Advertisement

ಗಾಂಜಾ ಮಾರಾಟ ಯತ್ನ: ಆರೋಪಿ ಪೊಲೀಸ್‌ ವಶ

03:02 AM Jun 05, 2019 | sudhir |

ಬಂಟ್ವಾಳ: ಬಿ. ಮೂಡ ಗ್ರಾಮದ ತಲಪಾಡಿ ದುರ್ಗಾ ಗ್ಯಾರೇಜ್‌ ಸನಿಹ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ಜೂ. 4ರಂದು ಬಂಧಿಸಿದ್ದಾರೆ. ಆತನಿಂದ 1.896 ಕೆ.ಜಿ. ಗಾಂಜಾ, ಒಂದು ಮೊಬೈಲ್, 110 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

Advertisement

ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಸಂಶುದ್ದೀನ್‌ (25) ಆರೋಪಿ. ಖಚಿತ ಮಾಹಿತಿಯನ್ನಾಧರಿಸಿ ಆಧರಿಸಿ ಬಂಟ್ವಾಳ ನಗರ ಠಾಣೆಯ ಎಸ್‌ಐ ಚಂದ್ರಶೇಖರ್‌ ಮತ್ತು ಸಿಬಂದಿ ಈ ಕಾರ್ಯಾಚರಣೆ ನಡೆಸಿದ್ದರು.

ಆರೋಪಿಯು ಉಳ್ಳಾಲದ ಮಿಸ್ಬಾನಿಂದ ಉಪ್ಪಿನಂಗಡಿಯ ಓರ್ವ ವ್ಯಕ್ತಿಯ ಮೂಲಕ ಗಾಂಜಾವನ್ನು ಪಡೆದು ಮಾರಾಟ ಮಾಡುತ್ತಿರುವುದಾಗಿ ತನಿಖೆಯ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next