Advertisement

 “ಹೆತ್ತವರ ಉತ್ತಮ ಸಂಸ್ಕಾರವೇ ವಿದ್ಯಾರ್ಥಿಗಳಿಗೆ ಆದರ್ಶ’

02:15 AM Jul 15, 2017 | |

ಕಾಪು: ಮನೆಯ ವಾತಾವರಣದಲ್ಲಿ ಹೆತ್ತವರು ಜವಾಬ್ದಾರಿವಾಗಿ ವರ್ತಿಸಬೇಕು. ಪತಿ-ಪತ್ನಿಯರು ಪರಸ್ಪರ ಸೌಹಾರ್ದಯುತವಾಗಿ ಇರುವುದು, ಇನ್ನೊಬ್ಬರು ಯಾವುದೇ ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಪ್ರಶಂಸಿಸುವುದು, ಯಾವುದೇ ಸಂದರ್ಭದಲ್ಲಾಗಲೀ ತಾಳ್ಮೆಗೆಡದೆ ಶಾಂತಿಯಿಂದ ಇರುವುದು, ಮನೆಯ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯದಿಂದಿರುವುದು, ಅವರವರ ಧಾರ್ಮಿಕ ನಂಬಿಕೆಗೆ ತಕ್ಕಂತೆ ಅರ್ಥಪೂರ್ಣ ಆಚರಣೆಗಳನ್ನು ಮಾಡುವುದು ಇವೇ ಮೊದಲಾದ ಸಣ್ಣ ಪುಟ್ಟ ಸಂಗತಿಗಳನ್ನು ಹೆತ್ತವರು ಸದಾ ಪರಿಪಾಲಿಸಿದಾಗ ಮಕ್ಕಳು ಅದನ್ನು ರಕ್ಷಿಸುವ ಮೂಲಕ ತಮ್ಮಲ್ಲಿಯೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಲು ಕಾರಣವಾಗುತ್ತದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಯವರು ಅಭಿಪ್ರಾಯ ಪಟ್ಟದ್ದಾರೆ.

Advertisement

ಅವರು ಉಡುಪಿ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯಲ್ಲಿ ಮಕ್ಕಳ ಹೆತ್ತವರನ್ನು ಉದ್ಧೇಶಿಸಿ ಈ ಮಾತನ್ನು ಹೇಳಿದರು. ಸಂಘದ ಅಧ್ಯಕ್ಷರಾದ ಕೃಷ್ಣರಾಜ ಭಟ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಉಪಾಧ್ಯಕ್ಷ ಚಂದ್ರಶೇಖರ್‌, ಕೋಶಾಧಿಕಾರಿ ಗಣೇಶ್‌ ಕೋಟ್ಯಾನ್‌, ಶಾಲಾಭಿವೃದ್ಧಿ ಸುತಿಯ ಅಧ್ಯಕ್ಷ ಗಣೇಶ್‌, ಶಾಲಾ ಆಡಳಿತ ಮಂಡಳಿಯ ಸದಸ್ಯ ಕೃಷ್ಣಕುಮಾರ್‌ ರಾವ್‌, ಮುಖ್ಯೋಪಾಧ್ಯಾಯ ಗಣಪತಿ ಕಾರಂತ್‌ ಮೊದಲಾದವರು  ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶಿಕ್ಷಕಿ ಹೇಮಲತಾ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಶಿಕ್ಷಕಿ ಗೀತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next