Advertisement

ಬಿಸಿಸಿಐ ಸಿಬಂದಿಗೆ ಇನ್ನೂ ವೇತನ ಏರಿಕೆ ಆಗಿಲ್ಲ

03:01 PM Aug 28, 2018 | Harsha Rao |

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟಿನಿಂದಾಗಿ ಬಿಸಿಸಿಐ ಸಿಬಂದಿಗೆ ಸಿಗಬೇಕಾಗಿದ್ದ ವೇತನ ಹೆಚ್ಚಳಕ್ಕೆ ತಡೆ ಬಿದ್ದಿದೆ. ಇದರಿಂದ ಸಿಬಂದಿ ಸಂಕಷ್ಟದಲ್ಲಿದ್ದಾರೆ ಎಂದು ವರದಿಯಾಗಿದೆ. 

Advertisement

ಪ್ರಸ್ತುತ 25,000 ಕೋಟಿ ರೂ.ಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಬಿಸಿಸಿಐಯಲ್ಲಿ 100ಕ್ಕೂ ಅಧಿಕ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಇವರಿಗೆ ವೇತನದಲ್ಲಿ ಹೆಚ್ಚಳ ಮಾಡಲಾಗಿಲ್ಲ ಎನ್ನಲಾಗಿದೆ. ಕಳೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕೂಟದ ಕಡತಗಳ ನಿರ್ವಹಣಾ ಜವಾಬ್ದಾರಿಯನ್ನು 6 ಮಂದಿ ಬಿಸಿಸಿಐ ಅಧಿಕಾರಿಗಳ ತಂಡಕ್ಕೆ ನೀಡಲಾಗಿತ್ತು. ಇದೀಗ ಈ ಅಧಿಕಾರಿಗಳ ನಡುವಿನ ಒಳಜಗಳದಿಂದಾಗಿ ವೇತನ ಹೆಚ್ಚಳಕ್ಕೆ ಅಡ್ಡಿಯಾಗಿದೆ. 

ಆದರೆ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಮತ್ತು ಬಿಸಿಸಿಐ ಆಡಳಿತಾಧಿಕಾರಿಗಳ ಮುಖ್ಯಸ್ಥ ವಿನೋದ್‌ ರಾಯ್‌ ಈ ವಿವಾದವನ್ನು ಅಲ್ಲಗೆಳೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next