Advertisement

ಕಾಲೇಜು ಎಂಬ ನೆನಪಿನಂಗಳದಿಂದ

10:55 PM Jul 29, 2020 | Karthik A |

ಜೂನ್‌, ಜುಲೈ ಸಾಮಾನ್ಯ ತಿಂಗಳಾದರೂ ವಿದ್ಯಾರ್ಥಿಗಳಿಗೆ ತುಂಬಾ ವಿಶೇಷ.

Advertisement

ಈ ತಿಂಗಳಿನಲ್ಲಿ ಶಾಲಾ, ಕಾಲೇಜು ಆರಂಭವಾಗುವುದು. ಜೂನ್‌ ಮೊದಲ ವಾರದಲ್ಲಿ ಹೈಸ್ಕೂಲ್‌ ವರೆಗೆ ಶಾಲೆ ಆರಂಭವಾದರೆ, ಜೂನ್‌ ಅಂತಿಮ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಕಾಲೇಜುಗಳು ಆರಂಭಗೊಳ್ಳುತ್ತವೆ.

ಸಣ್ಣ ಮಕ್ಕಳಿಗೆ ರಜೆ ಕಳೆದು ಮತ್ತೆ ಶಾಲೆಗೆ ಹೋಗುವುದೆಂದರೆ ಬೇಸರದ ವಿಷಯವಾದರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಖುಷಿಯ ವಿಷಯ.
ಈತನ್ಮಧ್ಯೆ ಪದವಿ ವಿದ್ಯಾರ್ಥಿಗಳ ಹೊಸದಾಗಿ ಕಾಲೇಜಿಗೆ ಸೇರಿದೆ ಎಂಬ ಗರಿ ತಲೆಯ ಮೇಲೆ ಇದ್ದರೂ, ಇನ್ನೊಂದೆಡೆ ಭಯ ಆವರಿಸಿರುತ್ತದೆ. ಹೊಸ ಕಾಲೇಜು, ಅಧ್ಯಾಪಕರು, ಹೊಸ ಮುಖಗಳು ಅಬ್ಟಾ ಕಾಲೇಜು ಬೇಡವೇನೋ ಎನಿಸುತ್ತದೆ. ಇದು ಹೊಸ ವಿದ್ಯಾರ್ಥಿಗಳ ಕಥೆ.

ಇನ್ನೂ ಈಗಾಗಲೇ ಕಾಲೇಜಿನಲ್ಲಿ ಓದುತ್ತಿರುವ ಸೀನಿಯರ್ಸ್‌ ವಿದ್ಯಾರ್ಥಿಗಳಂತೂ ಇದು ನಮ್ಮದೇ ಕಾಲೇಜು ಎಂಬ ಭಾವದೊಂದಿಗೆ ಕಾಲೇಜಿಗೆ ಎಂಟ್ರಿ ನೀಡುತ್ತಾರೆ. ಹೇಗಿದ್ದರೂ ಈ ತಿಂಗಳಲ್ಲಿ ಮಳೆ ಜಾಸ್ತಿ ಮಳೆಯಲ್ಲಿ ಕಾಲೇಜಿಗೆ ಹೋಗುವುದು ಸ್ವಲ್ಪ ಉದಾಸೀನ. ಇವತ್ತಾದರೂ ರಜೆ ಸಿಗಲಿ ಅಂತ ದಿನಾ ದೇವರನ್ನು ಬೇಡುವುದು, ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ರಜೆ ಕೊಟ್ಟರೆ ಅದೇನು ಆ ಜಿಲ್ಲೆಯವರು ಮಾತ್ರ ಮಕ್ಕಳಾ ನಾವು ಮಕ್ಕಳಲ್ವಾ? ಎನ್ನುವ 24 ಪ್ರಶ್ನೆಗಳ ಜತೆಗೆ ಒಂದಿಷ್ಟು ಇಡೀ ಶಾಪ ಹಾಕುವುದು ಕೇವಲ ಮಳೆಗಾಲದಲ್ಲಿ ಮಾತ್ರ ಎಂದೆನಿಸುತ್ತದೆ.

ಆದರೆ ಈ ಸಲ ಕೊರೊನಾ ಎಲ್ಲದಕ್ಕೂ ತಡೆಗೋಲಾಗಿದೆ. ನಾವು ಬೇಡದೆ ಈ ಸಲ ರಜೆ ಸಿಕ್ಕಿದೆ ಆದರೆ ಖುಷಿಯೇ ಇಲ್ಲ. ರಜೆ ಎಂದರೆ ನೆನಪಾಗುವುದು ವಿವಿಧ ಆಟ, ಸಮಾರಂಭ, ಎಲ್ಲರೊಂದಿಗೆ ಸೇರಿ ಮಾಡುತಿದ್ದ ಮೋಜು-ಮಸ್ತಿಗಳು. ಆದರೆ ಈ ರಜೆಯಲ್ಲಿ ಅವು ಯಾವುದೂ ನಡೆದಿಲ್ಲ. ಒಂದು ರೀತಿಯ ಬಂಧನದ ರಜೆಯಾಗಿದೆ.

Advertisement

ಕೊರೊನಾ ಕೆಲವೊಂದು ವಿಷಯಗಳಲ್ಲಿ ಮಾನವನಿಗೆ ಬುದ್ಧಿ ಕಲಿಸಿದೆ. ಆದರೂ ಇದು ಒಳ್ಳೆಯ ರೋಗ ಎಂದು ನಮ್ಮಲ್ಲಿಟ್ಟುಕೊಳ್ಳುವಂತಿಲ್ಲ. ನಮ್ಮ ರಕ್ಷಣೆ ನಮ್ಮ ಹೊಣೆ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸರಕಾರದ ನೀತಿ-ನಿಯಮಗಳನ್ನು ಪಾಲಿಸುತ್ತಾ ಕೊರೊನಾ ಮುಕ್ತ ಜಗತ್ತನ್ನು ಮಾಡುವಲ್ಲಿ ಯಶಸ್ವಿಯಾಗೋಣ.

ವಿನಯ ಆಚಾರ್ಯ ಬೈಲೂರು, ಎಂಪಿಎಂ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next