ಹೀಗೆ ಪ್ರಶ್ನೆ ಕೇಳುತ್ತಾರೆ. ಸಾಮಾನ್ಯವಾಗಿ ಚೆಕ್ ಹಾಕೋದು, ಚಲನ್ ಬರೆದು ಹಣ ತುಂಬೋರು ಹೆಚ್ಚೆಂದರೆ ಇಂಟರ್‌ನೆಟ್ ಬ್ಯಾಂಕಿಂಗ್ ಮಾಡಿಕೊಂಡಿರೋರಿಗೆ ಇದು ಹೊಸ ಪದಗಳು. ಪ್ರತಿ ದಿನ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಹಣ ಹಾಕುತ್ತಾ, ವ್ಯವಹಾರ ಮಾಡುವವರಿಗಾದರೆ ಇವೆಲ್ಲ ಪರಿಚಿತಪದಗಳು. ಆರ್‌ಟಿಜಿಎಸ್, ನೆಫೆrಲ್ಲಾ ಬ್ಯಾಂಕ್‌ಗಳು ಗ್ರಾಹಕರಿಗೆ ಕೊಟ್ಟ ಸೌಲಭ್ಯಗಳು. ಈ ಸೌಲಭ್ಯಗಳು ಗ್ರಾಹಕನಿಗೆ ಎಷ್ಟು ನೆರವಾಗಿವೆಯೆಂದರೆ, ನಾವು ದೇಶದ ಯಾವುದೇ ಬ್ಯಾಂಕಿನಲ್ಲಿರುವ ಖಾತೆದಾರರಿಗೆ ಬೇಕಾದರೂ ಹಣ ಕಳುಹಿಸಬಹುದು. ಅದಕ್ಕೆ ಅವಶ್ಯಕವಾಗಿ ತಿಳಿದಿರಬೇಕಾದದ್ದು ಆ ಖಾತೆದಾರನ ಹೆಸರು, ಆತನ ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು ಮತ್ತು ಐಎಫ್ಎಸ್ ಕೋಡ್. ಇಷ್ಟಿದ್ದರೆ ದುಡ್ಡು ಲಂಕೆಯಿಂದ ಹಾರಿದ ಹನುಮಂತನಂತೆ ಹಾರುತ್ತದೆ.
Advertisement
ಆರ್‌ಟಿಜಿಎಸ್ ಮತ್ತು ಎನ್ಇಎಫ್ಟಿಒಂದು ಬ್ಯಾಂಕಿನಿಂದ ಯಾವುದೇ ಊರಿನ ಇನ್ನೊಂದು ಬ್ಯಾಂಕಿಗೆ, ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಎಚ್‌ಡಿಎಫ್ಸಿ ಬ್ಯಾಂಕ್ ಶಾಖೆಗೆ ಹಣ ವರ್ಗಾಯಿಸಬೇಕಿದ್ದಲ್ಲಿ ಮೇಲಿನ ಸೌಲಭ್ಯಗಳು ಬಳಕೆಗೆ ಬರುತ್ತವೆ. ಬ್ಯಾಂಕಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ಇವು ಅಪರಿಚಿತ ಶಬ್ದ ಎನ್ನಲಾಗುವುದಿಲ್ಲ. ಹಾಗಾದರೆ ಇದರ ಅರ್ಥವೇನು? ಈ ಸೌಲಭ್ಯ ಬಳಸಿಕೊಳ್ಳಲು ಏನು ಮಾಡಬೇಕು? ಇದಕ್ಕೆ ಶುಲ್ಕ ವಾಗುತ್ತದೆಯೇ? ಇವೆಲ್ಲ ನಿಮಗೆ ಗೊತ್ತಿದ್ದರೆ ಒಳ್ಳೆಯದು.
ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸಫರ್ ಇದರ ಚಿಕ್ಕ ರೂಪ. ಇದರ ಉಪಯುಕ್ತತೆಯೆಂದರೆ ಒಂದು ರೂಪಾಯಿಂದ ಗರಿಷ್ಟ ಎಷ್ಟು ಹಣವನ್ನಾದರೂ ಈ ವ್ಯವಸ್ಥೆಯ ಮೂಲಕ ಕಳುಹಿಸಬಹುದಾಗಿದೆ. ಈ ವ್ಯವಸ್ಥೆಯ ಲೋಪವೆಂದರೆ ನೀವು ಹಣ ಕಳುಹಿಸಿದ ದಿನವೇ ಇನ್ನೊಂದು ಬ್ಯಾಂಕಿನ ಖಾತೆಗೆ ಹಣ ಜಮಾವಾಗುವ ಖಾತ್ರಿ ಇಲ್ಲ. ಗರಿಷ್ಟ 24 ಗಂಟೆಯಷ್ಟು ಸಮಯ ತೆಗೆದುಕೊಳ್ಳಬಹುದು. ತುರ್ತಾಗಿ ಹಣ ಪೂರೈಸಲು ಇದರಿಂದ ಅಸಾಧ್ಯ. ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿನ ಯಾವುದೇ ಶಾಖೆಗೆ ಹಣ ರವಾನೆಯು ಬ್ಯಾಚ್‌ಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಮಾತ್ರ ನಡೆಯುತ್ತದೆ. ಅಂದರೆ ವಾರದ ದಿನಗಳಲ್ಲಿ ಗಂಟೆಗೊಮ್ಮೆಯಂತೆ ದಿನಕ್ಕೆ ಹನ್ನೆರಡು ಬಾರಿ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹಾಗೂ ಶನಿವಾರ ಆರು ಬಾರಿ ಗಂಟೆಗೊಮ್ಮೆ, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಣ ವರ್ಗಾವಣೆಯಾಗುತ್ತದೆ. ಹಾಗಿದ್ದೂ ಇದಕ್ಕೆ ತಗಲುವ ಖರ್ಚು ಮತ್ತು ಸಮಯದ ದೃಷ್ಟಿಯಲ್ಲಿ ಡಿಡಿ ಗಿಂತ ಇದು ತುಂಬಾ ಅನುಕೂಲಕರ. ಜುಲೈ2014ರ ಅಂಕಿಅಂಶದ ಪ್ರಕಾರ 71.67 ಮಿಲಿಯನ್ನಷ್ಟು ವ್ಯವಹಾರ ಇದರ ಮೂಲಕ ನಡೆದಿದೆ.
Related Articles
Advertisement
ನೀವು ಯಾರಿಗೆ ಹಣ ಕಳುಸಬೇಕೋ ಅವರ ಬ್ಯಾಂಕಿನ ಹೆಸರು, ಬ್ಯಾಂಕಿನ ಶಾಖೆ ಇರುವ ಊರಿನ ಹೆಸರು, ಆತನ ಖಾತೆ ಸಂಖ್ಯೆ( ಈಗ ಹೆಚ್ಚಿನ ಬ್ಯಾಂಕುಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಟ್ಟಿರುವುದರಿಂದ ಹಳೆ ಖಾತೆ ಸಂಖ್ಯೆಯ ಬದಲು ಹೊಸ ಖಾತೆ ಸಂಖ್ಯೆ ಕೇಳಿ ಪಡೆಯುತ್ತವೆ) ಐಎಫ್ಎಸ್‌ಸಿ ಸಂಖ್ಯೆ ಜೊತೆಗೆ ಚೆಕ್ ಸೌಲಭ್ಯ ಹೊಂದಿದ್ದರೆ ಒಳ್ಳೆಯದು. ಹಣ ಕಳುಹಿಸುವ ವ್ಯಕ್ತಿಗಳು ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಉತ್ತಮ ಹಾಗೂ ಸುರಕ್ಷಿತ. ಈ ಸೌಲಭ್ಯ ಹೊರತುಪಡಿಸಿ ಒಂದು ಬ್ಯಾಂಕಿನಿಂದ ಅದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಹಣ ವರ್ಗಾವಣೆ ಮಾಡಲು ಆರ್‌ಟಿಜಿಎಸ್ ಅಥವಾ ಎನ್‌ಇಎಫ್ಟಿ ಅವಶ್ಯಕತೆ ಇಲ್ಲ. ಕೋರ್ ಬ್ಯಾಂಕ್ ವ್ಯವಸ್ಥೆಯ ಮೂಲಕ ತಕ್ಷಣ ಹಣ ರವಾನಿಸಲೂಬಹುದು. ಐಎಫ್ಎಸ್‌ಸಿ
