Advertisement
ಕ್ರಾಫ್ಟ್ ವರ್ಕ್‌ಗಳ ಜತೆಗೆ ಬಿದಿರಿನ ಫರ್ನಿಚರ್‌ಗಳು ಮನೆಯ ಅಂದ ಹೆಚ್ಚಿಸುತ್ತದೆ. ಇದು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ, ಆದರೆ ಇಂದು ಮತ್ತೆ ಟ್ರೆಂಡ್ ಆಗಿರುವ ಫರ್ನಿಚರ್ ಆಗಿದೆ. ಬಿದಿರಿನಲ್ಲಿ ಕೇವಲ ಫರ್ನಿಚರ್ ಮಾತ್ರವಲ್ಲದೆ ಇತರೆ ಹಲವು ಆಲಂಕಾರಿಕ ವಸ್ತುಗಳನ್ನು ಮಾಡುತ್ತಾರೆ. ಇದೂ ಇಂದು ಹೆಚ್ಚು ಬಳಕೆಯಲ್ಲಿದೆ. ಸರಳವಾಗಿ ಮನೆಗೆ ಹೊಸ ಲುಕ್ ನೀಡುವ ಜತೆಗೆ ಇದು ವಿಭಿನ್ನವಾಗಿ ಕಾಣಿಸುತ್ತದೆ. ಇತರ ಫರ್ನಿಚರ್‌ಗಳಿಗೆ ಹೋಲಿಸಿದರೆ ಇದು ಹೆಚ್ಚು ವಿಭಿನ್ನವಾಗಿ ಕಾಣಿಸುತ್ತದೆ.
1 ಆರ್ಕಷಕ ಕೋಣೆಗಳು
ಬಿದಿರಿನ ಫರ್ನಿಚರ್‌ಗಳು ಕೋಣೆಯನ್ನು ವಿಂಗಡಿಸಲು ಪ್ರಯೋಜನಕಾರಿ. ಜತೆಗೆ ಇದರಿಂದ ಕೋಣೆಯನ್ನು ಸುಂದರವಾಗಿ ಕಾಣುವಂತೆ ಮಾಡಬಹುದು. 2 ಇಕೋ-ಪ್ರಂಡ್ಲಿ
ಇತ್ತೀಚಿನ ದಿನಗಳಲ್ಲಿ ಜನರು ಇಕೋ-ಪ್ರಂಡ್ಲಿ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಲು ಇಷ್ಟ ಪಡುತ್ತಾರೆ. ಇಕೋ ಫ್ರೆಂಡ್ಲಿ ಜತೆಗೆ ಇದು ಸಾಂಪ್ರದಾಯಿಕ ಇದು ನೀಡುತ್ತದೆ.
Related Articles
ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಇವು ಮರಗಳ ಫರ್ನಿಚರ್‌ಗಳಿಗೆ ಅಥವಾ ಇತರೆ ಫರ್ನಿಚರ್‌ಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಸಮಯ ಬಾಳಿಕೆ ಬರುತ್ತದೆ.
Advertisement
4 ಗ್ಲಾಸ್ ಜತೆಗೆ ಸುಂದರವಾಗಿ ಕಾಣುತ್ತದೆಬಿದಿರಿನ ಜತೆಗೆ ಗ್ಲಾಸ್ ಅಥವಾ ಇತರೆ ವಸ್ತುಗಳನ್ನು ಬಳಕೆ ಮಾಡಿ ಸುಂದರ ಫರ್ನಿಚರ್‌ಗಳನ್ನಾಗಿ ಮಾಡಬಹುದು. ಇವುಗಳನ್ನು ಬಿಡಿಭಾಗಗಳಾಗಿ ಬಳಸಬಹುದು. ಒಂದೇ ಫರ್ನಿಚರ್ ಅನ್ನು ಬಹುಪಯೋಗಕ್ಕೆ ಬಳಸಬಹುದು. ಬಿದಿರಿನ ಅಲಂಕಾರಿಕ ವಸ್ತುಗಳು ಇಕೋ ಫ್ರೆಂಡ್ಲಿಯ ಜತೆಗೆ ಮನೆಗೆ ಆಧುನಿಕ ಮೆರುಗೂ ನೀಡುತ್ತದೆ. ಇದರಲ್ಲಿ ಹಲವು ರೀತಿಯಲ್ಲಿ ಮನೆಯನ್ನು ಅಲಂಕಾರ ಮಾಡಬಹುದು. ಬಿದರಿನಿಂದ ಕೇವಲ ಫರ್ನಿಚರ್ ಮಾತ್ರವಲ್ಲದೆ ಇತರೆ ಆಲಂಕಾರಿಕ ವಸ್ತುಗಳನ್ನು ಬಳಕೆ ಮಾಡುತ್ತಾರೆ.
ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಕಡಿಮೆ ಖರ್ಚು
ಬಿದಿರಿನ ಆಲಂಕಾರಿಕ ವಸ್ತುಗಳು ಉಳಿದ ಅಲಂಕಾರಿಕ ವಸ್ತುಗಳಿಗೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ. ಆದರೆ ಇದು ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ಸಿಗುತ್ತದೆ.ಸುಲಭದಲ್ಲಿ ಗೆದ್ದಲು ಹಿಡಿಯುವುದಿಲ್ಲ. ಹಳೆಯ ಕಾಲಗಳಲ್ಲಿ ಮನೆಯಲ್ಲಿ ಇದನ್ನೇ ಮನೆ ಕಟ್ಟಲು, ಮನೆಯ ಫರ್ನಿಚರ್‌ಗಳ ನಿರ್ಮಾಣಕ್ಕೆ ಬಳಸುತ್ತಿದ್ದರು. ಇಂದು ಮತ್ತೆ ಇದು ಟ್ರೆಂಡ್ ಆಗಿದೆ. ಬಿದಿರಿನ ಆಲಂಕಾರಿಕ ವಸ್ತುಗಳು ಮನೆಗೆ ಹೊಸ ಮೆರುಗು ನೀಡುತ್ತವೆ. – ರಂಜಿನಿ ಮಿತ್ತಡ್ಕ