Advertisement

ಬ್ಯಾಂಕ್‌  ವಹಿವಾಟು: ಎಲ್ಲ ರೀತಿಯ ಮಿತಿ, ನಿರ್ಬಂಧ ತೆರವು

03:50 AM Mar 14, 2017 | Team Udayavani |

ಮುಂಬಯಿ: ಕಳೆದ ನವೆಂಬರ್‌ನಲ್ಲಿ 500, 1000 ರೂ. ಮುಖಬೆಲೆಯ ನೋಟುಗಳನ್ನು ಅಪಮೌಲ್ಯಗೊಳಿಸಿದ ಅನಂತರ ಬ್ಯಾಂಕ್‌, ಎಟಿಎಂ ವಹಿವಾಟುಗಳ ಮೇಲೆ ಹೇರಲಾಗಿದ್ದ ಎಲ್ಲ ರೀತಿಯ ಮಿತಿ, ನಿರ್ಬಂಧಗಳನ್ನು ಸೋಮವಾರದಿಂದಲೇ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಪಪ್ಟಪಡಿಸಿದೆ.

Advertisement

ಇದಕ್ಕೆ ಮೊದಲು ವಾರಕ್ಕೆ 24 ಸಾವಿರ ರೂ. ಗಳನ್ನಷ್ಟೇ ವಿತ್‌ಡ್ರಾ ಮಾಡಲು ಅವ ಕಾಶವಿತ್ತು. ಅನಂತರ ಪರಿಸ್ಥಿತಿ ಸುಧಾರಿಸುತ್ತಾ ಬಂದಂತೆ ಇದನ್ನು ವಾರಕ್ಕೆ 50 ಸಾವಿರ ರೂ.ಗೆ  ಹೆಚ್ಚಳ ಮಾಡಲಾಗಿತ್ತು. ಈಗ ವಿತ್‌ಡ್ರಾ ಮಾಡಲು ಯಾವ ಮಿತಿಯೂ ಇಲ್ಲ ಎಂದು ಆರ್‌ಬಿಐ ಉಪ ಗವರ್ನರ್‌ ಗಾಂಧಿ ತಿಳಿಸಿದ್ದಾರೆ. 

ಮಾ. 13 ರಂದು ಮಿತಿ ರದ್ದುಗೊಳಿಸಲಾಗುವುದು ಎಂದು ಈ ಹಿಂದೆಯೇ ಆರ್‌ಬಿಐ ಮಾಹಿತಿ ನೀಡಿತ್ತು. ಕಳೆದ ನವೆಂಬರ್‌ 8ರಂದು ನೋಟು ಅಪಮೌಲ್ಯ ನಿರ್ಧಾರ ಪ್ರಕಟಿಸಿದ್ದ ಪ್ರಧಾನಿ ಮೋದಿ, ಕಪ್ಪುಹಣ, ಭ್ರಷ್ಟಾಚಾರ, ನಕಲಿ ನೋಟುಗಳ ಹಾವಳಿ ತಡೆಗಾಗಿ  
ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದರು. ಜತೆಗೆ, ಪರಿಸ್ಥಿತಿ ಸುಧಾರಿಸಲು 50 ದಿನಗಳ ಕಾಲಾವಕಾಶವನ್ನೂ ಕೋರಿದ್ದರು. ತದನಂತರ, ಬ್ಯಾಂಕ್‌, ಎಟಿಎಂ ವಹಿವಾಟುಗಳ ಮೇಲೆ ಒಂದರ ಮೇಲೆ ಒಂದರಂತೆ ಮಿತಿ, ನಿರ್ಬಂಧಗಳನ್ನು ಹೇರುತ್ತಾ ಬರಲಾಗಿತ್ತು. ಈಗ ಅಂತಿಮವಾಗಿ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next