Advertisement

ಶಾಲೆಗಳ ಮೇಲೆ ದಾಳಿ ಸೇನೆ ಘನತೆಗೆ ತಕ್ಕುದಲ್ಲ

05:20 AM Jul 21, 2017 | Team Udayavani |

ಹೊಸದಿಲ್ಲಿ/ವಾಷಿಂಗ್ಟನ್‌: ಗಡಿಯಲ್ಲಿ ಶಾಲೆಗಳ ಮೇಲೆ ಪಾಕಿಸ್ಥಾನ ಸೇನೆ ಉದ್ದೇಶಪೂರ್ವಕ ದಾಳಿ ನಡೆಸುತ್ತಿರುವ ಬಗ್ಗೆ ಭಾರತೀಯ ಸೇನೆ ಕೆಂಡಾಮಂಡಲವಾಗಿದ್ದು, ಪಾಕ್‌ಗೆ ಎಚ್ಚರಿಕೆ ನೀಡಿದೆ. 

Advertisement

ಸೇನಾ ಕಾರ್ಯಾಚರಣೆ ಕುರಿತ ಲೆ| ಜ| ಎ.ಕೆ. ಭಟ್‌ ಅವರು ಪಾಕ್‌ ಸಹವರ್ತಿಗೆ ಹಾಟ್‌ಲೆçನ್‌ ಮೂಲಕ ಕರೆ ಮಾಡಿದ್ದು, ಇಂತಹ ದಾಳಿ ಸೇನೆ ಘನತೆ, ಅರ್ಹತೆಗೆ ತಕ್ಕುದಲ್ಲ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಪೂರಕವಾಗಿ ಉತ್ತರಿಸಿದ ಪಾಕ್‌ನ ಮೆ| ಜ| ಶಾಹಿರ್‌ ಶಮ ಶಾದ್‌ ಮಿರ್ಜಾ ಈ ಬಗ್ಗೆ ತಮ್ಮ ಸೇನಾ ಪಡೆಗೆ ನಿಯಂತ್ರಣ ವಿಧಿಸುವುದಾಗಿ ಹೇಳಿದ್ದಾಗಿ ಸೇನಾ ವಕ್ತಾರರು ತಿಳಿಸಿದ್ದಾರೆ. ಇತ್ತೀಚೆಗೆ ನೌಶೆರಾ ಮತ್ತು ರಜೌರಿ ಜಿಲ್ಲೆಗಳಲ್ಲಿ ಶಾಲೆಗಳ ಮೇಲೆ, ವಿದ್ಯಾರ್ಥಿಗಳನ್ನು ಗುರಿ ಯಾಗಿಸಿ ಪಾಕ್‌ ಪಡೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸೇನೆ ಪಾಕ್‌ಗೆ ಎಚ್ಚರಿಕೆ ನೀಡಿದೆ. ಅಲ್ಲದೇ ತಾನು ಆದಷ್ಟೂ ನಾಗರಿಕ ನೆಲೆಗಳನ್ನು ಗುರಿಯಾಗಿಸದೆ ನಿಯಂತ್ರಣ ಹೊಂದಿರುವುದಾಗಿ, ಇದನ್ನು ಪಾಕ್‌ ಕಡೆಯಿಂದಲೂ ಬಯಸುವುದಾಗಿ ಹೇಳಿದೆ. 

ಪಾಕ್‌ಗೆ ಅಮೆರಿಕ ನೆರವು ಇನ್ನಷ್ಟು ಕಠಿನ: ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ಹಣಕಾಸು ನೆರವಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಕಾರಣ ನೆರವಿನ ನಿಯಮಗಳನ್ನು ಕಠಿನಗೊಳಿಸಲು ಅಮೆರಿಕದ ಸಂಸತ್‌ನ ಅನುದಾನ ಸಮಿತಿ ನೂತನ ನೀತಿ ಹೊರತಂದಿದೆ. ಇದರಲ್ಲಿ ಕೆಲ ಷರತ್ತುಗಳನ್ನು ಹಾಕಲಾಗಿದ್ದು, ಉಗ್ರ ಸಂಘಟನೆಗಳ ವಿರುದ್ಧ ಕ್ರಮಕ್ಕೆ ವಿಫ‌ಲವಾಗಿದ್ದಲ್ಲಿ ನೆರವು ನೀಡಲ್ಲ ಎಂದು ಹೇಳಲಾಗಿದೆ.  

ಎಟಿಎಂನಂತೆ ಬಳಸಿದ ಪಾಕ್‌: ಪಾಕ್‌ ಅಮೆರಿಕವನ್ನು ಬೇಕಾಬಿಟ್ಟಿ ಎಟಿಎಂನಂತೆ ಬಳಸಿದ್ದು, ಕೋಟ್ಯಂತರ ನೆರವು ಪಡೆದು ಕೊಂಡಿದೆ. ಇದು ಪಾಕ್‌ ಸೇನೆ ಕಿಸೆಗೇ ಸೇರುತ್ತಿದ್ದು, ಜನರ ಪಾಲಿಗೆ ಏನೂ ಇರಲಿಲ್ಲ ಎಂದು ಅಮೆರಿಕದ ರಕ್ಷಣಾ ಗುತ್ತಿಗೆದಾರ ರೇಮಂಡ್‌ ಡೇವಿಸ್‌ “ದಿ ಕಾಂಟ್ರಾಕ್ಟರ್‌’ ಪುಸ್ತಕದಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next