Advertisement

ಬದಲಾಗದ ಜನರ ವರ್ತನೆ ಅಪಾಯವಿನ್ನೂ ದೂರವಾಗಿಲ್ಲ

01:46 PM May 26, 2020 | mahesh |

ಲಾಕ್‌ಡೌನ್‌ ಸಡಿಲಿಕೆಯು ಭಾರತದಂಥ ಬೃಹತ್‌ ಜನಸಂಖ್ಯೆಯುಳ್ಳ ರಾಷ್ಟ್ರಕ್ಕೆ ಎಷ್ಟು ಅನಿವಾರ್ಯವೋ ಅಷ್ಟೇ ಅಪಾಯಕಾರಿಯೂ ಹೌದು ಎನ್ನುವುದೇ ದುರಂತ. ಆದರೆ, ಆರ್ಥಿಕತೆಯ ಯಂತ್ರ ಚಲನಶೀಲವಾಗಿರುವುದು ಅಗತ್ಯ ಎಂದಾಕ್ಷಣ ಜನರೆಲ್ಲ ರಸ್ತೆಗಿಳಿದು ಹೇಗೆ ಬೇಕಾದರೂ ವರ್ತಿಸಬಹುದು ಎಂದರ್ಥವಲ್ಲ.

Advertisement

ಭಾರತವೀಗ ಕೋವಿಡ್ ದಿಂದ ಅತಿಹೆಚ್ಚು ಪೀಡಿತವಾಗಿರುವ ಟಾಪ್‌ಟೆನ್‌ ರಾಷ್ಟ್ರಗಳಲ್ಲಿ ಒಂದಾಗಿದೆ. ಲಾಕ್‌ಡೌನ್‌ ನಿರ್ಬಂಧಗಳು ಸಡಿಲಿಕೆಯಾಗಿ, ಆರ್ಥಿಕ ಚಟುವಟಿಕೆಗಳು ಮತ್ತೆ ಹಳಿ ಏರುತ್ತಿರುವಂತೆಯೇ ನಿತ್ಯ ಪ್ರಕರಣಗಳ ಸಂಖ್ಯೆಯಲ್ಲೂ ವಿಪರೀತ ಏರಿಕೆ ಕಾಣುತ್ತಿದೆ. ಕಳೆದ ಶುಕ್ರವಾರದಿಂದ ದೇಶದಲ್ಲಿ ನಿತ್ಯ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಸೋಂಕು ಪ್ರಸರಣ ಪ್ರಮಾಣ ಭಾರತದಲ್ಲಿ  ಕಡಿಮೆಯಾಗುತ್ತಲೇ ಇಲ್ಲ. ಆದರೆ, ಇದಿನ್ನೂ ಆರಂಭಿಕ ಹಂತವಷ್ಟೇ, ಜುಲೈ ತಿಂಗಳ ವೇಳೆಗೆ ಸೋಂಕಿತರ ಸಂಖ್ಯೆ ಮಿತಿ ಮೀರಲಿದೆ ಎಂಬ ವೈಜ್ಞಾನಿಕ ವಲಯದ ಎಚ್ಚರಿಕೆಯು ನಿಜಕ್ಕೂ ಆತಂಕಕಾರಿಯಾದದ್ದು.

ಆದಾಗ್ಯೂ, ಭಾರತವೆಂದಷ್ಟೇ ಅಲ್ಲ, ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಸಡಿಲಿಕೆ ತಂದ ತಕ್ಷಣವೇ ಅನೇಕ ದೇಶಗಳಲ್ಲಿ ಸೋಂಕಿತರ ಪ್ರಕರಣಗಳು ಏರಿಕೆಯಾಗಿರುವುದನ್ನು-ಆಗುತ್ತಿರುವುದನ್ನು ನೋಡಬಹುದು. ಉದಾಹರಣೆಗೆ, ದಕ್ಷಿಣ ಕೊರಿಯಾದಲ್ಲಿ ಬಾರ್‌ ಹಾಗೂ ಕ್ಲಬ್‌ಗಳ ಮೇಲಿನ ನಿರ್ಬಂಧಗಳನ್ನು ತಗ್ಗಿಸುತ್ತಿದ್ದಂತೆಯೇ ಆ ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಇನ್ನು ಚೀನದ ವುಹಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆಯಾದ ಮೇಲೆ ಮತ್ತೆ ಸೋಂಕು ಕಾಣಿಸಿಕೊಂಡಿದೆ.

