Advertisement

ಅಪ್ಪ-ಮಗನ ದುರಾಡಳಿತದಿಂದ ಹಿನ್ನಡೆ

11:13 AM May 11, 2018 | Team Udayavani |

ಜೇವರ್ಗಿ: ಜೇವರ್ಗಿ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಅಧಿಕಾರದಲ್ಲಿರುವ ಅಪ್ಪ-ಮಗನ (ಧರ್ಮಸಿಂಗ್‌ ಹಾಗೂ ಶಾಸಕ ಡಾ| ಅಜಯಸಿಂಗ್‌) ದುರಾಡಳಿತ ದಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಜೆಡಿಎಸ್‌ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಆರೋಪಿಸಿದರು. 

Advertisement

ತಾಲೂಕಿನ ಹಿಪ್ಪರಗಾ ಎಸ್‌. ಎನ್‌. ಗ್ರಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸತತವಾಗಿ 8 ಬಾರಿ ಗೆದ್ದಿರುವ ಧರ್ಮಸಿಂಗ್‌ ಹಾಗೂ ಹಾಲಿ ಶಾಸಕ ಡಾ| ಅಜಯಸಿಂಗ್‌ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಬಹುದಾಗಿತ್ತು. ಆದರೆ ಅವರು ಹಾಗೂ ಬೆಂಬಲಿಗರು ಉದ್ಧಾರವಾದರೇ ಹೊರತು ಕ್ಷೇತ್ರ ಅಭಿವೃದ್ಧಿಯಾಗಲಿಲ್ಲ ಎಂದು ಟೀಕಿಸಿದರು.

ನಗರ ಸೇರಿದಂತೆ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಸಾಕಷ್ಟು ಸಮಸ್ಯೆಗಳು ಇವೆ. ಹೇಳಿಕೊಳ್ಳುವಂತಹ ಯಾವುದೇ
ಅಭಿವೃದ್ಧಿ ಶಾಸಕರಿಂದ ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಅವಕಾಶ ನೀಡಿದ್ದೀರಿ. ಒಂದು ಬಾರಿ ಜೆಡಿಎಸ್‌ಗೂ ಅವಕಾಶ ನೀಡಬೇಕು. ಕಳೆದ ಮೂರು ದಶಕಗಳಿಂದ ರೈತಪರ ಹೋರಾಟ ಮಾಡುತ್ತಾ ಬೆಳೆವಿಮೆ, ಪರಿಹಾರ ಕೊಡಿಸುವಲ್ಲಿ ಶ್ರಮಿಸಲಾಗಿದೆ. ದೀನ ದಲಿತ ಅಲ್ಪಸಂಖ್ಯಾತ, ಹಿಂದುಳಿದ   ವರ್ಗಗಳ ಕಲ್ಯಾಣವಾಗಬೇಕಾದರೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು. ಆದ್ದರಿಂದ ಬರುವ ಚುನಾವಣೆಯಲ್ಲಿ ಜೆಡಿಎಸ್‌ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮುಖಂಡರಾದ ಎ.ಬಿ. ಹಿರೇಮಠ, ಮಲ್ಲಿಕಾರ್ಜುನ ಕುಸ್ತಿ, ಎಸ್‌.ಎಸ್‌.ಸಲಗರ, ಜೆಡಿಎಸ್‌ ಅಧ್ಯಕ್ಷ ಬಸವರಾಜ ಖಾನಗೌಡರ್‌, ಶಂಕರ ಕಟ್ಟಿಸಂಗಾವಿ, ಹುಸೇನಪಟೇಲ ಹೂಡಾ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next