Advertisement
ಎಂ.ಜಿ.ಎಂ. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ವತಿಯಿಂದ ವಿದ್ಯಾರ್ಥಿಗಳು ತಯಾರಿಸಿದ ಕಾಲೇಜಿನ ಅಧಿಕೃತ “ಆ್ಯಪ್ ನೋಟಿಫೈ ಎಂ.ಜಿ.ಎಂ’ ಅನ್ನು ಗುರುವಾರ ಬಿಡುಗಡೆ ಮಾಡಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಉನ್ನತ ಗುಣಮಟ್ಟದ ಶಿಕ್ಷಣ ಒದಗಿಸಿಸುವುದರೊಂದಿಗೆ ಶಿಕ್ಷಣ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಮಣಿಪಾಲ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮಾಧವ ಪೈಗಳ ಕೊಡುಗೆ ಅಪಾರ. ಸಾಮಾಜಿಕ ಮತ್ತು ಶೈಕ್ಷಣಿಕ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಅವಿಭಜಿತ ದ.ಕ.ಜಿಲ್ಲೆ ರಾಷ್ಟ್ರ ಕಾರ್ಯದಲ್ಲಿ ತೊಡಗಿವೆ. ಜನರಲ್ಲಿ ಜ್ಞಾನವೂ ವೃದ್ಧಿಯಾಗಿದೆ. ಈ ಮೂಲಕ ಜಿಲ್ಲೆ ಮಹತ್ತರ ಸಾಧನೆ ಮಾಡುತ್ತಿದೆ ಎಂದರು.
Related Articles
1949ರ ಆಸುಪಾಸಿನಲ್ಲಿ ಇದೇ ಶಿಕ್ಷಣ ಸಂಸ್ಥೆಯಲ್ಲಿ ತಾನು ವಿದ್ಯಾಭ್ಯಾಸ ಪಡೆದಿದ್ದೆ. ಕೇವಲ ಎರಡು ಕೊಠಡಿಗಳಿತ್ತು. ಮೂಲ ಸೌಕರ್ಯಗಳ ಕೊರತೆಯಿತ್ತು. ಶಿಕ್ಷಣಕ್ಕೆ ಪೂರಕ ವ್ಯವಸ್ಥೆಗಳಿರಲಿಲ್ಲ. ಹೆಚ್ಚಿನ ಶಿಕ್ಷಣಕ್ಕಾಗಿ ಮೂರು ನದಿಗಳನ್ನು ದಾಟಿ ದೂರದೂರಿಗೆ ತೆರಳಬೇಕಿತ್ತು. ಉನ್ನತ ಶಿಕ್ಷಣಕ್ಕೆ ಮುಂಬಯಿ, ಚೆನ್ನೈನಂತಹ ನಗರಗಳಿಗೆ ಅಲೆದಾಡುವ ಕಷ್ಟ ಈಗ ಇಲ್ಲ. ಎಲ್ಲವೂ ಕಾಲ ಬುಡದಲ್ಲೆ ಸಿಗುತ್ತಿದೆ. ಕಲಿತ ಶಾಲೆಯ ಬಾಲ್ಯದ ದಿನಗಳನ್ನು ನೆನೆಪಿಸಿಕೊಳ್ಳುವುದು ಮಧುರ ಅನುಭವ ಎಂದು ತಮ್ಮ ಬಾಲ್ಯದ ಕ್ಷಣಗಳನ್ನು ಹಂಚಿಕೊಂಡರು.
Advertisement
ನಾಗಾಲ್ಯಾಂಡ್‌ನಲ್ಲಿ ನೈತಿಕ ಶಿಕ್ಷಣದ ಕೊರತೆ
ಭಾರತ ಶ್ರೀಮಂತವಾಗಿದೆ. ಭಾರ ತೀಯರು ಮಾತ್ರ ಬಡವರಾಗಿದ್ದಾರೆ. ಅದರಲ್ಲೂ ಕರಾವಳಿ ಮಣ್ಣಿಗೆ ವಿಶಿಷ್ಟ ಗುಣವಿದೆ. ಬುದ್ಧಿವಂತರು, ಸುಶಿಕ್ಷಿತರು, ಸುಸಂಸ್ಕೃರು, ಹೃದಯ ಶ್ರೀಮಂತಿಕೆ ಉಳ್ಳವರು ಇಲ್ಲಿದ್ದಾರೆ. ನಾಗಾಲ್ಯಾಂಡ್‌ನ ಜನತೆಗೆ ನೈತಿಕ ಶಿಕ್ಷಣ ಕೊರತೆಯಿದೆ. ಹೀಗಾಗಿ ಅಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಮಾಜಿ ಗವರ್ನರ್ ಕಳವಳ ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ| ಎಂ.ಜಿ ವಿಜಯ ಪ್ರಸ್ತಾವನೆಗೈದರು, ಪದವಿ ವಿಭಾಗದ ಪ್ರಾಂಶುಪಾಲೆ ಮಾಲತಿದೇವಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಮೇಶ್ ಕಾರ‌್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ರಾಜ್ಯಪಾಲರ ಪತ್ನಿ ಕವಿತಾ ಆಚಾರ್ಯ, ವಿದ್ಯಾರ್ಥಿಗಳು, ಉಪ ನ್ಯಾಸಕರು ಉಪಸ್ಥಿತರಿದ್ದರು. ಶ್ರೇಯಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಆ್ಯಪ್‌ನಲ್ಲಿ ಮಾಹಿತಿ ಲಭ್ಯ
ಕಾಲೇಜಿನ ಅಧಿಕೃತ ಆ್ಯಪ್ ನೋಟಿಫೈನಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದ ಸೂಚನೆ, ಮಾಹಿತಿ ಟಿಪ್ಪಣಿಗಳನ್ನು ಹಾಕಲಾಗುತ್ತದೆ. ಇದರಿಂದ ನೋಟಿಸ್ ಬೋರ್ಡ್‌ನಲ್ಲಿ ಸೂಚನೆಗಳನ್ನು ಅಂಟಿಸುವ ಭಾರ ತಪ್ಪುತ್ತದೆ. ವಿದ್ಯಾರ್ಥಿಗಳು ತಮ್ಮ ಮೊಬೈಲ್‌ಗಳಲ್ಲೆ ಕಾಲೇಜಿನ ಸೂಚನೆ ಮಾಹಿತಿಯನ್ನು ನೇರ ಪಡೆಯಲು ಆ್ಯಪ್ ಸಹಕಾರಿಯಾಗುತ್ತದೆ. 17 ಅಂಶಗಳು ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಯೋಜನೆಯನ್ನು ಜನರಿಗೆ ತಲುಪಿಸಿ
ವಿದ್ಯಾರ್ಥಿಗಳು ಶಿಕ್ಷಣ ಪಡೆಯುದರ ಜತೆಗೆ ಸೇವಾ ಮನೋಭಾವನೆ, ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರಧಾನಿಯವರು ಬಡವರ ಸಶಕ್ತೀಕರಣಕ್ಕೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಒಬ್ಬ ವಿದ್ಯಾರ್ಥಿ ಸರಕಾರದ ಯೋಜನೆಗಳನ್ನು 5 ಮಂದಿಗೆ ತಲುಪಿಸಿದಲ್ಲಿ ಯೋಜನೆಗಳು ಸಾಕಾರ ಪಡೆದುಕೊಂಡು ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಪದ್ಮನಾಭ ಆಚಾರ್ಯ ಎಂದರು.