Advertisement

ಸಚಿವರ ಮುನಿಸು ಶಮನ ಮಾಡಲು ಎಚ್‌ಡಿಕೆ ಯತ್ನ

06:50 AM Jun 11, 2018 | Team Udayavani |

ಮೈಸೂರು: ತಮಗಿಷ್ಟವಾದ ಖಾತೆ ಸಿಗಲಿಲ್ಲ ಎಂದು ಮುನಿಸಿಕೊಂಡಿರುವ ಸಚಿವರ ಮುನಿಸನ್ನು ಶಮನ ಮಾಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

Advertisement

ಇಲ್ಲಿನ ಇನ್ಫೋಸಿಸ್‌ ಆವರಣದಲ್ಲಿ ನಡೆಯುತ್ತಿರುವ ತಮ್ಮ ಪುತ್ರ ನಿಖೀಲ್‌ ನಾಯಕತ್ವದ ಚಲನಚಿತ್ರದ ಚಿತ್ರೀಕರಣ
ವೀಕ್ಷಣೆಗಾಗಿ ಶನಿವಾರ ರಾತ್ರಿ ಮೈಸೂರಿಗೆ ಖಾಸಗಿ ಭೇಟಿ ನೀಡಿದ್ದ ಕುಮಾರಸ್ವಾಮಿ, ಬಳಿಕ ತಾವು ತಂಗಿದ್ದ ಖಾಸಗಿ ಹೋಟೆಲ್‌ಗೆ ಸಣ್ಣ ನೀರಾವರಿ ಖಾತೆ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮೇಲುಕೋಟೆ ಶಾಸಕರಾದ ಸಚಿವ ಸಿ.ಎಸ್‌.ಪುಟ್ಟರಾಜು ಅವರನ್ನು ಕರೆಸಿಕೊಂಡು ಅವರೊಂದಿಗೆ ಊಟ ಮಾಡಿ, ತಡರಾತ್ರಿವರೆಗೆ ಅವರೊಂದಿಗೆ ಚರ್ಚಿಸಿ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

ಉನ್ನತ ಶಿಕ್ಷಣ ಖಾತೆ ನೀಡಿರುವ ಬಗ್ಗೆ ಅಸಮಾಧಾನಗೊಂಡು ತಮಗೆ ನೀಡಿರುವ ಸರ್ಕಾರಿ ಕಾರನ್ನು ಪಡೆಯದೆ ಪ್ರತಿಭಟನೆ ವ್ಯಕ್ತಪಡಿಸಿರುವ ಸಚಿವ ಜಿ.ಟಿ.ದೇವೇಗೌಡ ಅವರು ಅಜ್ಞಾತ ಸ್ಥಳದಲ್ಲಿರುವುದರಿಂದ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿಲ್ಲ ಎಂದು ತಿಳಿದುಬಂದಿದ್ದು, ತಮ್ಮ ಮೈಸೂರು ಪ್ರವಾಸದ ಬಗ್ಗೆ ರಹಸ್ಯ ಕಾಪಾಡಿಕೊಂಡು ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಬೆಳಗ್ಗೆಯೇ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

ಪದಾಧಿಕಾರಿಗಳ ರಾಜೀನಾಮೆ
ಬೀದರ:
ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಪದಾ ಧಿಕಾರಿಗಳು ಸೇರಿ ವಿವಿಧ ವಿಭಾಗದ ಎರಡು ಸಾವಿರಕ್ಕೂ ಅಧಿ ಕ ಸದಸ್ಯರು ಸ್ವಯಂ ಪ್ರೇರಿತವಾಗಿ ಸಾಮೂಹಿಕ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರಅವರಿಗೆ ಸಲ್ಲಿಸಿದ್ದಾರೆ. ಈ ಕುರಿತು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಪಪ್ಪು
ಪಾಟೀಲ ಖಾನಾಪುರ ಭಾನುವಾರ ಸುದ್ದಿಗೋಷ್ಠಿ ನಡೆಸಿ, ಸಚಿವ ಸ್ಥಾನ ದೊರೆಯದಿದ್ದರೆ ಗ್ರಾಪಂ, ಜಿಪಂ ಸೇರಿ ವಿವಿಧ ಸದಸ್ಯರು ಕೂಡ ರಾಜೀನಾಮೆ ನೀಡಲಿದ್ದಾರೆಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next