Advertisement
ಭೂ ಕುಸಿತ, ಕೃತಕ ನೆರೆ, ಗುಡ್ಡ ಜರಿತ ಮೊದಲಾದ ಕಾರಣಗಳಿಗಾಗಿ ಮಳೆ ಬಂದರೆ ನಿದ್ದೆಯಿಲ್ಲದೆ ರಾತ್ರಿ ಕಳೆಯುವವರು ಕರಾವಳಿ ಭಾಗದಲ್ಲಿ ಸಾಕಷ್ಟಿದ್ದಾರೆ.
Related Articles
2022ರ ಜು. 6ರಂದು ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಹೆನ್ರಿ ಕಾರ್ಲೊ ಅವರಿಗೆ ಸೇರಿದ ಗುಡ್ಡ ಕುಸಿದು ಮನೆಯೊಂದಕ್ಕೆ ಬಿದ್ದ ಪರಿಣಾಮ ಕೇರಳ ಮೂಲದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.
Advertisement
2023ರ ಜು. 7ರಂದು ಸಜೀಪಮುನ್ನೂರು ಗ್ರಾಮದ ನಂದಾವರ ಕಟ್ಲೆಮಾರ್ ಗುಂಪುಮನೆಯಲ್ಲಿ ಬೃಹತ್ ಗುಡ್ಡವೊಂದು ಮನೆಯೊಂದರ ಮೇಲೆ ಬಿದ್ದು, ಮಹಮ್ಮದ್ ಅವರ ಪತ್ನಿ ಝರೀನಾ(49) ಹಾಗೂ ಅವರ ಪುತ್ರಿ ಶಫಾ (20) ಮೃತಪಟ್ಟಿದ್ದರು. 2020 ಜು.5ರಂದು ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಗುರುಪುರ ಗ್ರಾ.ಪಂ. ವ್ಯಾಪ್ತಿಯ ಮಠದ ಗುಡ್ಡೆ (ಬಂಗ್ಲೆ ಗುಡ್ಡೆ )ಯಲ್ಲಿ ಸಂಭವಿಸಿತ್ತು. ಗುರುಪುರ ತಾರಿಕರಿಯ ನಿವಾಸಿ ಸಫಾÌನ್ (16) ಮತ್ತು ಸಹಲಾ (10) ಮೃತಪಟ್ಟವರು.
ತಡೆಗೋಡೆ ದುರಂತಗಳ ಸರಮಾಲೆ -ಮನೆಯ ಮೇಲೆ ಸುಮಾರು 20 ಅಡಿ ಎತ್ತರದಲ್ಲಿರುವ ಇನ್ನೊಂದು ಮನೆಯ ಆವರಣ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಮಂಗಳೂರಿನ ಪಡೀಲ್ ಬಳಿಯ ಕೊಡಕ್ಕಲ್‌ನ ಶಿವನಗರದಲ್ಲಿ 2019ರ ಸೆ.8ರಂದು ರಾತ್ರಿ ಸಂಭವಿಸಿತ್ತು. ವರ್ಷಿಣಿ (9) ಹಾಗೂ ವೇದಾಂತ್ (7) ಮೃತಪಟ್ಟಿದ್ದರು. ಆವರಣ ಗೋಡೆ ಕುಸಿದಿರುವ ರಭಸಕ್ಕೆ ಮನೆಯ ಆರ್ಧಭಾಗ ಸಂಪೂರ್ಣ ನೆಲಸಮವಾಗಿತ್ತು. -ಪುತ್ತೂರು ನಗರ ಹೆದ್ದಾರಬೈಲಿನಲ್ಲಿ 2018 ಜು.7ರಂದು ಆವರಣ ಗೋಡೆ ಕುಸಿದು ಬಿದ್ದು ಧನುಷ್ (11), ಪಾರ್ವತಿ (65) ಮೃತಪಟ್ಟಿದ್ದರು. -ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಉಳ್ಳಾಲ ನ್ಯೂಪಡು³ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಜಿಯಾ (7) ಮೃತಪಟ್ಟ ಘಟನೆ 2024 ಮೇ 20ರಂದು ಸಂಭವಿಸಿತ್ತು. ಶಾಲೆಯ ಗೇಟಿನ ಬಳಿ ಆಟವಾಡುತ್ತಿದ್ದಾಗ ದುರ್ಘಟನೆ ಸಂಭವಿಸಿತ್ತು. -2014ರಲ್ಲಿ ದೇರೆಬೈಲ್ ಬಳಿ ಬಹುಮಹಡಿ ಕಟ್ಟಡವೊಂದರ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದ ವೇಳೆ ರಿಟೈನಿಂಗ್ ವಾಲ್ ಕುಸಿದು ಓರ್ವ ಮೃತಪಟ್ಟಿದ್ದರು.
-ಬಂಟ್ಸ್‌ಹಾಸ್ಟೆಲ್ ಸಮೀಪದ ಕರಂಗಲ್ಪಾಡಿ ಜಂಕ್ಷನ್ ಬಳಿ 2020 ಫೆ.28ರಂದು ಮಧ್ಯಾಹ್ನ ನಿರ್ಮಾಣ ಹಂತದ ಬಹು ಮಹಡಿ ಕಟ್ಟಡದ ತಡೆಗೋಡೆ ಸಮೇತ ಭೂಕುಸಿತ ಸಂಭವಿಸಿ ಕಾರ್ಮಿಕರಾದ ಬಾಗಲಕೋಟೆಯ ಭೀಮೇಶ್ (30) ಮತ್ತು ಪಶ್ಚಿಮ ಬಂಗಾಲದ ಮಸ್ರಿಗುಲ್ (25) ಸಾವನ್ನಪ್ಪಿದ್ದರು.
-2020ರಲ್ಲಿ ಪುತ್ತೂರು ಪರ್ಲಡ್ಕದಲ್ಲಿ ಕಾಂಪೌಂಡ್ ಗೋಡೆ ಕುಸಿದು ವಸಂತಿ (49) ಮೃತಪಟ್ಟಿದ್ದರು.