Advertisement

ಮುಖ ಮೊಸರಾದರೆ ಸೌಂದರ್ಯ

06:43 PM Jan 28, 2020 | mahesh |

ಮೊಸರು, ದೇಹದ ಆರೋಗ್ಯಕ್ಕೆ ಮಾತ್ರವಲ್ಲದೇ ತ್ವಚೆಯ ಸೌಂದರ್ಯ ವೃದ್ಧಿಸಲು ಕೂಡ ಸಹಕಾರಿ. ಇದು, ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಮೊಸರನ್ನು ಮುಖಕ್ಕೆ ಹಚ್ಚಿದರೆ ಚರ್ಮ ಒಡೆಯುವುದಿಲ್ಲ. ಅಂತೆಯೇ ಮೊಸರನ್ನು ಬಳಸಿ ಫೇಸ್‌ಪ್ಯಾಕ್‌ ಕೂಡಾ ತಯಾರಿಸಬಹುದು.

Advertisement

1. ಮೊಸರು- ಓಟ್ಸ್‌:
ಎರಡು ಚಮಚ ಮೊಸರಿಗೆ 1 ಚಮಚ ಓಟ್ಸ್‌ ಬೆರೆಸಿ, ಫೇಸ್‌ಪ್ಯಾಕ್‌ ಹಾಕಿಕೊಳ್ಳಿ. 20 ನಿಮಿಷಗಳ ನಂತರ ತೊಳೆದರೆ ಮುಖದಲ್ಲಿನ ಸುಕ್ಕು, ನೆರಿಗೆಗಳು ನಿವಾರಣೆಯಾಗುತ್ತವೆ. ಮೊಸರಿನಲ್ಲಿರುವ ಲ್ಯಾಕ್ಟಿಕ್‌ ಆಸಿಡ್‌ನಿಂದಾಗಿ, ತ್ವಚೆಯ ಕಲ್ಮಷ ದೂರಾಗುತ್ತದೆ.

2. ಮೊಸರು-ಲಿಂಬೆ
ಮೂರು ಚಮಚ ಮೊಸರಿಗೆ 1 ಚಮಚ ಲಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ತೊಳೆಯಿರಿ. ಇದು ತ್ವಚೆಯಲ್ಲಿನ ಕಲೆ, ಮೊಡವೆಗಳನ್ನು ನಿವಾರಿಸುತ್ತದೆ.

3. ಮೊಸರು- ಕಡಲೇಹಿಟ್ಟು
ಮೊಸರು, ಕಡಲೇಹಿಟ್ಟು ಮತ್ತು ಚಿಟಿಕೆ ಅರಿಶಿಣವನ್ನು, 1 ಚಮಚ ರೋಸ್‌ವಾಟರ್‌ನಲ್ಲಿ ಬೆರೆಸಿ ಗಟ್ಟಿಯಾಗಿ ಪೇಸ್ಟ್‌ನಂತೆ ಕಲಸಿ. ಇದನ್ನು ಮುಖ, ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.

4. ಮೊಸರು- ಮುಲ್ತಾನಿ ಮಿಟ್ಟಿ
ಎರಡು ಚಮಚ ಮುಲ್ತಾನಿ ಮಿಟ್ಟಿಗೆ, ಮೂರು ಚಮಚ ಮೊಸರನ್ನು ಹಾಕಿ ಕಲಸಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ. ಇದು, ಬಿಸಿಲಿನಿಂದ ಸುಟ್ಟ ಕಲೆ, ಮೊಡವೆ ಕಲೆಯನ್ನು ಹೋಗಲಾಡಿಸುತ್ತದೆ.

Advertisement

-ಶ್ರುತಿ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next