– ಮಳೆ ಬರುವ ಮುಂಚೆಯೇ ಹಸಿ ಮಣ್ಣನ್ನು ಅಗೆದು ಸಾಲಾಗಿ ತರಕಾರಿ ಗಿಡ ನೆಡಬೇಕು.
– ಅಲ್ಲೊಂದು ಕಡೆ ಬಯಲಲ್ಲಿ ಮೇಯತ್ತಿರುವ ಆಡಿನ ಮರಿಯನ್ನು ಮುದ್ದಾಡಬೇಕು.
– ಕೊಟ್ಟಿಗೆಯಲ್ಲಿ ಕಟ್ಟಿರುವ ದನಗಳಿಗೆ ಹುಲ್ಲು ತಿನ್ನಿಸಬೇಕು.
– ಮರದಲ್ಲಿ ಕಟ್ಟಿದ ಜೋಕಾಲಿಯಲ್ಲಿ ಕೂತು ಜೀಕಬೇಕು.
– ಸಣ್ಣದೊಂದು ಬಂಡೆ ಏರಿ ದಿಗ್ವಿಜಯ ಸಾಧಿಸಿದಂತೆ ಕೂಗಬೇಕು.
ಇವೆಲ್ಲಾ ಈ ಬೆಂಗಳೂರಲ್ಲಿ ಸಾಧ್ಯವಾ? ಖಂಡಿತಾ ಸಾಧ್ಯವಿದೆ. ಇವೆಲ್ಲವನ್ನೂ ನೀವು ಕೈಯಾರೆ ಮಾಡಬಹುದು. ಕಣ್ಣಾರೆ ನೋಡಬಹುದು. ಕುಣಿದು ಕುಪ್ಪಳಿಸಿ ಖುಷಿಯಾಗಬಹುದು. ಇಂಥದ್ದೊಂದು ಅಪರೂಪದ ಅವಕಾಶವನ್ನು ಒದಗಿಸುತ್ತಿರುವುದು ದಿ ಬಿಗ್ ಬಾರ್ನ್ ಫಾರ್ಮ್.
ನಿಮಗೆ ಒಂದು ದಿನದ ಮಟ್ಟಿಗೆ ರೈತರಾಗುವ ಆಸೆ ಇದ್ದರೆ ಇಲ್ಲಿಗೆ ಬನ್ನಿ ಅಂತ ಬಿಗ್ ಬಾರ್ನ್ ಫಾರ್ಮ್ ನಿಮ್ಮನ್ನು ಕರೆಯುತ್ತದೆ. ನಿಮಗೆ ಇಷ್ಟವಿದ್ದರೆ ಒನ್ ಫೈನ್ ಡೇ ಅಲ್ಲಿಗೆ ಹೋಗಬಹುದು. ಹೋಗುವ ಒಂದು ವಾರ ಮುಂಚೆಯೇ ನೀವು ಅವರಿಗೆ ಹೇಳಬೇಕು. ಹೇಳಿ ಅವರಿಂದ ಒಪ್ಪಿಗೆ ಪಡೆದ ನಂತರವೇ ನೀವು ಅಲ್ಲಿಗೆ ಹೋಗಲು ಸಾಧ್ಯ. ನೇರವಾಗಿ ಅಲ್ಲಿಗೆ ಹೋದರೆ ನಿಮಗೆ ಅಲ್ಲಿಗೆ ಬಾಗಿಲು ತೆರೆಯುವುದಿಲ್ಲ. ಯಾಕೆಂದರೆ ಅದೊಂದು ಫಾರ್ಮ್. ಅಲ್ಲಿ ಕೃಷಿ ಕೆಲಸಗಳು ನಡೆಯುತ್ತಿರುತ್ತವೆ. ಒಮ್ಮೆಲೆ ಯಾರಾದರೂ ಹೋದರೆ ಅಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಅವರು ಹೇಳಿದ ದಿನವೇ ಅಲ್ಲಿಗೆ ಹೋಗಬೇಕು.
ಮಕ್ಕಳಿಗಂತೂ ಈ ತಾಣ ಮ್ಯಾಜಿಕ್ ಜಗತ್ತಿದ್ದಂತೆ. ಇಲ್ಲಿಗೆ ಹೋದ ಮಕ್ಕಳು ಇಡೀ ದಿನ ಕುಣಿದು ಕುಪ್ಪಳಿಸುತ್ತಾರೆ. ಸ್ವಲ್ಪ ಕೃಷಿ ಜ್ಞಾನವನ್ನೂ ಪಡೆಯುತ್ತಾರೆ. ಬಂಡೆ ಹತ್ತಿಳಿದು ಹಳ್ಳಿಗೆ ಹೋದ ಅನುಭವವನ್ನು ಪಡೆದು ಸಂತೋಷಗೊಳ್ಳುತ್ತಾರೆ. ಇಷ್ಟವಿದ್ದವರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಇಲ್ಲಿ, ಪ್ರಕೃತಿ ಮಡಿಲಲ್ಲಿ ಆಚರಿಸಬಹುದು. ಮಕ್ಕಳು ವರ್ಷಪೂರ್ತಿ ನೆನಪಿಟ್ಟುಕೊಳ್ಳುವಂತೆ ಮಾಡಬಹುದು.
9900321111
ಇಮೇಲ್- bigbarnplay@gmail.com
ಫೇಸ್‌ಬುಕ್ ಪೇಜ್- //www.facebook.com/thebigbarn