ನಾಲ್ಕನೇ ದಿನದ “ಅತಿಕಾಯ ಮೋಕ್ಷಕ್ಕೆ’ ಭಾಗವತಿಕೆ ಮಾಡಿದವರು ರವಿಚಂದ್ರ ಕನ್ನಡಿಕಟ್ಟೆ. ಚೆಂಡೆ ಮದ್ದಳೆ ನುಡಿಸಿದವರು ರಾಮಪ್ರಸಾದ್ ವದ್ವ ಮತ್ತು ವಿನಯ ಅಚಾರ್ಯ ಕಡಬ. ರಾವಣನಾಗಿ ಹಿರಿಯರಾದ ಶಂಭು ಶರ್ಮ ವಿಟ್ಲ, ಅತಿಕಾಯನಾಗಿ ವಿಶ್ವೇಶ್ವರ್ ಭಟ್ ಸುಣ್ಣಂಬಳ, ಲಕ್ಷ್ಮಣನಾಗಿ ಭಾಸ್ಕರ ರೈ ಕುಕ್ಕವಳ್ಳಿ ಮತ್ತು ರಾಮನಾಗಿ ಸೇರಾಜೆ ಸೀತಾರಾಮ ಭಟ್ ಪಾತ್ರಗಳನ್ನು ನಿರ್ವಹಿಸಿದರು.
Advertisement
ಏರು ಪದಗಳಿಗೂ ಹೆಣ್ಣು ಮಕ್ಕಳ ಸ್ವರ ಹೊಂದಿಕೊಳ್ಳಬಲ್ಲದು ಎಂದು ತೋರಿಸಿಕೊಟ್ಟವರು ಕು| ಕಾವ್ಯಶ್ರೀ ಅಜೇರು ಮತ್ತು ಕು| ಅಮೃತಾ ಅಡಿಗ. ಐದನೇ ದಿನದ ಸುದರ್ಶನ ವಿಜಯ ಪ್ರಸಂಗದಲ್ಲಿ ಇವರಿಬ್ಬರೂ ತಮ್ಮ ಕಂಠಸಿರಿಯಿಂದ ಕಲಾಸಕ್ತರ ಮನ ತಣಿಸಿದರು. ಚೆಂಡೆ ಮದ್ದಳೆಯಲ್ಲಿ ಜಗನ್ನಿವಾಸ ರಾವ್ ಪುತ್ತೂರು ಮತ್ತು ಶ್ರೀಧರ ಪಡ್ರೆ ಸಹಕರಿಸಿದರು. ಮುಮ್ಮೇಳದಲ್ಲಿ ಸುದರ್ಶನನಾಗಿ ಉಜಿರೆ ಅಶೋಕ ಭಟ್,ಶತ್ರು ಪ್ರಸೂದನನಾಗಿ ಶಂಭು ಶರ್ಮ ವಿಟ್ಲ, ವಿಷ್ಣುವಾಗಿ ಜಬ್ಟಾರ್ ಸಮೋ ಸಂಪಾಜೆ, ಲಕ್ಷ್ಮಿಯಾಗಿ ವಿಷ್ಣು ಶವåì ವಾಟೆಪಡು³ ಮತ್ತು ದೇವೇಂದ್ರನಾಗಿ ಪಕಳಕುಂಜ ಶ್ಯಾಮ ಭಟ್ ಪ್ರದರ್ಶನ ನೀಡಿದರು.
