Advertisement

ಬೆನ್‌ ಸ್ಟೋಕ್ಸ್‌ ಸಾಹಸ ಇಂಗ್ಲೆಂಡಿಗೆ ರೋಚಕ ಜಯ

11:25 PM Aug 25, 2019 | Team Udayavani |

ಲೀಡ್ಸ್‌: ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 67 ರನ್ನಿಗೆ ಆಲೌಟಾದ ಆತಿಥೇಯ ಇಂಗ್ಲೆಂಡ್‌, ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರ ಅಮೋಘ ಸಾಹಸದಿಂದ ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಒಂದು ವಿಕೆಟ್‌ ಅಂತರದ ನಂಬಲಾಗದ ಗೆಲುವನ್ನು ಸಾಧಿಸಿದೆ. ಇದರೊಂದಿಗೆ ಆ್ಯಶಸ್‌ ಸರಣಿ 1-1 ಸಮಬಲಕ್ಕೆ ಬಂದಿದೆ.

Advertisement

ಗೆಲುವಿಗೆ 359 ರನ್ನುಗಳ ಕಠಿನ ಗುರಿ ಪಡೆದಿದ್ದ ಇಂಗ್ಲೆಂಡ್‌ ಬೆನ್‌ ಸ್ಟೋಕ್ಸ್‌ ಅವರ ಅಜೇಯ 135 ರನ್ನುಗಳ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 9 ವಿಕೆಟಿಗೆ 362 ರನ್‌ ಬಾರಿಸಿ ಗೆದ್ದು ಬಂದಿತು. 286 ರನ್ನಿಗೆ 9ನೇ ವಿಕೆಟ್‌ ಬಿದ್ದಾಗ ಇಂಗ್ಲೆಂಡಿಗೆ ಸೋಲು ಖಾತ್ರಿಯಾಗಿತ್ತು. ಆದರೆ ಜಾಕ್‌ ಲೀಚ್‌ ಅವರನ್ನು ಕೂಡಿಕೊಂಡ ಸ್ಟೋಕ್ಸ್‌ ಆಸೀಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಇವರಿಬ್ಬರ 10.2 ಓವರ್‌ಗಳ ಅಂತಿಮ ವಿಕೆಟ್‌ ಜತೆಯಾಟದಲ್ಲಿ 76 ರನ್‌ ಹರಿದು ಬಂತು. ಇದರಲ್ಲಿ 74 ರನ್‌ ಸ್ಟೋಕ್ಸ್‌ ಬ್ಯಾಟಿನಿಂದ ಬಂದರೆ, 17 ಎಸೆತ ಎದುರಿಸಿದ ಲೀಚ್‌ ಹೊಡೆದದ್ದು ಒಂದೇ ರನ್‌.

ಸ್ಟೋಕ್ಸ್‌ ಒಟ್ಟು 219 ಎಸೆತ ಎದುರಿಸಿ 11 ಬೌಂಡರಿ, 8 ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು. ಕಳೆದ ವಿಶ್ವಕಪ್‌ ಫೈನಲ್‌ನಲ್ಲೂ ಸ್ಟೋಕ್ಸ್‌ ಇಂಥದೇ ಅಮೋಘ ಪರಾಕ್ರಮದ ಮೂಲಕ ಇಂಗ್ಲೆಂಡ್‌ ತಂಡದ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದನ್ನು ನೆನಪಿಸಿಕೊಳ್ಳಬಹುದು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-67 ಮತ್ತು 9 ವಿಕೆಟಿಗೆ 362 (ಸ್ಟೋಕ್ಸ್‌ ಔಟಾಗದೆ 135, ರೂಟ್‌ 77, ಡೆನ್ಲಿ 50, ಹ್ಯಾಝಲ್‌ವುಡ್‌ 85ಕ್ಕೆ 4, ಲಿಯೋನ್‌ 114ಕ್ಕೆ 2). ಆಸ್ಟ್ರೇಲಿಯ-179 ಮತ್ತು 246.

Advertisement

Udayavani is now on Telegram. Click here to join our channel and stay updated with the latest news.

Next