ಇದಕ್ಕೂ ಮೊದಲು ನೀವು ಐಎಫ್ಎಸ್‌ಸಿ ಕೋಡ್ ಅಂದರೇನು ಅಂತ ತಿಳಿದು ಕೊಳ್ಳಬೇಕು. ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದಂತೆ ಪ್ರತಿಯೊಂದು ಬ್ಯಾಂಕು ಸಹ ತನ್ನ ಶಾಖೆಗಳಿಗೆ ಹನ್ನೊಂದು ಸಂಖ್ಯೆಗಳುಳ್ಳ ಇಂಡಿಯನ್ ಫೈನಾನ್ಸಿಯಲ್ ಸಿಸ್ಟಂ ಕೋಡ್ (ಐಎಫ್ಎಸ್‌ಸಿ) ಒಂದನ್ನು ನಿಗದಿಪಡಿಸಬೇಕು. ಪ್ರತಿಯೊಂದು ಬ್ಯಾಂಕುಗಳ ಪ್ರತಿ ಶಾಖೆಗೂ ಈ ರೀತಿ ಒಂದು ಗುರುತಿನ ಸಂಖ್ಯೆ ಇರುತ್ತದೆ. ಬೇರೆ ಬೇರೆ ಬ್ಯಾಂಕುಗಳಿಗೆ ಹಣ ಸಂದಾಯವಾಗುವಾಗ ಈ ಕೋಡ್ ಸಂಖ್ಯೆಯ ಮೂಲಕ ಸಂಬಂಧಿಸಿದ ಶಾಖೆಯನ್ನು ಗುರುತಿಸಿ ರಿಸರ್ವ್ ಬ್ಯಾಂಕಿನ ಇ-ಕ್ಲಿಯರಿಂಗ್ ಮೂಲಕ ಸಂಬಂಧಿಸಿದ ಗ್ರಾಹಕರ ಖಾತೆಗಳಿಗೆ ಹಣ ಜಮಾ ಆಗುತ್ತದೆ. ನಂಬರ್ ತಪ್ಪಾಗಿದ್ದರೆ
ಆರ್‌ಟಿಜಿಎಸ್ ಅಥವಾ ಎನ್‌ಇಎಫ್ಟಿ ಮೂಲಕ ಕಳುಹಿಸಿದ ಹಣ ಯಾವುದೇ ಕಾರಣಗಳಿಂದ (ಉದಾಹರಣೆ ಖಾತೆ ಸಂಖ್ಯೆ ತಪ್ಪಿದ್ದಲ್ಲಿ, ಖಾತೆ ಮುಕ್ತಾಯವಾಗಿದ್ದಲ್ಲಿ) ವಾಪಸಾದಲ್ಲಿ ಅದು ಯಾರು ಹಣ ಕಳುಹಿಸುತ್ತಾರೋ ಅವರ ಖಾತೆಗೆ ಮರುಪಾವತಿಯಾಗುತ್ತದೆ. ಒಂದೊಮ್ಮೆ ಈ ಬಗ್ಗೆ ದೂರುಗಳಿದ್ದಲ್ಲಿ ಸಂಬಂಧಿಸಿದ ಬ್ಯಾಂಕುಗಳನ್ನು ಸಂಪರ್ಕಿಸಬೇಕು. ನೂರಾರು ಕಿ.ಮೀ ದುಡ್ಡು ಓಡಾಡೋದು ಹೀಗೆ
ಇಲ್ಲಿ ದುಡ್ಡು ಹಾಕಿದರೆ ನೂರಾರು ಕಿ.ಮೀ ದಾಟುವುದು ಹೇಗೆ? ನೀವು ಹಾಕಿದ ದುಡ್ಡು ನೇರವಾಗಿ ಆರ್‌ಬಿಐ ಗ್ರಿಡ್‌ಗೆ ಹೋಗುತ್ತದೆ. ಆರ್‌ಬಿಐನಲ್ಲಿ ಎಲ್ಲಾ ಬ್ಯಾಂಕ್‌ಗಳ ಅಕೌಂಟ್ ಇರುತ್ತದೆ. ಆಯಾ ಬ್ಯಾಂಕಿನ ಐಡೆಂಟಿಟಿ ಕೋಡ್ ಅಂದರೆ ಐಎಫ್ಎಸ್‌ಸಿ ಕೋಡ್ ಪ್ರಕಾರ ಬ್ಯಾಂಕ್‌ನ ಕರೆಂಟ್ ಅಕೌಂಟ್‌ಗೆ ಜಮೆಯಾಗುತ್ತದೆ. ಅಲ್ಲಿಂದ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಖಾತೆಗೆ ಹಾಕುತ್ತವೆ. ಇದು ನಿರಂತರವಾಗಿ ನಡೆಯುವ ಕ್ರಿಯೆ. ಇಲ್ಲಿ ಗೊತ್ತಿರಬೇಕಾದ ಅಂಶವೆಂದರೆ ನೀವು ಹಾಕುವ ಹಣ ಮಾತ್ರ ಫಿಸಿಕಲ್. ಮತ್ಯಾವ ಹಣವು ಕೂಡ ಫಿಸಿಕಲ್ ಆಗಿ ವರ್ಗಾವಣೆ ಆಗುವುದಿಲ್ಲ. ಎಲ್ಲವೂ ಎಲೆಕ್ಟ್ರಾನಿಕ್ ಕ್ಲಿಯರಿಂಗ್. ಅದೇ ಬ್ಯಾಂಕಿನ ಇನ್ನೊಂದು ಬ್ರಾಂಚಿಗೆ ಹಣ ಹಾಕಬೇಕಾದರೆ ಆರ್‌ಬಿಐ ಗ್ರಿಡ್‌ನೆರವು ಬೇಕಿಲ್ಲ. ಕೋರ್ ಬ್ಯಾಂಕಿಂಗ್ ಆದ್ದರಿಂದ ಅಲ್ಲಿಂದಲೇ ನೇರ ಹಣ ತುಂಬಬಹುದು. – ಆರ್‌ಕೆ