Advertisement

​​​​​​​ರಾಜ್ಯದ ಅತ್ಯುತ್ತಮ ಐಎಸ್‌ಟಿಇ ಘಟಕ ಪ್ರಶಸ್ತಿ

03:45 AM Feb 20, 2017 | Team Udayavani |

ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜು

Advertisement

ಬೆಳ್ತಂಗಡಿ: ದಿಲ್ಲಿಯ ಭಾರತೀಯ ತಾಂತ್ರಿಕ ಶಿಕ್ಷಣ ಸಮಾಜ (ಐಎಸ್‌ಟಿಇ) ವತಿಯಿಂದ ನೀಡುವ ಪ್ರಶಸ್ತಿಗಳ ಪೈಕಿ ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿಗೆ ಕರ್ನಾಟಕದ ಅತ್ಯುತ್ತಮ ಘಟಕ ಪ್ರಶಸ್ತಿ ಲಭಿಸಿದೆ.

ಪಂಜಾಬಿನ ಲೂಧಿಯಾನದಲ್ಲಿ ನಡೆದ 46ನೇ ರಾಷ್ಟ್ರೀಯ ವಾರ್ಷಿಕ ಕಾರ್ಯಕಾರಿಣಿಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ| ಕೆ. ಸುರೇಶ್‌ ಪ್ರಶಸ್ತಿ ಸ್ವೀಕರಿಸಿದರು. ಈ ಹಿಂದೆಯೂ ಕಾಲೇಜು 2 ಬಾರಿ ರಾಜ್ಯ ಮಟ್ಟದಲ್ಲಿ ಉತ್ತಮ ಘಟಕ ಪ್ರಶಸ್ತಿ ಪಡೆದಿದೆ. ಕಾಲೇಜಿನ ಐಎಸ್‌ಟಿಇ ಘಟಕ ಉಪನ್ಯಾಸಕರು, ವಿದ್ಯಾರ್ಥಿಗಳಿಗಾಗಿ ಕೌಶಲಾಭಿವೃದ್ಧಿ ಕಾರ್ಯಾಗಾರ ನಡೆಸಿ ಕೊಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next