ್ಪೆಸಗಿದೆ ಎಂದು ತಿಳಿಸಿದೆ.

ಜಿಲ್ಲಾಡಳಿತ, ಪೊಲೀಸ್‌, ಸಾಮಾನ್ಯ ಜನರು ಮತ್ತು ಪ್ರತ್ಯಕ್ಷದರ್ಶಿಗಳು ಸೇರಿದಂತೆ 125 ಜನರ ಹೇಳಿಕೆಯನ್ನು ಎಸ್‌ಐಟಿ ತನಿಖೆ ವೇಳೆ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next