Related Articles
Advertisement
ನಂತರ ನಡೆದ ಬಯಲಾಟ “ಇಂದ್ರಜಿತು’. ಪುತ್ತಿಗೆ ಭಾಗವತರಾಗಿ, ಎಂ. ಲಕ್ಷ್ಮೀಶ ಅಮ್ಮಣ್ಣಾಯ ಅಡೂರು ಗಣೇಶ ರಾವ್ ಹಿಮ್ಮೇಳದಲ್ಲಿ ಸಹಕರಿಸಿದರು. ಇಂದ್ರಜಿತುವಾಗಿ ಮಿಂಚಿನ ಸಂಚಾರ ಮಾಡಿದ ರಂಜಿತ ಎಲ್ಲೂರು ಇಲ್ಲಿಯೂ ಪ್ರಶಂಸಾರ್ಹ ಪ್ರದರ್ಶನವಿತ್ತರು. ಇವರ ಸಹೋದರಿ ಕು| ರಕ್ಷಿತಾ ಎಲ್ಲೂರು ಲಕ್ಷ್ಮಣನ ಪಾತ್ರ ನಿರ್ವಹಿಸಿ ಅಕ್ಕನ ಹಾಗೆ ತಾನೂ ಪ್ರದರ್ಶನ ನೀಡಬಲ್ಲೆ ಎಂದು ತೋರಿಸಿದ್ದಾರೆ. ಇತರ ಪಾತ್ರಗಳನ್ನು ರಾಮಚಂದ್ರ ಭಟ್ ಎಲ್ಲೂರು, ವನಿತಾ ಎಲ್ಲೂರು, ಜಯ ಪ್ರಕಾಶ್ ಹೆಬ್ಟಾರ್ , ಕು| ಪ್ರಕೃತಿ ,ಕು| ನಿಶಾ ನಿರ್ವಹಿಸಿದರು. ಎಲ್ಲೂರು ಕುಟುಂಬದ ತಂದೆ ತಾಯಿ ಮಕ್ಕಳ ಈ ಯಕ್ಷಗಾನ ಸೇವೆಗೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಯಿತು.
ರಸ ಋಷಿ ದೇರಾಜೆ ಸಭಾಂಗಣ, ರಸಿಕ ರತ್ನ ವಿಟ್ಲ ಜೋಶಿ ವೇದಿಕೆ, ವಿದ್ವಾನ್ ಪುಚ್ಚಕೆರೆ ಕೃಷ್ಣ$ ಭಟ್ ಸಂಸ್ಮರಣೆ, ಯಕ್ಷ ರಂಗಕ್ಕೆ ಕೊಡುಗೆ ನೀಡಿದ ಈ ಮಹಾನ್ ಚೇತನಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿರುವುದು ಸ್ತುತ್ಯಾರ್ಹವೆನಸಿತು.ವೆಂಕಟ್ರಮಣ ಭಟ್ ಪುಂಡಿಕಾç, ಸತೀಶ ಪುಣಿಂಚಿತ್ತಾಯ ಪೆರ್ಲ, ಶಾಂತಾರಾಮ ಕುಡ್ವ ಮೂಡಬಿದ್ರೆ ಮತ್ತು ಸದಾಶಿವ ರಾವ್ ನೆಲ್ಲಿಮಾರು ಇವರನ್ನು ಸಮ್ಮನಿಸಲಾಯಿತು. ಡಾ| ಎಂ. ಪ್ರಭಾಕರ ಜೋಶಿ ಸಂಸ್ಮರಣಾ ನುಡಿಯಾಡಿದರು. ರಾಧಾಕೃಷ್ಣ ಕಲ್ಚಾರ್ ಸಮಾರೋಪ ಭಾಷಣ ಮಾಡಿದರು.
ಕಲಾವಿದರನ್ನು ಕರೆದು, ಕ್ಲಪ್ತ ಸಮಯಕ್ಕೆ ಆರಂಭ ಮತ್ತು ಅಂತ್ಯಗೊಳಿಸುವಲ್ಲಿ ಕಾಠಿಣ್ಯ ತಳೆದ ಸಂಘಟಕ ಉಜಿರೆ ಅಶೋಕ ಭಟ್ ಮತ್ತು ಶೇಣಿ ವೇಣು ಗೋಪಾಲ ಭಟ್ ಶ್ರಮ ಅಭಿನಂದನೀಯ. ಸ್ಥಳವಿತ್ತು ಸಕಲ ವ್ಯವಸ್ಥೆ ಮಾಡಲು ಸಹಕರಿಸಿದ ಕ್ಷೇತ್ರದ ಮೊಕ್ತೇಸರ ಕೇಶವ ಆರ್. ವಿ. ಯವರ ಶ್ರಮ ಮತ್ತು ನೂರಾರು ಸಂರಕ್ಷಕ ಪೋಷಕರ ಕೊಡುಗೆ ಸಾರ್ಥಕವಾಗಿತ್ತು. ಮುಂದಿನ ವರ್ಷವೂ ಇಲ್ಲಿಯೇ ಸಪ್ತಾಹವಾಗಲಿ ಎಂಬ ಸಾರ್ವಜನಿಕರ ಮಾತು ಇದರ ಸಫಲತೆಗೆ ಸಾಕ್ಷಿ.
ಶಂಕರ್ ಸಾರಡ್ಕ