Advertisement
ಕಳೆದ ತಿಂಗಳು ಪ್ರಯಾಣಿಕರ ವಾಹನ (ಪಿ.ವಿ.) ಹಾಗೂ ದ್ವಿಚಕ್ರ ವಾಹನಗಳು ದೇಶಾದ್ಯಂತ 18,25,148 ಮಾತ್ರ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,45,223 ವಾಹನಗಳು ಮಾರಾಟವಾಗಿದ್ದವು. ಈ ಹಿಂದೆ, 2000ರ ಡಿಸೆಂಬರ್‌ನಲ್ಲಿ ವಾಹನಗಳ ಮಾರಾಟ ಶೇ. 21.81ರಷ್ಟು ಇಳಿಮುಖವಾಗಿ ಆಟೊಮೊಬೈಲ್ ರಂಗ ಶೋಚನೀಯ ಸ್ಥಿತಿಗೆ ತಲುಪಿತ್ತು. ಇನ್ನು, ಕಾರು ಇನ್ನಿತರ ಪ್ರಯಾಣಿಕರ ಸಾಗಾಣಿಕೆ ವಾಹನಗಳ ಮಾರಾಟ ಶೇ. 30ರಷ್ಟು ಇಳಿಮುಖವಾಗಿದೆ. ಕಳೆದ ಜುಲೈನಲ್ಲಿ 2.90 ಲಕ್ಷ ವಾಹನಗಳು ಮಾರಾಟವಾಗಿದ್ದರೆ, ಈ ವರ್ಷ ಜುಲೈನಲ್ಲಿ 2 ಲಕ್ಷ ವಾಹನ ಮಾತ್ರ ಮಾರಾಟವಾಗಿವೆ. 2000ನೇ ಡಿಸೆಂಬರ್‌ನಲ್ಲಿ ಶೇ. 35ರಷ್ಟು ಮಾರಾಟ ಇಳಿಮುಖ ವಾಗಿತ್ತು ಎಂದು ಎಸ್‌ಐಎಎಂ ವಿವರಿಸಿದೆ. Advertisement
ದುಸ್ಥಿತಿಗೆ ಬಂದು ತಲುಪಿದ ಆಟೊಮೊಬೈಲ್ ಕ್ಷೇತ್ರ
11:13 AM Aug 14, 2019 | mahesh |
Advertisement
Udayavani is now on Telegram. Click here to join our channel and stay updated with the latest news.