Advertisement

ಶಿಕ್ಷಕ ಸಮಾಜದ ಬೆನ್ನೆಲುಬು: ಗೋಪಾಲ ನಾಯಕ

05:18 PM Apr 13, 2018 | |

ವಿಜಯಪುರ: ರೈತರು ಈ ದೇಶದ ಬೆನ್ನೆಲುಬು. ಆದರೆ ಶಿಕ್ಷಕರು ಸಮಾಜದ ಬೆನ್ನೆಲಬು ಎಂದು ಪತ್ರಕರ್ತ ಗೋಪಾಲ ನಾಯಕ ಹೇಳಿದರು ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ ನಿರ್ಮಾಣಕ್ಕಾಗಿ ಜ್ಞಾನವಂತರನ್ನು ಸೃಷ್ಟಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದ್ದು ಆ ಕಾರ್ಯವನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ. 

Advertisement

 ಇದರಿಂದಾಗಿ ಸುಶಿಕ್ಷಿತ ಸಮಾಜವು ನಿರ್ಮಾಣವಾಗುತ್ತಿದೆ. ಪ್ರಾಚೀನ ಕಾಲದಿಂದ ಹಿಡಿದು ಇಂದಿನ ವರೆಗೂ ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಶಿಕ್ಷಕರ ಶ್ರಮ ಅಗತ್ಯವಾಗಿದೆ. ಸಮಾಜದಲ್ಲಿ ಅನುಕರಣೀಯ ಮಾದರಿ ನಾಯಕರೆಲ್ಲ ಮಹಾತ್ಮ ಎನಿಸಿಕೊಳ್ಳಲು ಪ್ರೇರಕ ಶಕ್ತಿ ಆದವರೇ ಶಿಕ್ಷಕರು ಎಂಬುದನ್ನು ಮರೆಯಬಾರದು ಎಂದರು.
 
ಉತ್ತಮ ನಾಗರೀಕರನ್ನಾಗಿ ನಿರ್ಮಾಣ ಮಾಡಿ ಸಮಾಜ ಹಾಗೂ ದೇಶ ಕಟ್ಟುವಲ್ಲಿ ಅಣಿಗೊಳಿಸಿದ ಶ್ರೇಯ ಶಿಕ್ಷಕರಿಗೆ ಸಲ್ಲುತ್ತದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಕರಲ್ಲಿ ಕೆಲವು ನ್ಯೂನ್ಯತೆ ಕಂಡುಬರುತ್ತಿದ್ದು, ಇದಕ್ಕೆ ಶಿಕ್ಷಣ ವ್ಯವಸ್ಥೆಯೆ ಕಾರಣವಾಗಿದೆ. ಕೇವಲ ಮಾಹಿತಿ ಬೋಧನೆಯನ್ನು ಮಾಡುವ ವ್ಯವಸ್ಥೆ ಬಂದಿರುವುದರಿಂದ ಶಿಕ್ಷಣದಲ್ಲಿನ ನೈತಿಕ ಗುಣಮಟ್ಟ ಕುಸಿಯುತ್ತಿದೆ. ಇದರಿಂದಾಗಿ ಮಕ್ಕಳಿಗೆ ನೀಡಬೇಕಾದ ನೈತಿಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ವಿಫಲರಾಗುತ್ತಿದ್ದಾರೆ.

ಕಾರಣ ಮಕ್ಕಳು ಕೇವಲ ರೋಬೋಟ್‌ಗಳಾಗಿ ಬೆಳೆಯುತ್ತಿದ್ದಾರ್ತ ಹೊರತು ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಿಲ್ಲ. ಆದ್ದರಿಂದ ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದು ನೈತಿಕ ಪ್ರಧಾನ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನೇತ್ರ ತಜ್ಞ ಡಾ| ಪ್ರಭುಗೌಡ ಪಾಟೀಲ ಮಾತನಾಡಿ, ಇಂದಿನ ಸಮಾಜದಲ್ಲಿ ಮಕ್ಕಳು ಉನ್ನತ ಸ್ಥಾನಕ್ಕೇರಲು ಶಿಕ್ಷಕರೆ ಪ್ರಧಾನ ಮೆಟ್ಟಿಲು. ಶಿಕ್ಷಕರು ಮಕ್ಕಳಲ್ಲಿ ಉತ್ತಮ ಆದರ್ಶನ ಚಿಂತನೆ ಬಿತ್ತಿ ಬೆಳೆಸುವವರೇ ಶಿಕ್ಷಕರು. ನೈತಿಕ ಮೌಲ್ಯ ಮೈಗೂಡಿಸಿಕೊಳ್ಳುವ ವ್ಯಕ್ತಿಯಿಂದ
ನಾಗರಿಕ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದರು.

ಜಿಲ್ಲಾ ಸಮನ್ವಯ ಅಧಿಕಾರಿ ಜೆ.ಟಿ. ತಳಕೇರಿ ಉಪನ್ಯಾಸ ನೀಡಿ, ಮೌಲ್ಯಯುತ ಶಿಕ್ಷಣವು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸಲಾಗಿದೆ. ಇದರ ಪರಿಣಾಮವಾಗಿಯೇ ಹಲವಾರು ಜನ ಮಾಹನ್‌ ನಾಯಕರು ನೇತಾರರು ಸಾಧಕರು ಹೊರಹೊಮ್ಮಿದ್ದಾರೆ. ನಳಂದಾ ಶಿಕ್ಷಣ ಕೇಂದ್ರದಿಂದ ಹಿಡಿದು ಇಂದಿನ ಆಧುನಿಕ ವಿಶ್ವ ವಿದ್ಯಾಲಯಗಳ ವರೆಗೂ ಶಿಕ್ಷಣ ವ್ಯವಸ್ಥೆ ಬೆಳವಣಿಗೆಯಾಗುತ್ತ ಸಾಗಿದೆ. 

Advertisement

ಇದರಲ್ಲಿ ಕೊಂಚ ನೈತಿಕ ಶಿಕ್ಷಣ ವ್ಯವಸ್ಥೆಯೂ ಸೇರಿಕೊಂಡರೆ ಜಗತ್ತಿನ ಶ್ರೇಷ್ಟ ಶಿಕ್ಷಣ ಪದ್ಧತಿಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 20 ಜನ ಶಿಕ್ಷಕರಿಗೆ ಅತ್ಯತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯೆಂಡಿಗೇರಿ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಚಲನಚಿತ್ರ ನಿರ್ದೇಶಕ ಶಿವು
ಜಮಖಂಡಿ, ಸಬಲಾ ಸಂಸ್ಥೆಯ ಅಧ್ಯಕ್ಷೆ ಡಾ| ಮಲ್ಲಮ್ಮ ಯಾಳವಾರ ಮಾತನಾಡಿದರು. ಡಾ.ಕಾಂತು ಇಂಡಿ ಸ್ವಾಗತಿಸಿದರು. ಪೃಥ್ವಿಶ್ರೀ ಇಂಡಿ ಪ್ರಾರ್ಥಿಸಿದರು. ಸಿದ್ಧಲಿಂಗ ಚೌಧರಿ ವಂದಿಸಿದರು. ಪ್ರೊ| ಮಂಜುನಾಥ ಜುನಗೊಂಡ ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next