Advertisement

ಬೀದರನಲ್ಲಿ ನಾಳೆ ಕುರಿಗಳ ಹರಾಜು ಪ್ರಕ್ರಿಯೆ

12:43 PM Feb 26, 2018 | Team Udayavani |

ಬೀದರ: ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯದ ಶೈಕ್ಷಣಿಕ ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗದ ಹತ್ತಿರ ಫೆ. 27ರಂದು 13 ಗಂಡು ಮತ್ತು 3 ಹೆಣ್ಣು ಕುರಿಗಳು ಸೇರಿದಂತೆ ಒಟ್ಟು 16 ಕುರಿಗಳ ಹರಾಜು ಪ್ರಕ್ರಿಯೆ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಡೆಯುವ ಈ ಹರಾಜಿನಲ್ಲಿ ಭಾಗವಹಿಸಲು ಸಾವಿರ ಠೇವಣಿ ಹಣವನ್ನು ಹರಾಜು ದಿನಕ್ಕಿಂತ ಮುಂಚಿತವಾಗಿ ಭರಿಸಬೇಕು.

Advertisement

ಠೇವಣಿ ಭರಿಸಿದ ಒಬ್ಬರಿಗೆ ಮಾತ್ರ ಲಿಲಾವಿನಲ್ಲಿ ಅವಕಾಶವಿರುತ್ತದೆ. ಹರಾಜಿನ ವೇಳೆ ಬಂದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಯಶಸ್ವಿ ಬಿಡ್ಡುದಾರರು ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರನ ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿಗಳಲ್ಲಿ ಲಿಲಾವಿನ ಹಣವನ್ನು ಪಾವತಿಸಿ ರಸೀದಿ ಪಡೆಯಬೇಕು. ತಪ್ಪಿದಲ್ಲಿ ತಮಗೆ ಇಷ್ಟವಿಲ್ಲವೆಂದು ಪರಿಗಣಿಸಿ ನಂತರದ ಕ್ರಮಾಂಕದಲ್ಲಿರುವ ರೈತರಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಯಶಸ್ವಿ ಬಿಡ್ಡುದಾರರನ್ನು ಹೊರತುಪಡಿಸಿ ಉಳಿದ ಇತರರ ಠೇವಣಿ ಹಣವನ್ನು ಹರಾಜು ಪ್ರಕ್ರಿಯೆ ನಂತರ ಹಿಂತಿರುಗಿಸಲಾಗುವುದು. ಯಶಸ್ವಿ ಬಿಡ್ಡುದಾರರು ಹಣ ಭರಿಸದಿದ್ದಲ್ಲಿ ಠೇವಣಿಯ ಹಣವನ್ನು ಮುಟ್ಟುಗೋಲು ಹಾಕಲಾಗುತ್ತದೆ. ಲಿಲಾವಿನಲ್ಲಿ ಜಾನುವಾರುಗಳಿಗೆ ಸೂಕ್ತ ಬೆಲೆ ಬರದೇ ಇದ್ದಲ್ಲಿ ಜಾನುವಾರು ಮರಳಿ ಪಡೆಯಲಾಗುತ್ತದೆ. ಯಾವುದೇ ತಕರಾರು ಬಂದಲ್ಲಿ ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಅವರ ನಿರ್ಣಯ ಅಂತಿಮವಾಗಿರುತ್ತದೆ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next