ಲಾಕ್‌ಡೌನ್‌ ಸಡಿಲಿಕೆಯು ಭಾರತದಂಥ ಬೃಹತ್‌ ಜನಸಂಖ್ಯೆಯುಳ್ಳ ರಾಷ್ಟ್ರಕ್ಕೆ ಎಷ್ಟು ಅನಿವಾರ್ಯವೋ ಅಷ್ಟೇ ಅಪಾಯಕಾರಿಯೂ ಹೌದು ಎನ್ನುವುದೇ ದುರಂತ. ಆದರೆ, ಆರ್ಥಿಕತೆಯ ಯಂತ್ರ ಚಲನಶೀಲವಾಗಿರುವುದು ಅಗತ್ಯ ಎಂದಾಕ್ಷಣ ಜನರೆಲ್ಲ ರಸ್ತೆಗಿಳಿದು ಹೇಗೆ ಬೇಕಾದರೂ ವರ್ತಿಸಬಹುದು ಎಂದರ್ಥವಲ್ಲ. ಮನುಷ್ಯನ ಮನಸ್ಸು ಹೇಗಿರುತ್ತದೆ ಎಂದರೆ, ಎಲ್ಲರೂ ಏನು ಮಾಡುತ್ತಾರೋ ಅದೇ ಸರಿಯಾದ ಮಾರ್ಗ ಎಂದೇ ಭಾವಿಸುತ್ತದೆ. ರಸ್ತೆಗಳು ಖಾಲಿ ಇದ್ದಾಗ, ಹೊರಗೆ ಅಡಿಯಿಡಲು ಹೆದರುವ ವ್ಯಕ್ತಿ, ರಸ್ತೆಗಳು ತುಂಬಿದಾಗ, ತಾನೂ ಅದರಲ್ಲಿ ನಿರ್ಭಯವಾಗಿ ತೂರಿಕೊಳ್ಳುತ್ತಾನೆ. ಕೊರೊನಾಕ್ಕೆ ಲಸಿಕೆ ಸಿಗುತ್ತದೋ ಇಲ್ಲವೋ ಎನ್ನುವುದೇ ಅನುಮಾನವಾಗಿರುವಾಗ, ಎಲ್ಲವೂ ಸರಿಹೋಯಿತು ಎಂಬಂತೆ ಜನರು ವರ್ತಿಸುತ್ತಿರುವುದು ಸರಿಯಲ್ಲ. ಕೊರೊನಾದ ಜತೆಗೇ ಬದುಕಬಹುದಾದ ಅನಿವಾರ್ಯತೆ ನಮಗೆ ಎದುರಾಗಬಹುದು ಎಂದರೆ, ಕೊರೊನಾದ ಅಪಾಯ ಕಡಿಮೆ ಇರುತ್ತದೆ ಎಂದರ್ಥವಲ್ಲ. ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಲೇ ಬದುಕಬೇಕಾದ, ಹೊಸ ಜೀವನಶೈಲಿಯನ್ನು ಚಾಚೂ ತಪ್ಪಿಸದೇ ಅನುಸರಿಸಬೇಕಾದ ಅಗತ್ಯವಿರುತ್ತದೆ ಎಂದರ್ಥ. ನೆನಪಿರಲಿ, ಅಪಾಯ ಇನ್ನೂ ದೂರವಾಗಿಯೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next