ಪಾಣಾಜೆ: ಸರಕಾರಿ ಸವಲತ್ತುಗಳು ಜನಸಾಮಾನ್ಯರಿಗೆ ಸರಿಯಾಗಿ ಸಿಗುವಂತಾಗಬೇಕು. ಯಾವುದೇ ಕಾರಣಕ್ಕೂ ಕಾನೂನುಗಳ ತೊಡಕಿನಿಂದ ಸವಲತ್ತುಗಳು ವಿಫಲವಾಗಬಾರದು ಎಂದು ಪುತ್ತೂರು ಪ್ರಧಾನ ವ್ಯಾವಹಾರಿಕ ನ್ಯಾಯಾಧೀಶ, ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಪಿ.ಎಂ. ಹೇಳಿದರು.
ಅವರು ಪಾಣಾಜೆ ದ.ಕ.ಜಿ.ಪಂ. ಮಾದರಿ ಉನ್ನತ ಹಿ.ಪ್ರಾ. ಶಾಲೆಯಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ತಾಲೂಕು ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಡೆದ ಕಾನೂನು ಸಾಕ್ಷರತಾ ರಥ ಅಭಿಯಾನದಲ್ಲಿ ಮಾತನಾಡಿ, ಕಾನೂನು ಪ್ರಾಧಿಕಾರ ಕಾನೂನು ಜಾಗೃತಿ ಕಾರ್ಯಾಗಾರವನ್ನು ಜನರ ಬಳಿಗೆ ತಲುಪಿಸುವ ಯೋಜನೆ ಇರಿಸಿಕೊಂಡು ಮುಂದುವರಿಯುತ್ತಿದೆ ಎಂದರು.
ಪುತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಅಧ್ಯಕ್ಷತೆ ವಹಿಸಿದರು. ಮಕ್ಕಳ ಸಾಹಿತಿ ನುಳಿಯಾಲು ರಘುನಾಥ ರೈ ಮಾತನಾಡಿ, ಪ್ರಕೃತಿಯನ್ನು ವ್ಯಾವಹಾರಿಕ ದೃಷ್ಟಿಯಲ್ಲಿ ನೋಡಬಾರದು. ಅರಣ್ಯ ಮತ್ತು ಜಲ ಸಂರಕ್ಷಣೆ ಜೊತೆಯಲ್ಲಿ ಕಾನೂನಿನ ಅರಿವು ಜಾಗೃತಿಯಾಗಬೇಕು ಎಂದು ಹೇಳಿದರು.
ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು, ಖಚಾಂಚಿ ದಿವ್ಯರಾಂಜ್ ಹೆಗ್ಡೆ, ಜತೆ ಕಾರ್ಯದರ್ಶಿ ಮಮತಾ ಸುವರ್ಣ, ನ್ಯಾಯವಾದಿ ಕೃಪಾಶಂಕರ್, ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ವಿಪಿನ್ ಲಾಲ್, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಈಶ್ವರ್ ಭಟ್ ಕಡಂದೇಲು, ಸುಬೋಧ ಪ್ರೌಢಶಾಲೆಯ ಉಪಾಧ್ಯಕ್ಷ ಉಪೇಂದ್ರ ಬಲ್ಯಾಯ, ವಿವೇಕ ಹಿ.ಪ್ರಾ. ಶಾಲೆ ಮುಖ್ಯ ಗುರು ಸುನೀತಿ, ಒಡ್ಯ ಶಾಲಾ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಭಟ್, ಪ್ರಮುಖರಾದ ಸದಾಶಿವ ರೈ ಸೂರಂಬೈಲು, ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ, ಅಬ್ದುಲ್ ಕುಂಞಿ, ನ್ಯಾಯವಾದಿ ಹರಿಣಾಕ್ಷಿ, ಜನಾರ್ದನ, ರಮೇಶ್ ಬಾಬು, ಬೀಟ್ ಪೊಲೀಸ್ ಮುನಿಯ ನಾಯ್ಕ ಉಪಸ್ಥಿತರಿದ್ದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಡಾ| ಎಸ್. ಅಬೂಬಕ್ಕರ್ ಆರ್ಲಪದವು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಸುನೀತಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ವಿಮಲಾ, ಸುಂದರಿ, ಲೀನಾ ಫೆರಾವೋ, ಪುಷ್ಪಾವತಿ, ಸತ್ಯವತಿ ಕಡಂದೇಲು, ಕೃಷ್ಣಪ್ಪ ಪೂಜಾರಿ, ಶಿಕ್ಷಕಿ ಮಾಲತಿ, ರಂಗಪ್ಪ, ಅಕ್ಷತಾ ಸಹಕರಿಸಿದರು.
ಪುತ್ತೂರು ಪ್ರಧಾನ ವ್ಯಾವಹಾರಿಕ ನ್ಯಾಯಾಧೀಶ, ತಾ| ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಪಿ.ಎಂ. ಮಾತನಾಡಿದರು.