Advertisement

ಬೀಳುವ ಹಂತದಲ್ಲಿದೆ ಬಂಕಾಪುರ ಗ್ರಂಥಾಲಯ

02:11 PM Oct 27, 2019 | Suhan S |

ಬಂಕಾಪುರ: ಪಟ್ಟಣದಲ್ಲಿರುವ ಗ್ರಂಥಾಲಯ ಶಿಥಿಲಾವಸ್ಥೆಯಿಂದ ಕೂಡಿದ್ದು, ಓದುಗರು ಜೀವ ಭಯದಲ್ಲೇ ಓದುವಂತಾಗಿದೆ. ಕಟ್ಟಡ ಇಕ್ಕಟ್ಟಿನಿಂದ ಕೂಡಿದ್ದು, ಈಗಲೋ ಆಗಲೋ ಬೀಳುವ ಹಂತದಲ್ಲಿದೆ. 1994ರಲ್ಲಿ ಬಂಕಾಪುರ ಗ್ರಾಪಂ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾದ ಗ್ರಂಥಾಲಯ 1998ರ ವೇಳೆಗೆ ಗ್ರಾಪಂನ 37¥22

Advertisement

ಅಳತೆಯ ಜಾಗದಲ್ಲಿ ಸ್ವಂತ ಕಟ್ಟಡವೂ ನಿರ್ಮಾಣವಾಯ್ತು. ಆದರೆ ಪುಸ್ತಕಗಳನ್ನು ಇಡಲು ಜಾಗವೂ ಇಲ್ಲದಂತಾಗಿದೆ. ದ.ರಾ. ಬೇಂದ್ರೆ, ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿ.ಕೆ.ಗೋಕಾಕ್‌, ಯು. ಆರ್‌.ಅನಂತಮೂರ್ತಿ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಸೇರಿದಂತೆ ಹಲವಾರು ಸಾಹಿತಿಗಳ, ಲೇಖಕರ ಸುಮಾರು 11,317 ಪುಸ್ತಕಗಳ ಸಂಗ್ರಹವಿದೆ. ಕನ್ನಡ-ಇಂಗ್ಲಿಷ್‌ ದಿನಪತ್ರಿಕೆಗಳು, ವಾರಪತ್ರಿಕೆ, ಮಾಸಪತ್ರಿಕೆಗಳು

ಗ್ರಂಥಾಲಯಕ್ಕೆ ಬರುತ್ತಿವೆ. ವರ್ಷದಿಂದೀಚೆಗೆ ಗ್ರಂಥಾಲ

ಯದಲ್ಲಿ ಗ್ರಂಥಪಾಲಕರಿಲ್ಲದೇ ಇರುವುದರಿಂದ ಗ್ರಂಥಾಲಯ ದೇವರಿಲ್ಲದ ಗುಡಿಯಂತಾಗಿದೆ. ಒಬ್ಬರು ದಿನಗೂಲಿಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಶಿಗ್ಗಾವಿ ಗ್ರಂಥಪಾಲಕರಾದ ಪ್ರಭಾಕರ ಸೂಡಿ ಎಂಬುವರು ವಾರದಲ್ಲಿ 2-3 ದಿನ ಬಂದು ಕಾರ್ಯ ನಿರ್ವಹಿಸುತ್ತಿದ್ದು, ಕಾಯಂ ಗ್ರಂಥಪಾಲಕರ ಅವಶ್ಯಕತೆಯಿದೆ.

ಪಟ್ಟಣದಲ್ಲಿ ನೂತನ ಗ್ರಂಥಾಲಯ ನಿರ್ಮಿಸಿ ಓದುಗರಿಗೆ ಸಮರ್ಪಿಸ ಬೇಕೆಂಬುದೇ ಇಲ್ಲಿನ ವಿದ್ಯಾರ್ಥಿಗಳ, ಸಾರ್ವಜನಿಕರ ಒತ್ತಾಶೆಯಾಗಿದೆ.

Advertisement

 

-ಸದಾಶಿವ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next